Breaking News

ಕರ್ನಾಟಕ ರಾಜ್ಯ ಸ-ಅಭಿವೃದ್ಧಿ ಸಂಘದಿಂದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ; ರಾಜ್ಯೋತ್ಸವ; ಸಚಿವ ಸತೀಶ್ ಜಾರಕಿಹೊಳಿ ಚಾಲನೆ

Spread the love

ಕರ್ನಾಟಕ ರಾಜ್ಯ ಸ-ಅಭಿವೃದ್ಧಿ ಸಂಘದಿಂದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ; ರಾಜ್ಯೋತ್ಸವ; ಸಚಿವ ಸತೀಶ್ ಜಾರಕಿಹೊಳಿ ಚಾಲನೆ
ಛತ್ರಪತಿ ಶಿವಾಜೀ ಮಹಾರಾಜರು ಅಪ್ಪಟ ಕನ್ನಡ ಮೂಲದವರು
ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರಲ್ಲಿ ಸಹೋದರತೆಯ ಬಾಂಧವ್ಯವಿದೆ ; ಹಿರಿಯ ಸಾಹಿತಿ ಯ.ರು. ಪಾಟೀಲ್
ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರಲ್ಲಿ ಸಹೋದರತೆಯ ಬಾಂಧವ್ಯವಿದೆ. ಛತ್ರಪತಿ ಶಿವಾಜೀ ಮಹಾರಾಜರು ಅಪ್ಪಟ ಕನ್ನಡ ಮೂಲದವರು. ಲಿಂಗಾಯಿತರು ಎಂದು ಹಿರಿಯ ಸಾಹಿತಿ ಯ.ರು. ಪಾಟೀಲ್ ಹೇಳಿದರು.
ಕರ್ನಾಟಕ ರಾಜ್ಯ ಸ-ಅಭಿವೃದ್ಧಿ ಸಂಘದ ವತಿಯಿಂದ ಇಂದು ಬೆಳಗಾವಿಯ ಕನ್ನಡ ಭವನದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಯ.ರು ಪಾಟೀಲ್. ಶಾಸಕ ಆಸೀಫ್ ಸೇಠ್, ಭೀಮರಾವ್ ಪವಾರ್ ಉಪಸ್ಥಿತರಿದ್ಧರು. ಪೊಲೀಸ್ ನಿರೀಕ್ಷಕ ಡಾ. ಜ್ಯೋತಿರ್ಲಿಂಗ್ ಹೊನಕಟ್ಟಿ ಉಪನ್ಯಾಸವನ್ನು ನೀಡಿದರು. ಸುಭಾಷ್ ನೇತ್ರೆಕರ ಅಧ್ಯಕ್ಷತೆಯನ್ನು ವಹಿಸಿದರು. ಗಣ್ಯರ ಹಸ್ತದಿಂದ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ಸಾಹಿತಿಗಳಾದ ಯ.ರು ಪಾಟೀಲ್ ಅವರು, ಎಲ್ಲ ಭಾಷೆಗಳನ್ನು ಹಿಮ್ಮೆಟ್ಟಿಸಿ ಬೆಳೆದಿರುವ ತಾಕ್ಕತ್ತಿನ ಭಾಷೆ ಕನ್ನಡ ಭಾಷೆ. ಬ್ರಿಟಿಷರ ಕಾಲದಲ್ಲಿಯೂ ಕನ್ನಡ ಭಾಷೆಗೆ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಸಹೋದರತೆಯ ಬಾಂಧವ್ಯವಿದೆ. ಛತ್ರಪತಿ ಶಿವಾಜೀ ಮಹಾರಾಜರು ಅಪ್ಪಟ ಕನ್ನಡ ಮೂಲದವರು. ಅವರು ಲಿಂಗಾಯಿತರಾಗಿದ್ದು, ಅವರ ಮನೆ ದೇವರು ಶ್ರೀಶೈಲ್ ಮಲ್ಲಿಕಾರ್ಜುನ. ಕನ್ನಡ ಮತ್ತು ಮರಾಠಿ ಬಾಂಧವ್ಯ ನಮ್ಮಲಿ ಎಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಪೂಜಾರ್, ಬಸವಂತ ಸಣ್ಣಕ್ಕಿ, ಚಂದ್ರಕಾಂತ ಪೂಜಾರ್, ಕುಬೇರ್ ದೊಡಮನಿ, ಡಾ. ಸಿದ್ದಪ್ಪ ತೇರದಾಳ, ಜೆಟ್ಟೆಪ್ಪ ಕಾಂಬಳೆ, ಈಶ್ವರ ತೇರದಾಳ, ಪರಮೇಶ್ವರ ಗಾಮನಗಟ್ಟಿ ಸೇರಿದಂತೆ ಇನ್ನುಳಿದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ