ಕಾಂಗ್ರೆಸ್ನಲ್ಲಿ ಎಂದಿಗೂ ದಲಿತರಿಗೆ ಸಿಎಂ ಸ್ಥಾನವನ್ನು ಕೊಟ್ಟಿಲ್ಲ ; ಈಗಲೂ ಕೊಡಲ್ಲ; ಸಂಸದ ಕಾರಜೋಳ
ಸಿದ್ದರಾಮಯ್ಯ ಸಿಎಂ ಖುರ್ಚಿ ಬಿಟ್ಟು ಕೊಡ್ತಾರೋ ಇಲ್ವೋ ಅವ್ರಿಗೆ ಬಿಟ್ಟ ವಿಚಾರ..
ಕಾಂಗ್ರೆಸ್ ನಲ್ಲಿ ಎಂದೂ ದಲಿತರಿಗೆ ಸಿಎಂ ಸ್ಥಾನ ಕೊಟ್ಟಿಲ್ಲ..
ದಲಿತರಿಗೆ ಎಂದೂ ಗೌರವ ಕೊಟ್ಟಿಲ್ಲ,ವೋಟ್ ಬ್ಯಾಂಕ್ ಗಾಗಿ ಮಾತ್ರ ದಲಿತರ ಬಳಕೆ ..
ಮುಸ್ಲಿಂರು ಒಂದು ವೋಟು ಬೇರೆ ಪಕ್ಷಕ್ಕೆ ಹಾಕಲ್ಲ,ಅವರಿಗೆ ಅಧ್ಯಕ್ಷಸ್ಥಾನ ನೀಡಲಿ ನೋಡೋಣ…
ಕಾಂಗ್ರೆಸ್ನಲ್ಲಿ ಎಂದಿಗೂ ದಲಿತರಿಗೆ ಸಿಎಂ ಸ್ಥಾನವನ್ನು ಕೊಟ್ಟಿಲ್ಲ. ಅಲ್ಲಿ ದಲಿತರಿಗೆ ಎಂದೂ ಗೌರವವನ್ನು ನೀಡದೆ, ವೋಟ್ ಬ್ಯಾಂಕ್ಗಾಗಿ ಮಾತ್ರ ದಲಿತರನ್ನು ಬಳಸಿಕೊಳ್ಳಲಾಗಿದೆ. ಮುಸ್ಲಿಮರನ್ನು ಕೂಡ ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದೆ, ಗೌರವ ಕೊಟ್ಟಿಲ್ಲ ಎಂದು ಮಾಜಿ ಡಿಸಿಎಂ ಹಾಲಿ ಸಂಸದ ಗೋವಿಂದ ಕಾರಜೋಳ ಹೇಳಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಡುವ ವಿಚಾರವು ಅವರಿಗೆ ಬಿಟ್ಟದ್ದು. ಆದರೆ, ರಾಜ್ಯದ ಜನ ಬಯಸುವುದು ಒಂದು ಸುಭದ್ರ ಸರ್ಕಾರ ಮತ್ತು ಉತ್ತಮ ಆಡಳಿತ. ಸಿಎಂ ಮತ್ತು ಡಿಸಿಎಂ ಬಣದ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದಿಂದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಸಹಾಯಕರಾಗಿದ್ದಾರೆ.ಖರ್ಗೆ ಅವರು ಬೆಂಗಳೂರಿನ ರಾಜಕೀಯ ಸ್ಥಿತಿಗತಿಯನ್ನು ಹೈಕಮಾಂಡ್ಗೆ ಹೇಳುವ ಮೆಸೆಂಜರ್ ಕೆಲಸ ಮಾಡುತ್ತಿದ್ದಾರೆ, ಹೊರತು ಅವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿಲ್ಲ. ಎಂದರು.
ಕಾಂಗ್ರೆಸ್ನಲ್ಲಿ ಎಂದಿಗೂ ದಲಿತರಿಗೆ ಸಿಎಂ ಸ್ಥಾನವನ್ನು ಕೊಟ್ಟಿಲ್ಲ. ಅಲ್ಲಿ ದಲಿತರಿಗೆ ಎಂದೂ ಗೌರವವನ್ನು ನೀಡದೆ, ವೋಟ್ ಬ್ಯಾಂಕ್ಗಾಗಿ ಮಾತ್ರ ದಲಿತರನ್ನು ಬಳಸಿಕೊಳ್ಳಲಾಗಿದೆ. ಮುಸ್ಲಿಮರನ್ನು ಕೂಡ ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದೆ, ಗೌರವ ಕೊಟ್ಟಿಲ್ಲ.
ಖರ್ಗೆ ಅವರೇ ಧೈರ್ಯದಿಂದ ಹೇಳಬೇಕಿತ್ತು – ರಾಜ್ಯದಲ್ಲಿ ಇಲ್ಲಿಯವರೆಗೂ ದಲಿತರು ಸಿಎಂ ಆಗಿಲ್ಲ, ಈಗ ದಲಿತರನ್ನು ಸಿಎಂ ಮಾಡುತ್ತೇನೆ ಎಂದು.ಖರ್ಗೆ ಅವರೇ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ, ಅವರೇ ಹೈಕಮಾಂಡ್. ಅವರು ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಅವರ ಮನಸ್ಸು ಒಲಿಸಿ ದಲಿತರಿಗೆ ನ್ಯಾಯ ಕೊಡಿಸಬೇಕಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಖರ್ಗೆ ಹೇಳುವ ಸ್ಥಿತಿಯಲ್ಲಿ ಇಲ್ಲ ಮತ್ತು ಅವರು ಅಸಹಾಯಕರು.ದಲಿತರಿಗೆ ಕಾಂಗ್ರೆಸ್ ಎಂದಿಗೂ ಸಿಎಂ ಸ್ಥಾನ ಕೊಡಲ್ಲ, ಕೊಟ್ಟಿಲ್ಲ. ಕಾಂಗ್ರೆಸ್ ಏಕೆ ಹೇಳಬಾರದು ದಲಿತರು ಸಿಎಂ ಆಗಲಿ, ಮುಸ್ಲಿಮರು ಸಿಎಂ ಆಗಲಿ ಅಂತಾ? ಮುಸ್ಲಿಮರು ಒಂದು ವೋಟು ಬೇರೆ ಪಕ್ಷಕ್ಕೆ ಹಾಕಲ್ಲ. ಅವರಿಗೆ ಅಧ್ಯಕ್ಷ ಸ್ಥಾನ ನೀಡಲಿ ನೋಡೋಣ ಎಂದರು.
ದಲಿತರ, ಮುಸ್ಲಿಂರ ವೋಟು ಮಾತ್ರ ಕಾಂಗ್ರೆಸ್ಗೆ ಬೇಕು, ಆದರೆ ಅವರಿಗೆ ಅಧಿಕಾರ ಕಾಂಗ್ರೆಸ್ ಕೊಡಲ್ಲ. ಕಾಂಗ್ರೆಸ್ ಪಕ್ಷ ಮೋಸ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ರಾಜ್ಯದಲ್ಲಿ. ಜಿ. ಪರಮೇಶ್ವರ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿದ್ದಾರೆ, 6 ವರ್ಷಗಳ ಕಾಲ ರಾಜ್ಯಾಧ್ಯಕ್ಷರಾಗಿದ್ದಾರೆ. 2013ರಲ್ಲಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. 2013ರಲ್ಲಿ ಪರಮೇಶ್ವರ ಗೆದ್ದರೆ ಸಿಎಂ ಆಗ್ತಾರೆ ಎಂದು ಎಲ್ಲರೂ ಸೇರಿ ಅವರನ್ನು ಸೋಲಿಸಿದರು. ಅವರ ಕ್ಷೇತ್ರದಲ್ಲಿ ಎಲ್ಲರೂ ಸೇರಿ ಸೋಲಿಸಿ, ಪರಮೇಶ್ವರ ಸಿಎಂ ಆಗದಂತೆ ನೋಡಿಕೊಂಡರು.ಹಿಂದೆ ಜಗಜೀವನರಾಮ್ ಅವರನ್ನು ಉಪಪ್ರಧಾನ ಮಂತ್ರಿ ಚುನಾವಣೆಯಲ್ಲಿ ಸೋಲಿಸಲಾಯಿತು. ಅದಕ್ಕೆ ಕಾಂಗ್ರೆಸ್ನಲ್ಲಿ ಮೋಸದಾಟ ತುಂಬಾ ಇದೆ, ಇದರಿಂದ ದಲಿತರಿಗೆ ಸ್ಥಾನಮಾನ ಸಿಗುತ್ತಿಲ್ಲ ಎಂದು ಗೋವಿಂದ್ ಕಾರಜೋಳ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Laxmi News 24×7