Breaking News

ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಕಲಾ ಪ್ರದರ್ಶನಕ್ಕೆ ಚಾಲನೆ

Spread the love

ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಕಲಾ ಪ್ರದರ್ಶನಕ್ಕೆ ಚಾಲನೆ
ರಾಷ್ಟ್ರದ ವಿವಿಧ ಪ್ರಕಾರದ ಕಲಾವಿದ ಕಲಾಕೃತಿಗಳಿಗೆ ಬೆಳಗಾವಿಗರಿಂದ ಭಾರಿ ಮೆಚ್ಚುಗೆ
ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಕಲಾ ಪ್ರದರ್ಶನಕ್ಕೆ ಚಾಲನೆ
ರಾಷ್ಟ್ರದ ವಿವಿಧ ಪ್ರಕಾರದ ಕಲಾವಿದ ಕಲಾಕೃತಿಗಳಿಗೆ ಬೆಳಗಾವಿಗರಿಂದ ಭಾರಿ ಮೆಚ್ಚುಗೆ
ಎರಡು ದಿನಗಳ ಕಾಲ ನಡೆಯಲಿರುವ ಪ್ರದರ್ಶನ
ವಿವಿಧ ಕಾರ್ಯಕ್ರಮಗಳ ಆಯೋಜನೆ
ವರ್ಣ ಕಲಾಶ್ರೀ ಸಾಂಸ್ಕೃತಿಕ ಸಂಘದ ವತಿಯಿಂದ ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಲಾ ಪ್ರದರ್ಶನಕ್ಕೆ ಚಾಲನೆಯನ್ನು ನೀಡಲಾಯಿತು.
ಬೆಳಗಾವಿಯ ಟಿಳಕವಾಡಿಯಲ್ಲಿರುವ ವರೇರಕರ ನಾಟ್ಯ ಸಂಘದ ಕಲಾ ಮಹರ್ಷಿ ಕೆ.ಬಿ. ಕುಲಕರ್ಣಿ ಸಭಾಗೃಹದಲ್ಲಿ ವರ್ಣ ಕಲಾಶ್ರೀ ಸಾಂಸ್ಕೃತಿಕ ಸಂಘದ ವತಿಯಿಂದ ಇಂದು ಮತ್ತು ನಾಳೆ ರಾಷ್ಟ್ರಮಟ್ಟದ ಕಲಾವಿದರ ಕಲಾಕೃತಿಗಳ ಪ್ರದರ್ಶನ, ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರದ ವಿವಿಧೆಡೆಯ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪ್ರದರ್ಶನವನ್ನು ಜಗದೀಶ ಕುಂಟೆ ಅವರು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ವೃಂದಾ ಚೇನ್, ನಂದಕುಮಾರ್ ಗಾಯಕವಾಡ, ವಿಜಯ ಕಾಮತ್, ವೈ.ಜಿ. ಬಿರಾದಾರ, ಗಂಗಾಧರ ಕುಂಬಾರ ಸೇರಿದಂತೆ ಇನ್ನುಳಿದ ಉಪಸ್ಥಿತರಿದ್ಧರು.
ಈ ವರ್ಷದ ವರ್ಣ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದರು ಸ್ಥಳದಲ್ಲೇ ತಮ್ಮ ಕಲಾಕೃತಿಗಳನ್ನು ರಚಿಸಿ ಬೆಳಗಾವಿಯ ಕಲಾವಿದರಿಗೆ ಪ್ರೇರಣೆಯನ್ನು ನೀಡಿದರು. 115 ಕ್ಕೂ ಹೆಚ್ಚು ಕಲಾವಿದರೂ ತಮ್ಮ ಕಲಾಕೃತಿಗಳನ್ನು ಕಳುಹಿಸಿ ಕೊಟ್ಟಿದ್ದರು. ದೇಶದ ವಿವಿಧೆಡೆಯ ಕಲಾವಿದರ ಕಲಾಕೃತಿಗಳನ್ನು ಒಂದೇ ಸೂರಿನಡಿ ಕಾಣುವ ಅವಕಾಶ ದೊರೆಯಿತು.
ಚಿಕ್ಕ ಮಕ್ಕಳು, ಕಲಾ ಶಾಲೆಯ ಮಕ್ಕಳು ಮತ್ತು ವೃತ್ತಿ ನಿರತರ ಗುಂಪುಗಳನ್ನು ಮಾಡಲಾಗಿತ್ತು. ಇದರಲ್ಲಿ ತೈಲ , ವಾಟರ್, ಅಕ್ರಾಲಿಕ್ ಕಲರ್ , ಮಿಕ್ಸ ಮಿಡೀಯಾ, ಪೆನ್ ಆಂಡ್ ಇಂಕ್, ಕೋಲಾಜ್ ಇನ್ನುಳಿದ ವಿವಿಧ ಬಗೆಯ ಕಲಾಕೃತಿಗಳು ಪ್ರದರ್ಶನಕ್ಕೆ ಇಡಲಾಗಿದೆ. ಈ ಕುರಿತು ಕಲಾವಿದರಾದ ದಿಲೀಪಕುಮಾರ್ ಕಾಳೆ ಹೇಳಿದರು. 
ಇನ್ನು ಅಕ್ರಾಲಿಕ್ ಕಲರ್, ಕ್ಲೇ, ಸೇರಿದಂತೆ ವಿವಿಧ ಬಣ್ಣ ಮತ್ತು ವಸ್ತುಗಳನ್ನು ಉಪಯೋಗಿಸಿ, ಮಿಕ್ಸ ಮೀಡಿಯಾದಿಂದ ರಾಜಸ್ಥಾನಿ ಮಹಿಳೆಯ ಕಲಾಕೃತಿಯನ್ನು ತಯಾರಿಸಿದ ಕಲಾವಿದೆ ಅಂಜಲಿ ಪವಾರ್ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಧ್ಯಾನದಿಂದ ಮಾನಸಿಕ ನೆಮ್ಮದಿಯ ಸಂದೇಶವನ್ನು ನೀಡುವ ಕಲಾಕೃತಿಯ ಮೂಲಕ ತಿಳಿಸುವ ಕೆಲಸವನ್ನು ಮಾಡಲಾಗಿದೆ. ಅಲ್ಲದೇ, 30 ಪ್ರಕಾರದ ಕೆಲಸಗಳ ಮೂಲಕ ಈ ಒಂದು ಪೆನ್ ಆಂಡ್ ಇಂಕ್ ಕಲಾಕೃತಿಯನ್ನು ಮಾಡಲಾಗಿದೆ ಎಂದು ಧಾರವಾಡದ ಕಲಾವಿದೆ ಅರ್ಮಾ ಖಾನ್ ಅವರು ತಿಳಿಸಿದರು.
ಪಿ.ಎಸ್. ಕಡೇಮನಿ, ಅಶೋಕ ಭಂಡಾರೆ, ಜಯದೇವಣ್ ಟಿ.ಎಸ್., ಜಯಂತ್ ಹುಬ್ಬಳ್ಳಿ, ರಮೇಶ್ ಚವ್ಹಾಣ್, ಡಾ. ರೆಹಮಾನ್ ಪಟೇಲ್, ಮಂಜುನಾತ್ ವಾಲಿ, ಇನ್ನುಳಿದ ಕಲಾವಿದರ ಕಲಾಕೃತಿಗಳಿಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದವು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ