Breaking News

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

Spread the love

ಉಡುಪಿ: “ಯಕ್ಷಗಾನದೊಳಗಡೆ ಹೋಮೊಸೆಕ್ಸ್ ಬೆಳೆಯುತ್ತದೆ ಮತ್ತು ಯಕ್ಷಗಾನದಲ್ಲಿ ಅದು ಅನಿವಾರ್ಯ. ಸ್ತ್ರೀ ವೇಷಧಾರಿಗಳಿಗೆ ಅಲ್ಲಿ ಹೆಚ್ಚು ಒತ್ತಡ ಇರುತ್ತದೆ. ಸ್ತ್ರೀ ವೇಷ ಕಲಾವಿದ ಅದನ್ನು ನಿರಾಕರಿಸಿದರೆ ಮರುದಿವಸ ಭಾಗವತರು ಅವನಿಗೆ ಹೆಚ್ಚು ಪದ್ಯ ಕೊಡುವುದಿಲ್ಲ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ್ ಬಿಳಿಮಲೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಉಡುಪಿಯಲ್ಲಿಂದು ಯಕ್ಷಗಾನ ಅಕಾಡೆಮಿ ರಾಜ್ಯಾದ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, “ಅವರು ಹೇಳಿಕೆ ನೀಡಿದ್ದು ತಪ್ಪು. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯಕ್ಷಗಾನದಲ್ಲಿ ಒಳ್ಳೆಯವರು ಮತ್ತು ಕೆಟ್ಟವರೂ ಇದ್ದಾರೆ. ಆದರೆ ಬಿಳಿಮಲೆಯಂತಹ ಮೇಧಾವಿ ವಿದ್ವಾಂಸರು ಈ ರೀತಿ ಹೇಳಬಾರದಿತ್ತು” ಎಂದರು.

“ನಾನು ಬೆಳಿಗ್ಗಿನಿಂದ ಅವರಿಗೆ ಫೋನ್ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅವರ ಫೋನ್ ಸ್ವಿಚ್ ಆಫ್ ಇತ್ತು. ಯಕ್ಷಗಾನದಂತಹ ಕಲೆ ಈಗ ಹೆಚ್ಚು ಪ್ರಸಿದ್ಧಿಗೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ಹೇಳಿದ್ದು ತಪ್ಪು” ಎಂದು ತಿಳಿಸಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ