Breaking News

ವಿಧಾನಸಭೆಯಲ್ಲಿ ʻಕುರ್ಚಿ ಕದನʼ ಪ್ರಸ್ತಾಪ; ಸಿಎಂ – ಡಿಸಿಎಂ ಒಗ್ಗಟ್ಟು ಪ್ರದರ್ಶನ

Spread the love

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಪವರ್ ಶೇರ್ ವಿಚಾರ ಚರ್ಚೆಗೆ ಬಂದಾಗ ಸಿಎಂ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌  ಒಗ್ಗಟ್ಟು ಪ್ರದರ್ಶಿಸಿ ವಿಪಕ್ಷಗಳಿಗೆ ಟಕ್ಕರ್ ಕೊಟ್ಟ ಪ್ರಸಂಗ ನಡೆಯಿತು.

ನಾನು ಹಾಗೂ ಸಿಎಂ ಪರಸ್ಪರರ ಕಷ್ಟದಲ್ಲಿ ಜೊತೆಯಾಗಿ ನಿಂತವರು. ಮುಂದೆಯೂ ಕಷ್ಟದಲ್ಲಿ ಪರಸ್ಪರ ಜೊತೆಯಾಗ್ತೇವೆ. ಸಿದ್ದರಾಮಯ್ಯ ನನ್ನ ಪರ ಇದ್ದಾರೆ. ನಾವಿಬ್ರೂ ಹೀಗೇ ಜೊತೆಯಾಗಿ ಇರ್ತೀವಿ. ಏನೇ ತೀರ್ಮಾನ ಇದ್ರೂ ಪಕ್ಷ ಮಾಡುತ್ತೆ. 2028ಕ್ಕೆ ಏನಾಗುತ್ತೆ ಅಂತ ನೋಡೋಣ ಎಂದು ಡಿಕೆಶಿ ಹೇಳಿದ್ರು.

ಡಿಕೆಶಿ ವೈರಾಗ್ಯದ ಮಾತಾಡಿಲ್ಲ, ವಾಸ್ತವಿಕ ಮಾತಾಡಿದ್ದಾರೆ, ಬಿಜೆಪಿ (BJP) ಆರೋಪಕ್ಕೆ ಸ್ಪಷ್ಟತೆ ಕೊಟ್ಟಿದ್ದಾರೆ ಅಂತ ಸಿಎಂ ಸಮರ್ಥಿಸಿಕೊಂಡ್ರು. ರಾಜ್ಯಪಾಲರ ಭಾಷಣ ಮೇಲೆ ನಡೆದ ಚರ್ಚೆಗೆ ಉತ್ತರ ಕೊಡುವಾಗ ಸಿಎಂ ಸಿದ್ದರಾಮಯ್ಯನವ್ರು ತಮ್ಮ ಹಾಗೂ ಡಿಕೆಶಿ ಮಧ್ಯೆ ಜಗಳ ಇದೆ ಅಂತ ಅಶೋಕ್ ಆರೋಪ ಬಗ್ಗೆ ಪ್ರಸ್ತಾಪಿಸಿದ್ರು. ನನ್ನ ಡಿಕೆಶಿ ಮಧ್ಯೆ ಜಗಳ ಇದೆ ಅಂತ ಆರೋಪಿಸಿದ್ದಾರೆ, ಅಂದ ಸಿಎಂ ಪಕ್ಕದಲ್ಲೇ ಕೂತಿದ್ದ ಡಿಕೆಶಿ ಕಡೆ ನೋಡಿ ನಿನಗೂ-ನನಗೂ ಹಾಲಾಹಲ ಇದೆ ಅಂತೆ ಕಣಯ್ಯ ಅಂದ್ರು.

ಈ ವೇಳೆ ಡಿಕೆಶಿ, ಸಮಯ ಅದಕ್ಕೆ ಉತ್ತರ ಕೊಡುತ್ತೆ ಬಿಡಿ ಸರ್ ಅಂದ್ರು. ಆಗ ಅಶೋಕ್ ಮಧ್ಯೆಪ್ರವೇಶಿಸಿ, ಕರೆಕ್ಟ್, ಒಂದು ಮಾತು ನೂರು ಅರ್ಥ, ಇದು ಡಿಕೆಶಿ ಸ್ಟೈಲ್. ಸಮಯ ಉತ್ತರ ಕೊಡುತ್ತೆ ಅಂತ ಹೇಳಿದ್ದಾರಲ್ಲ, ಆ ಸಮಯ ಯಾವಾಗ ಬರುತ್ತೆ ಅಂತ ಹೇಳಲಿ ಅಂತ ಕುಟುಕಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಂತೋಷ್ ಲಾಡ್ ಗೆ ನೀನು ಯಾರ ಕಡೆ? ಯಾರೋ ನನಗೆ ಹೇಳಿದ್ರು, ಡಿಕೆಶಿ ಕಡೆ 56 ಶಾಸಕರು ಇದ್ದಾರೆ ಅಂತೆ. ಆದ್ರೆ ಸಂತೋಷ್ ಲಾಡ್ ಅಂಥವರು ಬೆಳಗ್ಗೆ ಅಲ್ಲಿ ರಾತ್ರಿ ಇಲ್ಲಿ ಇರ್ತಾರೆ. ಅದಕ್ಕೆ ಡಿಕೆಶಿಗೆ ಲಾಡ್ ಅಂಥವರನ್ನ ನೋಡಿ ಯಾರು ಯಾರ ಕಡೆ ಇದ್ದಾರೆ ಅಂತ ಗೊಂದಲ ಆಗಿದೆಯಂತೆ ಅಂತ ಅಶೋಕ್ ಸಂತೋಷ್ ಲಾಡ್ ಕಾಲೆಳೆದ್ರು.

ಅಶೋಕ್ ಮಾತಿಗೆ ಸಿಡಿದ ಲಾಡ್, ನಿಮ್ಮ ಮೇಲೆ ನಮಗೆ ಗೌರವ ಇದೆ, ಆಥರ ಮಾತಾಡಬೇಡಿ ಅಂತ ಲಾಡ್ ಸಿಡಿಮಿಡಿಯಾದ್ರು. ಅಶೋಕ್ ಆರೋಪ ಬಗ್ಗೆ ಡಿಕೆಶಿ ಎದ್ದು ಸ್ಪಷ್ಟನೆ ಕೊಟ್ರು. ನಾನು ಸ್ಟೂಡೆಂಟ್ ಪಾಲಿಟಿಕ್ಸ್ ನಿಂದ ಬಂದವನು. ನಾನು ಏಟು ತಿಂದಿದೀನಿ, ನೋವುಂಡಿದೀನಿ, ಬೆಳೆದಿದ್ದೀನಿ. ಅಶೋಕ್ ನಮಗಿಂತ ಹಿರಿಯರಾಗಿದ್ರೂ ಅವರಿಗಿಂತ ಕಿರಿಯರು ಏನೇನೋ ಆಗಿಹೋಗಿದ್ದಾರೆ. ನನ್ನ ಸ್ಟ್ರೆಂತ್ 136 ಶಾಸಕರು, ಸಿದ್ದರಾಮಯ್ಯ ಸೇರಿ. ಸಿದ್ದರಾಮಯ್ಯ ನನಗೆ ಸಂಕಷ್ಟ ಬಂದಾಗ ಜತೆ ನಿಂತಿದ್ದಾರೆ, ನಾನು ಅವರ ಸಂಕಷ್ಟದಲ್ಲಿ ನಿಂತಿದೀನಿ. ನಾವಿಬ್ರೂ ಹೀಗೇ ಜೋಡಿಯಾಗಿ ಇರ್ತೀವಿ. ಹೈಕಮಾಂಡ್ ತೀರ್ಮಾನ ತಗೊಳ್ಳುವಾಗ ತಗೊಳ್ಳುತ್ತೆ, ಅದು ಬೇರೆ ಎಂದರು. 

ರಾಜಕಾರಣದಲ್ಲಿ ನಂಬರ್ ಮೇಲೆ ನಿರ್ಧಾರ ಆಗಲ್ಲ. ನಿಮ್ಮಲ್ಲಿ ಎಷ್ಟೋ ಜನ ಸಿಎಂಗಳು ಬದಲಾದ್ರು, ಪೂರ್ಣ ಕ್ಯಾಬಿನೆಟ್ ಬದಲಾಯ್ತು. ಸಾಧ್ಯತೆಗಳು ರಾಜಕೀಯದಲ್ಲಿ ಸಹಜ. ಒಬ್ನೇ ಸಾಕು, ದೃಢ ಸಂಕಲ್ಪ, ನಿಲುವು ಇದ್ರೆ ಸಾಕು, 140 ಜನರೂ ಇರ್ತಾರೆ, ಜಾಸ್ತೀನೂ ಆಗ್ತಾರೆ, ನೋಡೋಣ ಮುಂದೇನಾಗುತ್ತೆ 2028ಕ್ಕೆ ಅಂತ ಹೇಳಿ ಕೂತ್ರು ಡಿಕೆಶಿ. ನಿಮ್ಮ ಸ್ಟ್ರೆಂತ್ ಬಾಗಿಲು ಒದ್ದು ಮಂತ್ರಿ ತಗೊಂಡಿದ್ದು, ಅದೆರ ನಿಮ್ಮ ಸಹಜ ಗುಣ ಅಂತ ಬೆಲ್ಲದ್ ಹೇಳಿದ್ದಕ್ಕೆ ನಿಮ್ಮ ಹಾಗೂ ಅಶೋಕ್ ಮಾತಿಗೆ ನಾನು ಜಗ್ಗಲ್ಲ ಅಂತ ಡಿಕೆಶಿ ಟಕ್ಕರ್ ಕೊಟ್ರು.

ಈವೇಳೆ ಡಿಕೆಶಿ ಮಾತಿಗೆ ಸಿಎಂ ಸಮರ್ಥಿಸಿಕೊಂಡ್ರು. ಡಿಕೆಶಿ ಎಲ್ಲ ಸ್ಪಷ್ಟತೆ ಕೊಟ್ಟಿದ್ದಾರೆ. ಅವರು ವಾಸ್ತವ ಮಾತಾಡಿದ್ದಾರೆ, ವೈರಾಗ್ಯದ ಮಾತಾಡಿಲ್ಲ. ಬಿಜೆಪಿಯವ್ರು ಇದನ್ನು ವೈರಾಗ್ಯ ಅಂತ ಕರೆಯಬಹುದು, ಆದ್ರೆ ಅದು ವೈರಾಗ್ಯ ಅಲ್ಲ ಅಂದ್ರು ಸಿಎಂ. ಡಿಕೆಶಿ ಅವರು ಹೇಳಿದ್ದು ನನಗೆ ಅರ್ಥ ಆಗಿಲ್ಲ ಅಂದ ಅಶೋಕ್ ಗೆ ನಿನಗೇನೂ ಅರ್ಥ ಆಗಲ್ಲ ಬಿಡು ಅಂತ ಸಿಎಂ ಟಕ್ಕರ್ ಕೊಟ್ರು.


Spread the love

About Laxminews 24x7

Check Also

ಪರೋಕ್ಷವಾಗಿ ಶಾಸಕ ಯತ್ನಾಳರಿಗೆ ತಿವಿದ ಸಚಿವ ಎಂ.ಬಿ.ಪಾಟೀಲ

Spread the loveವಿಜಯಪುರ: ರಾಜ್ಯಪಾಲರು ಬಿಜೆಪಿಯವರು ಏನ್ ಹೇಳ್ತಾರೆ ಅದನ್ನ ಮಾಡ್ತಾರೆ. ಈ ರೀತಿ ಮಾಡ್ತಾರೆ ಎಂದು ನಮಗೆ ಗೊತ್ತಿತ್ತು.. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ