Breaking News

ವಿಬಿ ಜಿ ರಾಮ್ ಜಿ ವಿರುದ್ಧದ ನಿರ್ಣಯ ಸದನದಲ್ಲಿ ಅಂಗೀಕಾರ

Spread the love

ಬೆಂಗಳೂರು: ವಿಧಾನಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗದ ನಡುವೆ ವಿಬಿ-ಜಿ ರಾಮ್ ಜಿ ಬಿಲ್ ವಿರೋಧಿಸಿ ನಿರ್ಣಯವನ್ನು ಸರ್ಕಾರ ಪಾಸ್ ಮಾಡಿಕೊಂಡಿದೆ. ರಾಮನ ಹೆಸರು ಇರೋದಕ್ಕೆ ಕಾಂಗ್ರೆಸ್ ವಿರೋಧಿಸ್ತಿದೆ ಎಂದ ಯತ್ನಾಳ್, ಮನ್ರೇಗಾದಲ್ಲಿ ನ್ಯೂನತೆಗಳಿವೆ. ವಿಬಿ-ಜಿ ರಾಮ್‌ಜಿ ) ವಾಪಸ್ ಪಡೆಯಬಾರದು ಅಂತ ಆಗ್ರಹಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತಾಡಿ, ಅಡ್ವಾಣಿಯವರೇ ನರೇಗಾ ಯೋಜನೆಯನ್ನ ಹೊಗಳಿದ್ದರು. ಕಾರ್ಮಿಕರ ಬದುಕಿನ ಬಗ್ಗೆ ವರುಣ್ ಗಾಂಧಿ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾಗ, ನರೇಗಾ ಪಾರದರ್ಶಕವಾಗಿದೆ ಅಂತ ಕೇಂದ್ರ ಸರ್ಕಾರವೇ ಉತ್ತರ ಕೊಟ್ಟಿತ್ತು. ವಿಬಿ ಜಿ ರಾಮ್ ಜಿ ಕಾಯ್ದೆ ಒಕ್ಕೂಟ ವಿರೋಧಿ, ಸಂವಿಧಾನ ವಿರೋಧಿ. ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೊರೆಸುವ ಸಂಚಿನ ಕಾಯ್ದೆ ಅಂದರು. ನಿರ್ಣಯ ಅಂಗೀಕಾರಕ್ಕೆ ಮನವಿ ಮಾಡಿದರು. ಆದರೆ, ಪ್ರಿಯಾಂಕ್ ಖರ್ಗೆ ಸುಳ್ಳು ಹೇಳ್ತಿದ್ದಾರೆ ಅಂತ ಆರಗ ಜ್ಞಾನೇಂದ್ರ ಆಕ್ಷೇಪಿಸಿದರು. 

ಅಶೋಕ್ ಸಿಡಿದೆದ್ದು, ನರೇಗಾ ಲೂಟಿ ತಪ್ಪಿಸಲು ವಿಬಿ ಜಿ ರಾಮ್ ಜಿ ತರಲಾಗಿದೆ. ಸರ್ಕಾರದ ನಿರ್ಣಯಕ್ಕೆ ನಮ್ಮ ವಿರೋಧ ಇದೆ. ನಿರ್ಣಯ ವಿರೋಧಿಸಿ ಸಭಾತ್ಯಾಗ ಮಾಡ್ತೇವೆ ಅಂತ ಸರ್ಕಾರದ ನಿರ್ಣಯ ಪ್ರತಿ ಹರಿದು ಹಾಕಿ ಹೊರನಡೆದರು. ಗದ್ದಲದ ನಡುವೆ ಡಿಸಿಎಂ ಡಿಕೆಶಿ ಮಾತಾಡಿ, ವಿಬಿ ಜಿ ರಾಮ್ ಜಿ ಜಾರಿ ಮಾಡಲು ಅಸಾಧ್ಯ ಆಗಿರೋ ಕಾಯ್ದೆ. ಮನ್ರೇಗಾ ಮರು ಜಾರಿ ಆಗಬೇಕು ಅಂದರು.

ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯವನ್ನು ಅಂಗೀಕರಿಸುವಂತೆ ಸಿಎಂ ಮನವಿ ಮಾಡಿದರು. ನಿರ್ಣಯ ಅಂಗೀಕಾರವಾಯ್ತು. ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ನಾಳೆ ನಿರ್ಣಯವನ್ನು ಸರ್ಕಾರ ಕಳಿಸಿಕೊಡಲಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ