Breaking News

ಮೇಶ್ ಜಾರಕಿಹೊಳಿ ವಿರುದ್ಧ ಸುಳ್ಳು ಸುದ್ದಿ: ₹20 ಕೋಟಿ ಮಾನನಷ್ಟ ಕೇಸ್‌

Spread the love

ಬೆಳಗಾವಿ: ಅಸ್ತಿತ್ವದಲ್ಲಿ ಇಲ್ಲದ ಖಾಸಗಿ ಮಾಧ್ಯಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಅಪಪ್ರಚಾರ ಮಾಡಿದ್ದು, ಅವರ ಮೇಲೆ ₹ 20ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ಸಾಹುಕಾರ ಅಭಿಮಾನಿಗಳ ಒಕ್ಕೂಟದ ಕಾನೂನು ಸಲಹೆಗಾರ್ತಿ ರಂಜಿತಾ ರೆಡ್ಡಿ ತಿಳಿಸಿದರು.

ವೈಯಕ್ತಿಕವಾಗಿ ತೆಜೋವಧೆ

ನಗರದ ಪ್ರವಾಸಿ ಮಂದಿರದಲ್ಲಿ ಸಾಹುಕಾರ ಅಭಿಮಾನಿಗಳ ಒಕ್ಕೂಟದಿಂದ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯದಲ್ಲಿ ಮಾಧ್ಯಮಗಳ ಮುಂದೆ ಕೆಸರೆರಚಾಟ ಮಾಡುವುದು ಸಾಮಾನ್ಯ. ವೈಯಕ್ತಿಕವಾಗಿ ತೆಜೋವಧೆ ಮಾಡುತ್ತಿರುವುದು ತಪ್ಪು. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಂತೆ ವಿಡಿಯೋ ಬಿತ್ತರಿಸುವುದು. ಹಳೆಯ ವಿಡಿಯೋ ಬಳಸಿ ಸಚಿವ ಸತೀಶ ಜಾರಕಿಹೊಳಿ ಬಗ್ಗೆ ಶಾಸಕ ರಮೇಶ ಜಾರಕಿಹೊಳಿ ಅವರು ಅಧಿಕೃತವಾಗಿ ಮಾಧ್ಯಮಗಳ ಮುಂದೆ ನೀಡಲಾದ ಹೇಳಿಕೆಗಳನ್ನು ಎಡಿಟ್ ಮಾಡಿ ಜಾರಕಿಹೊಳಿ ಸಹೋದರರ ತೇಜೋವಧೆ ಮಾಡಲಾಗುತ್ತಿದೆ. ಇದರ ಹಿಂದಿರುವವರು ಮತ್ತು ಮಾಧ್ಯಮಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿಕೊಳ್ಳುತ್ತಿರುವವರ ವಿರುದ್ಧ ದೂರು ದಾಖಲಿಸಲಾಗುತ್ತಿದೆ ಎಂದರು.

ಶಾಸಕರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ

ಶಾಸಕ ರಮೇಶ ಜಾರಕಿಹೊಳಿ ಅವರು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಸ್ತಿತ್ವದಲ್ಲಿ ಇಲ್ಲದ ಟಿವಿ ಹೆಸರಿನಲ್ಲಿ ಹೇಮಂತಕುಮಾರ ಕಂಬಾರ ಎಂಬುವರು ಶಾಸಕರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ. ಅಲ್ಲದೇ, 2019ರಲ್ಲಿ ರಾಜಕಾರಣಿಯೊಬ್ಬರಿಗೆ ಆಡಿಯೋ ಕಾಲ್ ರೇಕಾರ್ಡಿಂಗ್ ಮಾಡಿ, ಬ್ಲಾಕ್‌ ಮೇಲ್ ಮಾಡಿ ತಮ್ಮ ನ್ಯೂಜ್ ಚಾನಲ್‌ ಪರವಾನಗಿ ರದ್ದುಗೊಳಿಸಿಕೊಂಡಿದ್ದು, ಜೈಲಿಗೂ ಹೋಗಿ ಬಂದಿದ್ದಾರೆ. ಜಾರಕಿಹೊಳಿ ಸಹೋದರರ ಅಭಿಮಾನಿಗಳ ಬಳಗದಿಂದ ಅವರ ವಿಳಾಸ ಪತ್ತೆ ಹಚ್ಚಿದ್ದು ₹ 20 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹೇಳಿದರು.


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ