Breaking News

ಪೃಥ್ವಿ ಫೌಂಡೇಶನ್ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ- ಸಾಧಕರ ಮಹತ್ಕಾರ್ಯ ಗೌರವಿಸುವುದು ಯುವ ಜನಾಂಗಕ್ಕೆ ದಾರಿ ದೀಪ- ಡಾ. ಹೇಮಾವತಿ ಸೋನೋಳ್ಳಿ

Spread the love

ಪೃಥ್ವಿ ಫೌಂಡೇಶನ್ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ- ಸಾಧಕರ ಮಹತ್ಕಾರ್ಯ ಗೌರವಿಸುವುದು ಯುವ ಜನಾಂಗಕ್ಕೆ ದಾರಿ ದೀಪ- ಡಾ. ಹೇಮಾವತಿ ಸೋನೋಳ್ಳಿ
ಬೆಳಗಾವಿ 23-ಸಾಧಕರ ಸುದೀರ್ಘ ಸೇವೆ ಗುರುತಿಸಿ ಅವರನ್ನು ಸತ್ಕರಿಸುವುದು ಪ್ರಸ್ತುತ ಯುವ ಜನಾಂಗಕ್ಕೆ ಮಾರ್ಗದರ್ಶಿಯಾಗುವುದರ ಜೊತೆಗೆ ಅವರ ಸತ್ಕಾರ್ಯಕ್ಕೆ ಇನ್ನಷ್ಟು ಹುರುಪು ಸಿಕ್ಕಂತಾಗುವುದು. ಆ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ವತಿಯಿಂದ ಎಲೆ ಮರೆ ಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹನೀಯರನ್ನು ಗುರುತಿಸಿ ಅವರ ಸೇವೆಯನ್ನ ನೆನೆಯುವ ಕಾರ್ಯ ಕಳೆದ 9 ವರ್ಷಗಳಿಂದ ಸಾಗುತ್ತಾ ಬಂದಿದೆ ಎಂದು ಪೃಥ್ವಿ ಫೌಂಡೇಶನ್ ನ ಅಧ್ಯಕ್ಷೆ ಡಾ ಹೇಮಾವತಿ ಸೋನೋಳ್ಳಿ ಶನಿವಾರ ದಿ. 22 ರಂದು ಪೃಥ್ವಿ ಫೌಂಡೇಶನ್ ವತಿಯಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾದ ‘ಅನುಪಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಲಾಭಕ್ಕಾಗಿ ಸೇವೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಿರುವಾಗ ಸಾಹಿತ್ಯ, ಸಮಾಜ ಸೇವೆ, ಶಿಕ್ಷಣ,ಸಾಂಸ್ಕೃತಿಕ ರಂಗದಲ್ಲಿ ತಮ್ಮದೇ ಆದ ಕಾರ್ಯಗಳಲ್ಲಿ ಮನಃಪೂರ್ವಕವಾಗಿ ಸೇವೆ ಸಲ್ಲಿಸಿ ಆಯಾ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆ ಮತ್ತು ಸಾಮಾಜಿಕ ಅರಿವು ಉಂಟು ಮಾಡುವಲ್ಲಿ ಪ್ರಾಮಾಣಿಕ ಸೇವೆ ಮಾಡಿರುವ ಮಹನೀಯರನ್ನು ಫೌಂಡೇಶನ್ ವತಿಯಿಂದ ಸತ್ಕರಿಸುತ್ತಿರುವುದು ಒಂದು ಸೌಭಾಗ್ಯದ ಕೆಲಸ ಅವರ ಈ ಕಾಯಕ ನಿರಂತರವಾಗಿ ಮುಂದುವರೆಯಲಿ ಎಂದರು.
ಈ ಸಂದರ್ಭದಲ್ಲಿ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಪ್ಪಾಸಾಹೇಬ ಅಲಿಬಾದಿ, ಭಾರತಿ ಅಲಿಬಾದಿ, ಮಹಾನಂದಾ ಪರುಶೆಟ್ಟಿ, ಶ್ರೀದೇವಿ ನರಗುಂದ, ಮೀನಾಕ್ಷಿ ಸೂಡಿ,ಸುಮಂಗಲಾ ದೊಡಮನಿ,ಹೇಮಾ ಬರಬರಿ ಭಾರತಿ ತೋರಗಲ ರವರಿಗೆ ಅವರ ಸಾಧನೆ ಗುರುತಿಸಿ’ಅನುಪಮ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಅಪ್ಪಸಾಹೇಬ ಅಲಿಬಾದಿ ಮಾತನಾಡಿ ನಮ್ಮ ಕಾರ್ಯವನ್ನು ನೆನಪಿಸಿ ಸತ್ಕರಿಸುತ್ತಿರುವುದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಹಮೀದಾ ಬೇಗಂ ದೇಸಾಯಿ ಜನಪದ ಜೀವನ ಶೈಲಿ ಕುರಿತು ವಿಶೇಷ ಉಪನ್ಯಾಸ ನೀಡಿದರು. 
ಈ ಸಂದರ್ಭದಲ್ಲಿ ಫೌಂಡೇಶನ್ ಸದಸ್ಯರಿಂದ ಜನಪದ ನೃತ್ಯ, ಜನಪದ ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ. ನೀಲಗಂಗಾ ಚರಂತಿಮಠ, ಮಹಾನಂದಾ ಪರುಶಟ್ಟಿ ಇಂದಿರಾ ಮೂಟೆಬೆನ್ನೂರ,, ಸ. ರಾ. ಸುಳಕೂಡೆ, ಸುರೇಶ ಹಂಜಿ, ಆರ್. ಬಿ. ಬನಶಂಕರಿ,ಶಿವಾನಂದ ತಲ್ಲೂರ, ಎಸ್.. ಬಿ. ನಾಗರಾಜ,ಮಹಾದೇವಿ ಹಿರೇಮಠ, ,ಶೈಲಜಾ ಹಿರೇಮಠ, ರಶ್ಮಿ ಪಾಟೀಲ ಸೇರಿದಂತೆ ಫೌಂಡೇಶನ್ ಸದಸ್ಯರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀದೇವಿ ನರಗುಂದ ಸ್ವಾಗತಿಸಿದರು. ಹೇಮಾ ಬರಬರಿ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು ಭುವನೇಶ್ವರಿ ಪೂಜೇರಿ ವಂದಿಸಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ