ಬೆಳಗಾವಿ :ರಾಜಕೀಯವಾಗಿ ಹಿಂದುಳಿದ ಛಲವಾದಿ ಸಮಾಜದ ಜಾಗೃತವಾಗುವ ನಿಟ್ಟಿನಲ್ಲಿ ನ.14 ರಂದು ಚಿಕ್ಕೋಡಿಯಲ್ಲಿ ಛಲವಾದಿ ಮಹಾನಸಭಾದ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಛಲವಾದಿ ಮಹಾಸಭಾದ ಮುಖಂಡ ಸುರೇಶ್ ತಳವಾರ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಛಲವಾದಿ ಸಮಾಜ ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿದ್ದರೂ ಶೈಕ್ಷಣಿಕ, ರಾಜಕೀಯ ಸೌಲಭ್ಯದಿಂದ ವಂಚಿತರಾಗಿದ್ದೇವೆ.
ಎಲ್ಲ ಸಮಾಜದವರು ರಾಜಕೀಯವಾಗಿ ತಮ್ಮ ಸಮಾಜವನ್ನು ರಾಜಕೀಯದಲ್ಲಿ ಸುಭದ್ರವಾಗಿದ್ದಾರೆ. ಆದರೆ ಛಲವಾದಿ ಸಮಾಜದವರು ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ.
ಅವರನ್ನು ಜಾಗೃತಿ ಮಾಡುವ ಉದ್ದೇಶದಿಂದ ಈ ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ದುರ್ಗೆಶ್ ಮತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7