ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ನಡೆಸುತ್ತಿರುವ “ಮತಗಳ್ಳತನ – Vote Chori” ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದೆ.
ನಮ್ಮ ದೇಶದ ಲೋಕತಂತ್ರವನ್ನು ರಕ್ಷಿಸಿ, ನಿಜವಾದ ಮತದಾನದ ಹಕ್ಕು ಜನರ ಕೈಯಲ್ಲಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ನ ನನ್ನ ಮಿತ್ರರು ಚುನಾವಣಾ ಆಯೋಗದ ಪ್ರತಿಯೊಂದು ಪ್ರಕ್ರಿಯೆಯ ಮೇಲೂ ತೀವ್ರ ನಿಗಾವಹಿಸಿ, ಲೋಕತಂತ್ರದ ರಕ್ಷಣೆಗೆ ಸದಾ ಎಚ್ಚರಿಕೆಯಿಂದಿರಬೇಕು.
ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಂಜುನಾಥ ಗೌಡ, ಮಾಜಿ ಸಚಿವರಾದ ಶ್ರೀ ಎಚ್. ಆಂಜನೇಯ ರವರು, ಜಿಲ್ಲಾಧ್ಯಕ್ಷ ಶ್ರೀ ಉಲ್ಲಾಸ್, ಜಿಲ್ಲಾ ಉಸ್ತುವಾರಿ ಶ್ರೀಮತಿ ನಜ್ಮಾ ನಜೀರ್, ನಾಯಕರು ದಾದಾ ಪೀರ್ ಹಾಗೂ ಸಾದಿಕ್ ಪಾಷಾ ಸೇರಿದಂತೆ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Laxmi News 24×7