Breaking News

ಪಣಗುತ್ತಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿತವಾದ ಮಾರ್ಕಂಡೇಯ ಮೀನುಗಾರರ ಸಹಕಾರ ಸಂಘ

Spread the love

ಮಾರ್ಕಂಡೇಯ ಮೀನುಗಾರರ ಸಹಕಾರ ಸಂಘ (ನಿ)
ಪಣಗುತ್ತಿ, ತಾ: ಜಿ: ಬೆಳಗಾವಿ
ಉದ್ಘಾಟನೆನಮ್ಮ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಪಣಗುತ್ತಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿತವಾದ ಮಾರ್ಕಂಡೇಯ ಮೀನುಗಾರರ ಸಹಕಾರ ಸಂಘದ ಉದ್ಘಾಟನೆಯನ್ನು ಇಂದು ನೆರವೇರಿಸಲಾಯಿತು.
ನಂತರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂಘದ ಮೂಲಕ ಸ್ಥಳೀಯ ಮೀನುಗಾರರ ಆರ್ಥಿಕ ಬಲವರ್ಧನೆಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿ ಎಂದು ಹಾರೈಸಿ, ಸಂಘದ ಯಶಸ್ವಿ ಕಾರ್ಯನಿರ್ವಹಣೆಗೆ ಶುಭಾಶಯಗಳನ್ನು ತಿಳಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಂಕಲಗಿ–ಕುಂದರಗಿಯ ಶ್ರೀ ಅಡವಿಸಿದ್ದೇಶ್ವರ ಸಂಸ್ಥಾನಮಠದ ಶ್ರೀ ಮ.ನಿ.ಪ್ರ. ಡಾ. ಅಮರ ಸಿದ್ಧೇಶ್ವರ ಮಹಾಸ್ವಾಮಿಗಳು, ಕರ್ನಾಟಕ ರಾಷ್ಟ್ರೀಯ ರಕ್ಷಣಾ ಸಂಘ, ಗೋ ಸಂರಕ್ಷಣಾ ಕೋಶ, ರಾಜ್ಯಾಧ್ಯಕ್ಷರು ಶ್ರೀ ಶ್ರೀ 1008 ಮಹಾಮಂಡಲೇಶ್ವರ ಮೌನ ಕಧಸಿದ್ದೇಶ್ವರ ಮಹಾರಾಜ್, ಚಿಕ್ಕಲದಿನ್ನಿ ತೋಲಗಿ ಮಠದ ಪ.ಪೂ. ಶ್ರೀ ಅದೃಶ್ಯಾನಂದ ಮಹಾಸ್ವಾಮಿಗಳು, ಗುಟಗುದ್ದಿಯ ಬಾಳೆ ಅಚ್ಚಾರಮಠದ ಪ.ಪೂ. ಬ್ರಹ್ಮಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಜಂಟಿ ನಿರ್ದೇಶಕರು, ಬೆಳಗಾವಿ ವಲಯ, ಬೆಳಗಾವಿ ಶ್ರೀ ಎಲ್. ಕುಮಾರ, ಮೀನುಗಾರಿಕೆ ಉಪನಿರ್ದೇಶಕರು ಶ್ರೀ ಸಂತೋಶ ಕೊಪ್ಪದ, ಮೀನುಗಾರಿಕೆ ಮೇಲ್ವಿಚಾರಕರು,
ಹೊನ್ನಾವರ
ಶ್ರೀ ಅಬ್ದುಲ್‌ರಜಾಕ್ ಮುಲ್ಲಾ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Spread the love

About Laxminews 24x7

Check Also

SSLC ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶುಭಕೋರಿದ ಸಿಎಂ

Spread the love ಬೆಂಗಳೂರು: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ