Breaking News

ದಲಿತ ಸಂಘಟನೆಗಳ ಒಕ್ಕೂಟದಿಂದ ಸುವರ್ಣ ಸೌಧ ಚಲೋ: ಅಂಬೇಡ್ಕರ್ ಪ್ರತಿಮೆ ರೇಸ್’ಕೋರ್ಸ್’ಗೆ ಸ್ಥಳಾಂತರ,

Spread the love

ದಲಿತ ಸಂಘಟನೆಗಳ ಒಕ್ಕೂಟದಿಂದ ಸುವರ್ಣ ಸೌಧ ಚಲೋ:
ಅಂಬೇಡ್ಕರ್ ಪ್ರತಿಮೆ ರೇಸ್’ಕೋರ್ಸ್’ಗೆ ಸ್ಥಳಾಂತರ,
‘ಸ್ಪೂರ್ತಿ ಭವನ’ ಕಾಮಗಾರಿ ಆರಂಭ ಸೇರಿದಂತೆ 20 ಬೇಡಿಕೆಗಳಿಗೆ ಆಗ್ರಹ.
ಅಂಬೇಡ್ಕರ್ ಪ್ರತಿಮೆ ರೇಸ್ ಕೋರ್ಸ್’ನಲ್ಲಿ ಸ್ಥಾಪಿಸಲು ಒಕ್ಕೂಟ ಆಗ್ರಹ
ಸ್ಪೂರ್ತಿ ಭವನ’ ಕಾಮಗಾರಿ ವಿಳಂಬ: ಕೂಡಲೇ ಆರಂಭಕ್ಕೆ ಒತ್ತಾಯ
ಎಸ್.ಸಿ.ಪಿ. ಹಣ ದುರ್ಬಳಕೆ ತನಿಖೆ: ಇಲ್ಲದಿದ್ದರೆ ಉಗ್ರ ಹೋರಾಟ
ವಸತಿ ಶಾಲಾ ಅಕ್ರಮ ತನಿಖೆ, ಹಾಸ್ಟೆಲ್ ಸಿಬ್ಬಂದಿ ಖಾಯಂಗೊಳಿಸಿ
ದಲಿತ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರಿನಲ್ಲಿ 250 ಅಡಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ, ‘ಸ್ಪೂರ್ತಿ ಭವನ’ ಕಾಮಗಾರಿ ಆರಂಭ ಮತ್ತು ಹಾಸ್ಟೆಲ್ ವ್ಯವಸ್ಥೆ ಸುಧಾರಣೆ ಸೇರಿದಂತೆ 20 ಅಂಶಗಳ ಹಕ್ಕೊತ್ತಾಯಗಳನ್ನು ಬೆಳಗಾವಿಯ ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಬಿ.ಆರ್. ಅಂಬೇಡ್ಕರ್ ಅವರ 250 ಅಡಿ ಪ್ರತಿಮೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಬದಲು ವಿಧಾನಸೌಧಕ್ಕೆ ಹತ್ತಿರವಿರುವ ರೇಸ್ ಕೋರ್ಸ್ ಮೈದಾನದಲ್ಲಿ ಸ್ಥಾಪಿಸಿ, ‘ಅಂಬೇಡ್ಕರ್ ಥೀಮ್ ಪಾರ್ಕ್’ ಅಭಿವೃದ್ಧಿಪಡಿಸಲು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ವಿಕಾಸ ಸೌಧದ ಪಕ್ಕದ ಜಾಗದಲ್ಲಿ ಮೂರು ವರ್ಷವಾದರೂ ಆರಂಭವಾಗದ ಸಮಾಜ ಕಲ್ಯಾಣ ಇಲಾಖೆಯ ‘ಸ್ಪೂರ್ತಿ ಭವನ’ ಕಾಮಗಾರಿಯನ್ನು ಕೂಡಲೇ ಶುರು ಮಾಡುವಂತೆ ಒತ್ತಾಯಿಸಲಾಗಿದೆ.
ಈ ಕುರಿತು ಮಾತನಾಡಿದ ಸಂಘಟನೆಯ ಮುಖಂಡ ವಸತಿ ಶಾಲೆಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆ, ವಿದ್ಯಾರ್ಥಿ ವೇತನ ಹೆಚ್ಚಳ, ಹಾಸ್ಟೆಲ್ ಪ್ರವೇಶ ಮರುಕಲ್ಪಿಸುವುದು ಮತ್ತು ಹಾಸ್ಟೆಲ್ ಸಿಬ್ಬಂದಿಯನ್ನು ಖಾಯಂಗೊಳಿಸುವುದು ಪ್ರಮುಖ ಬೇಡಿಕೆಗಳಾಗಿವೆ. ಅಲ್ಲದೆ, ಎಸ್.ಸಿ.ಪಿ./ಟಿ.ಎಸ್.ಪಿ. ಹಣ ಗ್ಯಾರಂಟಿ
ಯೋಜನೆಗಳಿಗೆ ದುರ್ಬಳಕೆ ಆಗಿರುವುದನ್ನು ತನಿಖೆ ಮಾಡಬೇಕು ಕಳೆದ ವರ್ಷ ಅಂಬೇಡ್ಕರ್ ಜಯಂತಿಯಂದು ಮುಖ್ಯಮಂತ್ರಿಗಳು ನೀಡಿದ್ದ 250 ಅಡಿ ಪ್ರತಿಮೆಯ ಭರವಸೆಯನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಸ್ಪೂರ್ತಿ ಭವನ ನಿರ್ಮಾಣ ವಿಳಂಬ ಸರಿಯಲ್ಲ. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತಿಲ್ಲ,
ಸಿಬ್ಬಂದಿಗೆ ಭದ್ರತೆ ಇಲ್ಲ. ನಮ್ಮ 20 ಅಂಶಗಳ ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಮತ್ತು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.”ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ