ಬೆಳಗಾವಿಯಲ್ಲಿ ರಾಜ್ಯಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ಆರೋಗ್ಯಕ್ಕೆ ಕ್ರೀಡೆ ಮುಖ್ಯ; ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್
ರಾಜ್ಯಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿಗೆ ಸಂಭ್ರಮದ ಚಾಲನೆ
ಸ್ಪರ್ಧಾತ್ಮಕ ಯುಗದಲ್ಲಿ ಆರೋಗ್ಯ ನಿರ್ಲಕ್ಷ್ಯ ಸಲ್ಲದು: ನ್ಯಾಯಾಧೀಶ ಮಂಜುನಾಥ ನಾಯಕ್
ಬೆಳಗಾವಿ ಬಾರ್ ಅಸೋಸಿಯೇಷನ್‌ನ ಉಪಕ್ರಮಕ್ಕೆ ಶ್ಲಾಘನೆ.
52 ಸಂಘಗಳ ಸದಸ್ಯರು ಪಂದ್ಯಾವಳಿಯಲ್ಲಿ ಭಾಗಿ
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಇದರಿಂದಾಗಿ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಹೆಚ್ಚುತ್ತಿದೆ. ಆರೋಗ್ಯಕ್ಕೆ ವ್ಯಾಯಾಮವು ಅತ್ಯಂತ ಪ್ರಮುಖವಾಗಿದ್ದು, ವಿವಿಧ ಕ್ರೀಡಾ ಸ್ಪರ್ಧೆಗಳ ಮೂಲಕ ಈ ವ್ಯಾಯಾಮ ಸಾಧ್ಯವಾಗುತ್ತದೆ. ಆದ್ದರಿಂದ ಕ್ರೀಡಾಕೂಟಗಳನ್ನು ಆಯೋಜಿಸುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಹೇಳಿದರು.
ಬೆಳಗಾವಿ ಬಾರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಶನಿವಾರ, ಯೂನಿಯನ್ ಜಿಮ್ಖಾನಾದಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು. ನಂತರ ಬೆಳಗಾವಿ ಉತ್ತರದ ಶಾಸಕ ಆಸೀಫ್ ಸೇಠ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್, ಕರ್ನಾಟಕ ರಾಜ್ಯ ಬಾರ್ ಅಸೋಸಿಯೇಷನ್’ನ ಉಪಾಧ್ಯಕ್ಷ ವಕೀಲ ವಿನಯ ಮಾಂಗ್ಲೇಕರ್, ಕರ್ನಾಟಕ ರಾಜ್ಯ ಬಾರ್ ಅಸೋಸಿಯೇಷನ್ ಸದಸ್ಯರಾದ ವಕೀಲ ಕೆ.ಬಿ. ನಾಯಕ್, ವಕೀಲ ಮಗ್ದೂಮ್ ಮತ್ತು ವಕೀಲ ಕಮಲೇಶ ಕೀವಾಡ ಅವರು ಗಿಡಕ್ಕೆ ನೀರುಣಿಸುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬಾರ್ ಅಸೋಸಿಯೇಷನ್’ನ ಕಾರ್ಯವನ್ನು ಮತ್ತು ಉಪಕ್ರಮವನ್ನು ಶ್ಲಾಘಿಸಿದರು. ಕ್ರಿಕೆಟ್ ಪಂದ್ಯವು ಆಟಗಾರರಿಗೆ ಸೋಲು ಗೆಲುವಿನ ಪಾಠವನ್ನು ಕಲಿಸುತ್ತದೆ. ಈ ಒಂದು ಪಂದ್ಯಾವಳಿಯ ವೇಳೆ ಸಹೋದ್ಯೋಗಿಗಳ ಕುಟುಂಬಗಳು ಪರಿಚಿತವಾಗುವ ಅವಕಾಶವನ್ನು ಕಲಿಸುತ್ತದೆ. ಕ್ರೀಡೆಯೂ ನೇತೃತ್ವ ಗುಣವನ್ನು ಬೆಳೆಸುತ್ತದೆ ಎಂದರು.
ಇನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು 52 ವಕೀಲರ ಸಂಘದ ಸದಸ್ಯರನ್ನು ಕರೆಯಿಸಿ ಬೆಳಗಾವಿ ವಕೀಲರ ಸಂಘವು ಕ್ರೀಡಾಕೂಟವನ್ನು ಆಯೋಜಿಸಿದ್ದು, ಪ್ರಶಂಸನೀಯ. ನಾಲ್ಕು ಗೋಡೆಗಳ ನಡುವೆ ದಾಖಲಾತಿಗಳನ್ನು ಹಿಡಿದುಕೊಂಡು ವಾದ ಪ್ರತಿವಾದ ಮಾಡುವ ವಕೀಲರು ಇಂದು ಬ್ಯಾಟ್ ಬಾಲ್ ಹಿಡಿದುಕೊಂಡು ಆಟವಾಡಲೂ ಬಂದಿದ್ದೇವೆ. ಕ್ರೀಡಾಸ್ಪೂರ್ತಿಯೂ ಅತ್ಯಂತ ಮಹತ್ವದ್ದಾಗಿದೆ. ಕೇವಲ ಕ್ರೀಡೆಯಲ್ಲೇ ಅಲ್ಲ, ಜೀವನದಲ್ಲಿಯೂ ಸೋಲು ಗೆಲುವಿನ ಪಾಠವನ್ನು ಕ್ರೀಡೆಯೂ ಕಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಕೀಲ ಬಸವರಾಜ ಮುಗಳಿ ಅವರು ಉಪಸ್ಥಿತ ಗಣ್ಯರನ್ನು ಸ್ವಾಗತಿಸಿದರು. ಬಳಿಕ ಹಿರಿಯ ವಕೀಲ ದಿನೇಶ ಪಾಟೀಲ ಅವರು ಬೆಳಗಾವಿ ಬಾರ್ ಅಸೋಸಿಯೇಷನ್‌ನಿಂದ ಹಮ್ಮಿಕೊಂಡಿರುವ ವಿವಿಧ ಉಪಕ್ರಮಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ವಕೀಲೆ ಶೀತಲ್ ರಾಮಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ವಕೀಲ ಸುಧೀರ ಸಕ್ರಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕೊನೆಯಲ್ಲಿ ಜನರಲ್ ಸೆಕ್ರೆಟರಿ ವಕೀಲ ವೈ.ಕೆ. ದಿವಟೆ ಅವರು ವಂದನಾರ್ಪಣೆ ಮಾಡಿದರು. ಡಾ. ರವಿ ಪಾಟೀಲ್ ಸೇರಿದಂತೆ ಇನ್ನಿತರ ಗಣ್ಯ ವಕೀಲರು ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
Laxmi News 24×7