ಹುಬ್ಬಳ್ಳಿ: ಕ್ಯಾನ್ಸರ್ ಪೀಡಿತ 75 ವರ್ಷದ ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 29ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಕೊಲೇಟ್ ಕೊಡುವುದಾಗಿ ಹೇಳಿ ಪಕ್ಕದ ಮನೆಯ ಬಾಲಕಿಯನ್ನ ಮನೆಗೆ ಕರೆಸಿಕೊಂಡು ವೃದ್ಧ ಕೃತ್ಯವೆಸಗಿದ್ದಾನೆ. ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಸದ್ಯ ಆರೋಪಿ ವೃದ್ಧನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಪತಿ ಕೊಲೆಗೈದಿರುವಂತಹ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆ ಮುಂದೆಯೇ ಪತ್ನಿ ತೆಹಸಿನ್(28)ರನ್ನು ಪತಿ ಇರ್ಫಾನ್ ಬರ್ಬರವಾಗಿ ಹತ್ಯೆಗೈದಿದ್ದಾರೆ. ಗೋಕುಲ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಮಾಡಿ ಕೆಲ ಹೊತ್ತು ತಲೆ ಮರೆಸಿಕೊಂಡಿದ್ದ ಇರ್ಫಾನ್, ಬಳಿಕ ತಾವೇ ಮಗುವಿನೊಂದಿಗೆ ಬಂದು ಕೇಶ್ವಾಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ತೆಗೆದುಕೊಂಡಿದ್ದ ಸಾಲವನ್ನು ದುಡಿದು ತುಂಬುವಂತೆ ತೆಹಸಿನ್ ಹೇಳಿದ್ದಾರೆ. ಇದೇ ವಿಚಾರವಾಗಿ ದಂಪತಿ ಮಧ್ಯೆ ಪದೇ ಪದೇ ಜಗಳ ಕೂಡ ನಡೆದಿದೆ. ಹೀಗಾಗಿ ಆಕ್ರೋಶಗೊಂಡು ಕೊಲೆ ಮಾಡಲಾಗಿದೆ. ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
Laxmi News 24×7