ಕೊಲ್ಹಾಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳಗಾವಿಯ ಕರಾಟೆಪಟುಗಳ ಅದ್ಭುತ ಸಾಧನೆ
೧೦೪ ಪದಕಗಳನ್ನು ಗೆದ್ದ ೫೭ ಕ್ರೀಡಾಪಟುಗಳು
‘ಡಿಎಸ್ಕೆಐ’ ಸಂಸ್ಥೆಯ ೫೭ ಕ್ರೀಡಾಪಟುಗಳಿಂದ ರಾಷ್ಟ್ರೀಯ ಸ್ಪರ್ಧೆ
೧೦೪ ಪದಕಗಳನ್ನು ಪಡೆದ ಸಾಧಕರು

ಬೆಳಗಾವಿಯ ‘ಡೈನಮಿಕ್ ಶೋಟೋಕಾನ್’ ಸಂಸ್ಥೆ ‘ಜನರಲ್ ಚಾಂಪಿಯನ್’
ಯಶಸ್ವಿ ಕ್ರೀಡಾಪಟುಗಳಿಗೆ ಕಂಗ್ರಾಳಿ ಖುರ್ದ್‌ನಲ್ಲಿ ಗಣ್ಯರಿಂದ ಸನ್ಮಾನ
ಕೊಲ್ಲಾಪುರದಲ್ಲಿ ನಡೆದ ಶೋಟೋಕಾನ್ ಕರಾಟೆ-ಡೂ ಅಸೋಸಿಯೇಷನ್‌ನ ೧೩ನೇ ರಾಷ್ಟ್ರೀಯ ಮಟ್ಟದ ಕರಾಟೆ ಕಪ್ ಸ್ಪರ್ಧೆಯಲ್ಲಿ ಬೆಳಗಾವಿಯ ಡೈನಮಿಕ್ ಶೋಟೋಕಾನ್ ಕರಾಟೆ-ಡೂ ಸಂಸ್ಥೆಯ ೫೭ ಕ್ರೀಡಾಪಟುಗಳು ೧೦೪ ಪದಕಗಳನ್ನು ಗೆಲ್ಲುವ ಮೂಲಕ ಜನರಲ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ೧೫೦೦ ಕ್ಕೂ ಹೆಚ್ಚು ಕರಾಟೆಪಟುಗಳು ಭಾಗವಹಿಸಿದ್ದರು.
ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳಗಾವಿಯ ಡೈನಮಿಕ್ ಶೋಟೋಕಾನ್ ಕರಾಟೆ-ಡೂ ಸಂಸ್ಥೆಯ ೫೭ ಕರಾಟೆಪಟುಗಳು ಪಾಲ್ಗೊಂಡು ವಿಜಯ ಸಾಧಿಸಿದರು. ಈ ೫೭ ವಿದ್ಯಾರ್ಥಿಗಳು ಕಾತಾ ಮತ್ತು ಕುಮಿತೆ ವಿಭಾಗಗಳಲ್ಲಿ ಒಟ್ಟು ೪೫ ಚಿನ್ನದ ಪದಕಗಳು, ೩೩ ಬೆಳ್ಳಿ ಪದಕಗಳು ಮತ್ತು ೨೬ ಕಂಚಿನ ಪದಕಗಳು ಸೇರಿ ಒಟ್ಟು ೧೦೪ ಪದಕಗಳನ್ನು ಗೆದ್ದರು.

ಈ ಭವ್ಯ ಯಶಸ್ಸಿನಿಂದಾಗಿ ಈ ಸಂಸ್ಥೆಯು ಪ್ರಥಮ ಜನರಲ್ ಚಾಂಪಿಯನ್‌ಶಿಪ್ ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಯಶಸ್ಸಿಗಾಗಿ ಸಂಸ್ಥೆಯ ಸನ್ಮಾನ ಸಮಾರಂಭವು ಕಂಗ್ರಾಳಿ ಖುರ್ದ್‌ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಾಳಕೃಷ್ಣ ಮಾಸೇಕರ್, ಸುಕನ್ಯಾ ಪಾಟೀಲ್ ಮತ್ತು ರಾಜಶ್ರೀ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.ಈ ಕ್ರೀಡಾಪಟುಗಳಿಗೆ ಮಲ್ಲೇಶ್ ಚೌಗುಲೆ, ಶಿಹಾನ್ ಪಾಟೀಲ್, ಮಿತೇಶ್ ನಿಲಜಕರ್, ಕರಣ್ ಪಾಟೀಲ್, ಗಾಯತ್ರಿ ಸಾಮಜಿ, ಗೌರವ್ ಪಾಟೀಲ್ ಮತ್ತು ಶ್ರೇಯಾ ಮಾಯಣ್ಣ ಅವರ ಮಾರ್ಗದರ್ಶನ ದೊರೆತಿದೆ
Laxmi News 24×7