ಚಿಕ್ಕೋಡಿ ಬಿ.ಕೆ.ಕಾಲೇಜಿನಲ್ಲಿ ನಾಳೆ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ, ಕಲಾ ಸಂಗಮ, ಕಾಂ.ಎಕ್ಸ್ , ರಸ ಪ್ರಶ್ನೆ ಸ್ಪರ್ಧೆ: ಡಾ. ಬಿ ಜಿ ಕುಲಕರ್ಣಿ
ಚಿಕ್ಕೋಡಿ : ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ, ರಸಪ್ರಶ್ನೆ ಹಾಗೂ ಕಲಾಸಂಗಮ, ಕಾಮ್ ಎಕ್ಸ್ಪೋ ಹಾಗೂ ಆಹಾರ ಮೇಳ ಕಾರ್ಯಕ್ರಮವನ್ನು ಬರುವ ನಾಳೆ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಬಿ ಜಿ ಕುಲಕರ್ಣಿ ಹೇಳಿದರು.
ಪತ್ರಿಕಾಗೋಷ್ಠಿಯ ಮಾತನಾಡಿದ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನಕ್ಕೆ 60, ಕಾಮ್ ಎಕ್ಸ್ಪೋಗೆ 75 ಮತ್ತು ಕಲಾಸಂಘಮಕ್ಕೆ 35 ತಂಡಗಳು ಭಾಗವಹಿಸುವವು. ಪ್ರೌಢಶಾಲಾ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನಕ್ಕೆ 90, ರಸಪ್ರಶ್ನೆ ಸ್ಪರ್ಧೆಗೆ 97 ಹಾಗೂ ಆಹಾರ ಮೇಳಕ್ಕೆ 72 ತಂಡಗಳು ಭಾಗವಹಿಸಲಿದೆ.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಮತ್ತು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಎಂ ಕವಟಗಿಮಠ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಪ್ರೊ ಬಸವರಾಜ ಪದ್ಮಶಾಲಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಗೌರವಾನ್ವಿತ ಅತಿಥಿಗಳಾಗಿ ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಬಸವರಾಜ್ ಆರ್ ಪಾಟೀಲ್ ಅವರು ಆಗಮಿಸುವರು. ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷರಾದ ಕಿರಣ್ ಕೋರೆ ಮಂಡಳಿ ಸದಸ್ಯರುಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಬಿ ಜಿ ಕುಲಕರ್ಣಿ, ಪ್ರಾಚಾರ್ಯಬಿ ಕೆ ಕಾಲೇಜಿನ ಪದವಿ ಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ, ಉಪ ಪ್ರಾಚಾರ್ಯ ಸುಧೀರ ಕೋಟಿವಾಲೆ, ಡಾ. ವಿನಾಯಕ ಮಂಜಲಾಪುರ, ಸಂಘಟನಾ ಕಾರ್ಯದರ್ಶಿಗಳಾದ ಡಾ. ಸಿದ್ದು ಮಟ್ಯಪ್ಪನವರ ಹಾಗೂ ಮಹೇಶ ಮದಬಾಂವಿ ಉಪಸ್ಥಿತರಿದ್ದರು.
Laxmi News 24×7