Breaking News

ಕಾರವಾರ ಕರಾವಳಿ ಉತ್ಸವದಲ್ಲಿ ಮಾನವೀಯತೆ ಮೆರುಗು: ಗಣ್ಯರಿಗಲ್ಲ, ವಿಶೇಷಚೇತನ ಮಕ್ಕಳಿಗೆ ಸಿಕ್ಕಿತು ‘ಹಾರುವ’ ಭಾಗ್ಯ!

Spread the love

ಕಾರವಾರ: ಏಳು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅರಬ್ಬಿ ಸಮುದ್ರತೀರದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ’ವು ಈ ಬಾರಿ ಕೇವಲ ಮನರಂಜನೆಗೆ ಸೀಮಿತವಾಗದೆ, ಹೊಸ ಇತಿಹಾಸವೊಂದಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ವಿವಿಐಪಿಗಳಿಗೆ ಮಾತ್ರ ಸೀಮಿತ ಎನಿಸುವ ಹೆಲಿಕಾಪ್ಟರ್ ಹಾರಾಟವನ್ನು ಈ ಬಾರಿ ಕಿವುಡ ಮತ್ತು ಮೂಗ ಮಕ್ಕಳು ಉದ್ಘಾಟಿಸಿದ್ದಲ್ಲದೇ, ಹಾರಾಟ ನಡೆಸುವ ಮೂಲಕ ಸಂಭ್ರಮದ ಅಲೆ ಎಬ್ಬಿಸಿದ್ದಾರೆ.

​ಗಣ್ಯರ ಬದಲಿಗೆ ಮಕ್ಕಳಿಂದಲೇ ಉದ್ಘಾಟನೆ: ​ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ‘ಹೆಲಿಕಾಪ್ಟರ್ ಜಾಯ್ ರೈಡ್’ಗೆ ಮಂಗಳವಾರ ಅದ್ಧೂರಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಯಾವುದೇ ರಾಜಕಾರಣಿಗಳೋ ಅಥವಾ ಗಣ್ಯರೋ ಇದನ್ನು ಉದ್ಘಾಟಿಸಲಿಲ್ಲ. ಬದಲಾಗಿ, ಆಶಾನಿಕೇತನ ಶಾಲೆಯ ಕಿವುಡ ಮತ್ತು ಮೂಗ ಮಕ್ಕಳು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು. ಸುಮಾರು 20ಕ್ಕೂ ಹೆಚ್ಚು ವಿಶೇಷಚೇತನ ಮಕ್ಕಳು ಮೊದಲ ಬಾರಿಗೆ ಹೆಲಿಕಾಪ್ಟರ್ ಏರಿ ಬಾನಂಗಳದಲ್ಲಿ ಹಾರಾಡಿ, ತಮ್ಮ ಕನಸನ್ನು ನನಸಾಗಿಸಿಕೊಂಡರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ