ಚಿಕ್ಕೋಡಿ:ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಮುಖಾಂತರ ರೈತರಿಗೆ ನೀರು ಸಿಗಬೇಕು ಎಂದು ಶಾಸಕರಾದ ಗಣೇಶ್ ಹುಕ್ಕೇರಿ ಹಾಗೂ ಪ್ರಕಾಶ ಹುಕ್ಕೇರಿಯವರ ಉದ್ದೇಶವಾಗಿದೆ. ಮತದಾರರ ಋಣವನ್ನು ತೀರಿಸುವ ಕಾರ್ಯ ಮಾಡುವ ಮುಖಂಡರಿಗೆ ಆಯ್ಕೆ ಮಾಡಿದ್ದೀರಾ. ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿ ಅವರು ರಾಜ್ಯದ 224 ಕ್ಷೇತ್ರಗಳಲ್ಲಿ ನಿಜವಾದ ಜನ ಸೇವಕ ಹಾಗೂ ಜನರ ಬಗ್ಗೆ ಕಾಳಜಿ ಇರುವ ಶಾಸಕರಿದ್ದಾರೆ ಎಂದು ಎತ್ ನೀರಾವರಿ ಯೋಜನೆಗಳ ಕಾರ್ಯಕ್ಷಮತೆಯ ಅಧ್ಯಯನ ಸಮಿತಿಯ ಅಧ್ಯಕ್ಷ ಹಾಗೂ ಎಂ ಎಲ್ ಸಿ ಎಸ್. ರವಿ ಅವರು ಹೇಳಿದರು .
ಅವರು ಹತ್ತಾರು ಶಾಸಕರು ಒಳಗೊಂಡ ಏತ ನೀರಾವರಿ ಯೋಜನೆಗಳ ಕಾರ್ಯಕ್ಷಮತೆಯ ಅಧ್ಯಯನ ಸಮಿತಿಜೊತ್ತೆಗೆ ತಾಲೂಕಿನ ಮಲಿಕವಾಡ ಸಾಹುಕಾರ್ ಶರಿಯತ್ ಮೈದಾನ ಹಾಗೂ ಕಲ್ಲೋಳ ಹತ್ತಿರ ನಿರ್ಮಾಣಗೊಂಡಿರುವ ಮಹಾಲಕ್ಷ್ಮಿಯ ನೀರಾವರಿ ಯೋಜನೆಯ ಜಾಕವೆಲಗೆ ಭೇಟಿ ನೀಡಿ ಮಾತನಾಡಿದರು.
ನಮ್ಮ ತಂಡವು ರಾಜ್ಯದ ಯತ್ನಿ ರಾವರಿ ಯೋಜನೆಗಳ ಸಮಗ್ರ ಅಧ್ಯಯ ಮಾಡುತ್ತಿದ್ದೇವೆ. ನಾಲ್ಕು ಸಭೆಗಳು ನಡೆದಿದೆ. ಮಹಾಲಕ್ಷ್ಮಿ ಯೋಜನೆ ವೀಕ್ಷಣೆ ಮೊದಲ ಭೇಟಿಯಾಗಿದೆ. ಯೋಜನೆಗಳ ಪ್ರಗತಿ, ಯೋಜನೆ ಯಶಸ್ವಿಯಾಗುತ್ತಾ, ಸಮಯದಲ್ಲಿ ಪೂರ್ಣಗೊಳ್ಳುತ್ತಾ, ರೈತರಿಗೆ ನೀರು ಸಿಗುತ್ತಾ ಇದರ ಕುರಿತು ಅಧ್ಯಯನ ಮಾಡುತ್ತಿದ್ದೇವೆ.
ಶಾಸಕ ಗಣೇಶ್ ಹುಕ್ಕೇರಿ ಅವರ ಒತ್ತಾಯದಮೇರಿಗೆ ಉಳಿದ ಕಾರ್ಯವನ್ನು ಬಿಟ್ಟು ಇಲ್ಲಿ ಬಂದಿದ್ದೇವೆ.
ಮಹಾಲಕ್ಷ್ಮಿ ಎತ್ತ ನಿರಾವರಿ ಯೋಜನೆಯ ಮೊದಲನೇ ಹಂತದ ಕಾಮಗಾರಿ ಮುಗಿದಿದೆ. ಒಳ್ಳೆ ಕಾಮಗಾರಿಯಾಗಿದೆ. ಇವಾಗ ಎರಡನೇ ಹಂತದ ಕಾಮಗಾರಿಗಾಗಿ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿ ಟೆಂಡರ್ ಹೊರಡಿಸಲಿದೆ. ಸರಿಯಾದ ಸಮಯದಲ್ಲಿ ಕಾಮಗಾರಿ ಪೂರ್ಣ ಹಾಗುವುದು ಎಂಬ ವಿಶ್ವಾಸಿದೆ. ಈ ಯೋಜನೆಯಿಂದ 120 ದಿನಗಳು ನೀರು ಪೂರೈಕೆ ಆಗಲಿದೆ. ಈ ಯೋಜನೆ 100% ಯಶಸ್ವಿ ಆಗುವ ಸಕಾರಾತ್ಮಕ ಯೋಜನೆಯಾಗಿದೆ. ಇದಕ್ಕಾಗಿ ಸರ್ಕಾರ ಸಹಾಯ ಮಾಡುತ್ತೆ.
ರಾಜ್ಯದ ಟಾಪ್ ಟೆನ್ ಎಂಎಲ್ಎಗಳಲ್ಲಿ ಉತ್ತಮ ಶಾಸಕ ಗಣೇಶ್ ಹುಕ್ಕೇರಿ ಅವರು ಆಗ್ರ ಸ್ಥಾನದಲ್ಲಿದ್ದಾರೆ. ಇಂತಹ ಜನರ ಬಗ್ಗೆ ಕಾಳಜಿ ಇರುವ ಗಣೇಶ್ ಹುಕ್ಕೇರಿ ಅವರಿಗೆ ಒಳ್ಳೆ ರಾಜಕೀಯ ಸ್ಥಾನ ಸಿಗುತ್ತೆ ಎಂದು ಹೇಳಿದರು.
ಬಳಿಕ ಶಾಸಕರಾದ ಗಣೇಶ ಹುಕ್ಕೇರಿ ಮಾತನಾಡಿ ನಮ್ಮ ಮುಖಂಡರಾದ ಪ್ರಕಾಶ್ ಹುಕ್ಕೇರಿ ಅವರ ಕನಸು ಇರುವ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಗೂ ಇನ್ನಿತರ ಸಚಿವ ಸಂಪುಟದ ಸದಸ್ಯರಿಂದ ಮಂಜುರಾಗಿ ಕಾಮಗಾರಿ ನಡೆಯುತ್ತಿದೆ ಅವರಿಗೆ ಕ್ಷೇತ್ರದ ಜನರ ವತಿಯಿಂದ ಧನ್ಯವಾದಗಳು ಹೇಳುತ್ತೇನೆ.
ಯೋಜನೆ ಅಡಿಯಲ್ಲಿ ಮತಕ್ಷೇತ್ರದ ಶಿರಗಾವ್ ಗ್ರಾಮದಿಂದ ಪಟ್ಟಣಕುಡಿ ಗ್ರಾಮದವರಿಗೆ ಸುಮಾರು 18 ಗ್ರಾಮಗಳ ಜಮೀನುಗಳಿಗೆ ನೀರು ಸಿಗಲಿದೆ. ಈ ಯೋಜನೆಗಾಗಿ ಕೃಷ್ಣ ಕೊಳ್ಳದಲ್ಲಿ 0.92 ಟಿಎಂಸಿ ನೀರಿನ ಹಂಚಿಕೆಯಾಗಿರುತ್ತದೆ.
ಮೊದಲನೇ ಹಂತದಲ್ಲಿ 203.00 ಕೋಟಿ ರೂಪಾಯಿ ವೆಚ್ಚದಲ್ಲಿ 35 % ಭೌತಿಕ ಕಾಮಗಾರಿಯಾಗಿದೆ. ಅದರಲ್ಲಿ 10 ಕಿ ಮಿ ರೈಸಿಂಗ್ ಮೆನ್ ಪೂರ್ಣವಾಗಿದೆ. ಜಾಕವೆಲ್ ಮತ್ತು ಪಂಪ ಹೌಸ್ ಕಾಮಗಾರಿ ಪ್ರಗತಿಯಲ್ಲಿ ಇರುತ್ತದೆ.
ಎರಡನೇ ಹಂತದಲ್ಲಿ.179.30. ಕೋಟಿಗಳಲ್ಲಿ ಕಾಮಗಾರಿ ಕೈಗೊಳ್ಳಲು ಟೆಂಡರ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮಹಾಲಕ್ಷ್ಮಿ ಯೋಜನೆ ಪೂರ್ಣಗೊಳಿಸಿ ಮಳೆಯ ಆಶ್ರಿತ 18 ಗ್ರಾಮಗಳ ರೈತರ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಪಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಈ ತಂಡದ ಎಲ್ಲಾ ಸದಸ್ಯರು ಯೋಜನೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸರಿಯಾದ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳ್ಳಲು ಸೂಚನೆ ನೀಡಿದ್ದರು.
ಅಧ್ಯಯನ ಸಮಿತಿಯ ಸದಸ್ಯರಾದ ಸಕಲೇಶಪುರದ ಶಾಸಕ ಸಿಮೆಂಟ್ ಮಂಜು, ಕೊಳೆಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ , ಶ್ರವಣಬೆಳಗೊಳ ಶಾಸಕ ಸಿ ಎನ್ ಬಾಲಕೃಷ್ಣ, ಗುಂಡ್ಲುಪೇಟೆ ಶಾಸಕ ಎಚ್ ಎಂ ಗಣೇಶ್ ಪ್ರಸಾದ್, ಎಂಎಲ್ಸಿ ದಿನೇಶ ಗೂಳಿಗೌಡ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ರಾಜೇಶ್ ಅಮೀನಭಾವಿ, ಮುಖ್ಯ ಅಭಿಯಂತ ಬಿ ಆರ್ ರಾಠೋಡ್, ಚಿಕ್ಕೋಡಿ ವಿಭಾಗದ ಕಾರ್ಯಪಾಲಕ ಅಭಿಯಂತರು ಎಂ ಬಿ ಪೇಡನೇಕರ್ , ಅಮೃತ ಕನ್ಸ್ಟ್ರಕ್ಷನದ ನವೀನ್ ಕುಮಾರ್ ರಾಮನಾಥನ್ ಸೇರಿದಂತೆ ಯೋಜನೆಯಲ್ಲಿ ಬರುವ 18 ಹಳ್ಳಿಗಳ ಮುಖಂಡರು ಹಾಗೂ ರೈತರು ಉಪಸ್ಥಿರಿದ್ದರು.
Laxmi News 24×7