ಬೆಳಗಾವಿ ಲಿಂಗಾಯಿತ ಮಹಿಳಾ ಸಮಾಜದಿಂದ “ಉತ್ಸವ” ಕಾರ್ಯಕ್ರಮ
ಎಲ್ಲರಲ್ಲಿಯೂ ಪ್ರತಿಭೆ-ಚೈತನ್ಯ ಅಡಗಿರುತ್ತದೆ; ಮಹಿಳೆಯರು ತಮ್ಮತನವನ್ನ ಬಿಟ್ಟು ಕೊಡಬಾರದು; ಚಲನಚಿತ್ರ ಅಭಿನೇತ್ರಿ ಸುಧಾ ಬೆಳವಾಡಿ
ಬೆಳಗಾವಿ ಲಿಂಗಾಯಿತ ಮಹಿಳಾ ಸಮಾಜದಿಂದ “ಉತ್ಸವ” ಕಾರ್ಯಕ್ರಮ
ಮಹಿಳೆಯರು ತಮ್ಮತನವನ್ನ ಎಂದಿಗೂ ಬಿಟ್ಟು ಕೊಡಬಾರದು
ಎಲ್ಲರಲ್ಲಿಯೂ ಪ್ರತಿಭೆ-ಚೈತನ್ಯ ಅಡಗಿರುತ್ತದೆ
ಚಲನಚಿತ್ರ ಅಭಿನೇತ್ರಿ ಸುಧಾ ಬೆಳವಾಡಿ ಅಭಿಪ್ರಾಯ
ಎಲ್ಲರಲ್ಲಿಯೂ ಒಂದು ಪ್ರತಿಭೆ ಒಂದು ಚೈತನ್ಯ ಅಡಗಿರುತ್ತದೆ. ಮಹಿಳೆಯರು ಯಾವುದೇ ಕಾರಣಕ್ಕೂ ತಮ್ಮತನವನ್ನು ಬಿಟ್ಟು ಕೊಡಬಾರದು ಎಂದು ಕಿರುತೆರೆ ಮತ್ತು ಚಲನಚಿತ್ರ ಅಭಿನೇತ್ರಿ ಸುಧಾ ಬೆಳವಾಡಿ ಅವರು ಬೆಳಗಾವಿಯಲ್ಲಿ ಹೇಳಿದರು.
ಬೆಳಗಾವಿಯ ಕನ್ನಡ ಭವನದಲ್ಲಿ ಲಿಂಗಾಯಿತ ಮಹಿಳಾ ಸಮಾಜ ಮತ್ತು ಕನ್ನಡ ಭವನದ ಸಹಯೋಗದಲ್ಲಿ ಉತ್ಸವ ರಾಜ್ಯೋತ್ಸವ ವಚನೋತ್ಸವ ಮತ್ತು ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಕಿರುತೆರೆ ಮತ್ತು ಚಲನಚಿತ್ರ ಅಭಿನೇತ್ರಿ ಸುಧಾ ಬೆಳವಾಡಿ ಉಪಸ್ಥಿತರಿದ್ಧರು. ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲ್ ಮೆಟಗುಡ್ಡ, ಚಿಕ್ಕೋಡಿ ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಅವರು ಉಪಸ್ಥಿತರಿದ್ಧು, ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಕಿರುತೆರೆ ಮತ್ತು ಚಲನಚಿತ್ರ ಅಭಿನೇತ್ರಿ ಸುಧಾ ಬೆಳವಾಡಿ ಮಹಿಳೆಯರು ಯಾವುದೇ ಕಾರಣಕ್ಕೂ ತಮ್ಮ ಆಸಕ್ತಿಯನ್ನು ಬಿಟ್ಟು ಕೊಡಬಾರದು.
ನಮ್ಮತನ , ಹವ್ಯಾಸವನ್ನು ಎಷ್ಟೇ ಕಷ್ಟವಾದರೂ ಬಿಡಬಾರದು. ಮೊದಲೆಲ್ಲ ಕೂಡು ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು. ಆದರೇ, ಈಗ ಮದುವೆಯಾಗಿ ಮಕ್ಕಳನ್ನು ಮಾಡುವುದೇ ಒಂದು ಕಷ್ಟದ ವಿಷಯವಾಗಿದ್ದು, ಯಾರೂ ಕೂಡ ಧೈರ್ಯವನ್ನು ಕಳೆದುಕೊಳ್ಳಬಾರದು.
ಎಲ್ಲರಲ್ಲಿಯೂ ಒಂದು ಪ್ರತಿಭೆ ಒಂದು ಚೈತನ್ಯ ಅಡಗಿರುತ್ತದೆ ಎಂದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಧುಮತಿ ಹಿರೇಮಠ, ರಕ್ಷಾ ದೇಗಿನಾಳ, ಸರೋಜಾ ನಿಶಾನದಾರ ಅವರು ಶ್ರಮಿಸಿದರು.
Laxmi News 24×7