Breaking News

ಅತ್ಯಂತ ದುರ್ಬಲ ಗೃಹ ಸಚಿವರು ಇದ್ದರೆ ಅದು ಅಮಿತ್ ಶಾ, ಇದಕ್ಕೆ ಹೊಣೆ ಯಾರು?: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

Spread the love

ಬೆಂಗಳೂರು: ಅತ್ಯಂತ ದುರ್ಬಲ ಗೃಹ ಸಚಿವ ಇದ್ದರೆ ಅದು ಅಮಿತ್ ಶಾ. ಸ್ವತಂತ್ರ ಭಾರತದಲ್ಲೇ ದುರ್ಬಲ ಗೃಹ ಸಚಿವರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.‌

ಬೆಂಗಳೂರಲ್ಲಿ ಮಾತನಾಡಿದ ಅವರು, ಪುಲ್ವಾಮ ಆಯ್ತು, ಮಣಿಪುರ ಆಯ್ತು, ಈ ರೀತಿ ಸಾಕಷ್ಟು ಆಗಿದೆ. ಬಾಂಗ್ಲಾದವರು ಒಳಗೆ ಬರ್ತಾರೆ ಅಂತಾರೆ. ಹಾಗಾದ್ರೆ ಯಾರು ಆಡಳಿತ ಮಾಡ್ತಿರೋದು?. ಯಾರು ಇದಕ್ಕೆಲ್ಲ ಹೊಣೆಗಾರರು?. ಪ್ರಧಾನಿ‌ ಯಾಕೆ ಅಮಿತ್ ಶಾಗೆ ಹೆದರುತ್ತಿದ್ದಾರೆ?. ನಮ್ಮ ಗುಟ್ಟು ಹೊರಗೆ ಬರುತ್ತೆ ಅಂತಾನಾ?. ಚಪ್ಪನ್ ಇಂಚ್ ಎಲ್ಲಿ ಹೋಯ್ತು?. ಬೇರೆ ದೇಶದಲ್ಲಿ ಆಗಿದ್ದರೆ ರಾಜೀನಾಮೆ ಕೊಡುತ್ತಿದ್ದರು. ಎಲ್ಲಿ ಹೋದರು RSSನವರು?. ಆರ್​ಎಸ್​ಎಸ್​ನವರನ್ನು ಗಡಿಭಾಗಕ್ಕೆ ಕಳಿಸಿ. ಯಾರು ಇದಕ್ಕೆಲ್ಲ ಹೊಣೆ ಎಂದು ಪ್ರಶ್ನಿಸಿದರು.

ಪೆಹಲ್ಗಾಮ್ ಅಯ್ತು ಏನಾದ್ರು ಉತ್ತರ ಸಿಕ್ತಾ?. ಇನ್ನು ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು?. ಮಾತೆತ್ತಿದ್ದರೆ ಅಭಿನವ ಸರ್ದಾರ್ ಪಟೇಲ್ ಅಂತಾರೆ. ಮಾತೆತ್ತಿದ್ರೆ 56 ಇಂಚಿನ ಎದೆ ಅಂತಾರೆ. ಇನ್ನು ಎಷ್ಟು ಜನರ ಪ್ರಾಣ ಹೋಗಬೇಕು. ಮೊದಲು ಅಮಿತ್ ಶಾ ರಾಜೀನಾಮೆ ಕೊಡಬೇಕು. ಏಕೆ ಮೋದಿಗೆ ಅಮಿತ್ ಶಾ ಕಂಡ್ರೆ ಹೆದರಿಕೆ?. ಗುಜರಾತಿನದ್ದು ಎಲ್ಲಾ ಹೊರಬರುತ್ತೆ ಅಂತಾನಾ?. ಕಳೆದ 10 ವರ್ಷದ ಲೆಕ್ಕ ತೆಗೆದುಕೊಳ್ಳಬೇಕು. ಇವರು ಮೊದಲು ರಾಜೀನಾಮೆ ಕೊಡಲಿ. ಆ ಮೇಲೆ‌ ಬೇರೆಯದನ್ನು ಮಾತನಾಡೋಣ. ಇವರಿಗೆ ಏ‌ನೂ ಪ್ರಶ್ನೆ ಮಾಡಂಗಿಲ್ವಾ? ಎಂದು ಟೀಕಿಸಿದರು.

ಕೃತ್ಯ ಎಸಗಿದವರ ಮೇಲೆ ಕ್ರಮ ಆಗಲಿ: ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ದೆಹಲಿ ಬ್ಲಾಸ್ಟ್‌ಗೂ ಬಿಹಾರ ಚುನಾವಣೆಗೂ ತಳಕು ಹಾಕಲ್ಲ. ಉಗ್ರರ ಕೈವಾಡವೇ, ಕೆಮಿಕಲ್‌ನಿಂದ ಆಗಿರೋದಾ ಗೊತ್ತಾಗಬೇಕಿದೆ. ಉಗ್ರರ ಕೈವಾಡ ಆಗಿದ್ದರೆ ಅದು ಹೇಯ ಕೃತ್ಯ. ಈ ಸಂದರ್ಭದಲ್ಲಿ ನಾವು ಎಲ್ಲರೂ ಖಂಡಿಸುತ್ತೇವೆ. ದೇಶದ ಪರವಾಗಿ ನಾವು ಒಗ್ಗಟ್ಟಾಗಿದ್ದೇವೆ. ರೆಡ್ ಪೋರ್ಟ್ ಬಳಿ ಆಗಿದೆ ಅಂದರೆ ಏನರ್ಥ?. ಸೆಕ್ಯೂರಿಟಿ ವೈಫಲ್ಯವೂ ಬರುತ್ತದೆ ತಾನೇ?. ಬೇರೆ ಬೇರೆ ಕಡೆ ಕೆಮಿಕಲ್ ಸೀಸ್ ಮಾಡಿದ್ದಾರೆ. ಇದು ಭದ್ರತಾ ವೈಪಲ್ಯವೂ ಆಗುತ್ತದೆ ಎಂದರು.

ಯಾವ ಕ್ರಮ ಕೈಗೊಂಡ್ರು ಸಪೋರ್ಟ್ ಮಾಡ್ತೇವೆ. ಈ ಹಿಂದೆ ದಾಳಿ ಆದಾಗ RDX ಬಂತು. ದೇಶಕ್ಕೆ‌ ಹೇಗೆ ಬಂತು ಅನ್ನೋದು ಗೊತ್ತಾಗಲಿಲ್ಲ. ಉಗ್ರರ ಕೈವಾಡ ಇದ್ರೆ ಕ್ರಮ ಆಗಬೇಕು. ಉಗ್ರ ಸಂಘಟನೆಗಳನ್ನು ಮಟ್ಟ ಹಾಕಬೇಕು. ಈಗ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಹಿಂದಿನ ಘಟನೆಯಿಂದ ಪಾಠ ಕಲಿತಂತೆ ಕಾಣ್ತಿಲ್ಲ. ಸಂಪೂರ್ಣವಾಗಿ ತನಿಖೆಯಾಗಬೇಕು. ಉಗ್ರರ ಎಲ್ಲಾ ಲಿಂಕ್ ಪತ್ತೆ ಮಾಡಿ ತನಿಖೆ ಮಾಡಬೇಕು. ಯಾವ ದೇಶದಲ್ಲಿದ್ರೂ ಪತ್ತೆ ಮಾಡಬೇಕು. ಎಲ್ಲೇ ಇದ್ರೂ ಕೃತ್ಯ ಎಸಗಿದವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.‌


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ