Breaking News

ನಟ ಹರೀಶ್ ರಾಯ್ ಇನ್ನಿಲ್ಲ

Spread the love

ನಟ ಹರೀಶ್ ರಾಯ್ ಇನ್ನಿಲ್ಲ
ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಗೆದ್ದರೂ ಬದುಕಿ ಉಳಿಯಲಿಲ್ಲ.
ಉಡುಪಿ ರಥ ಬೀದಿಯಲ್ಲಿ ಸ್ವಂತ ನೋವೆಲ್ಟಿ ಚಿನ್ನದ ಜುವೆಲ್ಲರಿ ಹೊಂದಿದ್ದ ಹರೀಶ್ ರಾಯ್ ಅವರಿಗೆ ಸಿನಿಮಾದಲ್ಲಿ ಅಭಿನಯಿಸುವ ಗೀಳಿತ್ತು.
ನಾನೂ ಉಡುಪಿಯಲ್ಲಿ ಕಲಿಯುತ್ತಿದ್ದ ವೇಳೆ ರಥ ಬೀದಿಯಲ್ಲಿ ಜ್ಯುವೆಲ್ರಿಯಲ್ಲಿ ಇವರನ್ನು ನೋಡುತ್ತಿದ್ದೆ. ಆಗ ಇವರು ಒಂದು ತರಹ ಶೋ ಮ್ಯಾನ್ ರೀತಿ ಕಾಣಿಸುತ್ತಿದ್ದರು.
ʻಓಂʼ ಸಿನಿಮಾದಲ್ಲಿ ಡಾನ್‌ ಪಾತ್ರದ ಮೂಲಕ ಖ್ಯಾತಿ ಪಡೆದರು.
ಬಳಿಕ ತನ್ನ ಜ್ಯುವೆಲ್ಲರಿಯನ್ನು ಅಣ್ಣನಿಗೆ ಬಿಟ್ಟುಕೊಟ್ಟು ನೇರವಾಗಿ ಚಿತ್ರರಂಗಕ್ಕೆ ಧುಮುಕಿದವರು ಬೆಂಗಳೂರಿಗೆ ಅದೃಷ್ಟವನ್ನು ಅರಸುತ್ತಾ ಬಂದರು.
ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾ ʻಕೆಜಿಎಫ್‌ʼ ಸರಣಿಯಲ್ಲಿ ʻಚಾಚಾʼ ಆಗಿ ಪ್ರಸಿದ್ದರಾದರು.
ವಯಸ್ಸು ಏರುತಿದ್ದಂತೆ ರೋಗ ಕಿತ್ತು ತಿನ್ನತೊಡಗಿದ್ದವು.
ಇತ್ತೀಚೆಗೆ ಥೈರಾಯ್ಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಥೈರಾಯ್ಡ್‌ ಕ್ಯಾನ್ಸರ್‌ 4ನೇ ಹಂತದಲ್ಲಿದ್ದು, ಹೊಟ್ಟೆಗೆ ವ್ಯಾಪಿಸಿದಾಗ ಚಿಕಿತ್ಸೆಗೆ ಸುಮಾರು 70 ಲಕ್ಷಕ್ಕೂ ಹೆಚ್ಚು ರೂಪಾಯಿಗಳ ಅಗತ್ಯ ಇತ್ತು.
ಕಷ್ಟದ ಸಮಯದಲ್ಲಿ ಧ್ರುವ ಸರ್ಜಾ ಅವರು ಮುಂದೆ ಬಂದು 11 ಲಕ್ಷ ರೂಪಾಯಿಗಳ ಚೆಕ್‌ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.
ನಟ ಯಶ್ ಸೇರಿದಂತೆ,ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಇನ್ನು ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು.
ಇವರ ತಂದೆ ದೊಡ್ಡ ಜಮೀನ್ದಾರರು ಜುವೆಲ್ಲರಿ ಕೂಡ ಇತ್ತು. ಆದರೆ ಬಾಲ್ಯದಲ್ಲಿ ಐದು ವರ್ಷಗಳವರೆಗೆ ತಾಯಿಯ ಪ್ರೀತಿ ಸಿಗಲಿಲ್ಲ. ಮನೆ ಬಿಟ್ಟು ಬೇರೆ ಕಡೆ ಇರಬೇಕಾದಂತ ಪರಿಸ್ಥಿತಿ.
ತಂದೆ ಅತಿ ದೊಡ್ಡ ಶ್ರೀಮಂತರಾಗಿದ್ದರು ಕೂಡ ಇವರ ಶಿಕ್ಷಣವು ಪೂರ್ತಿ ಆಗಲಿಲ್ಲ.
10ನೇ ತರಗತಿವರೆಗೆ ಮಾತ್ರ ಓದಿದರು. ತುಂಬಾ ಪೋಕ್ರಿ ಶಾಲೆಯಲ್ಲಿ ತಪ್ಪು ಮಾಡಿದಾಗ ಅಪ್ಪನನ್ನು ಕರೆದುಕೊಂಡು ಬಾ ಎಂದು ಮೇಷ್ಟ್ರು ಗದರಿದ್ದರು. ತಂದೆ ಕಟ್ಟುನಿಟ್ಟಾದ ಮನುಷ್ಯ ಮಕ್ಕಳನ್ನು ಹದ ಮಾಡಲು ಮನೆಯಲ್ಲೊಂದು ನಾಗರಬೆತ್ತವನ್ನು ಇರಿಸಿಕೊಂಡಿದ್ದರು. ಹೀಗಾಗಿ ತಂದೆ ಬಳಿ ಇದನ್ನು ಹೇಳುವ ಧೈರ್ಯ ಇರಲಿಲ್ಲ.
ತಂದೆಯನ್ನು ಎದುರಿಸುವುದನ್ನು ಬಿಟ್ಟು ಶಾಲೆಗೆ ಕೈಕೊಟ್ಟು ನೇರವಾಗಿ ಬಾಂಬೆಗೆ ಓಡಿ ಹೋದರು. 2 ವರ್ಷ ಅಲ್ಲೇ‌ ಉಡುಪಿಯವರ ಜೊತೆ ಚೂರು ಪಾರು ಕೆಲಸ ಮಾಡಿಕೊಂಡು ಇದ್ದರು.
ಅವರಿಗೆ ಯಾವಾಗ ಹರೀಶ ಉಡುಪಿ ಭಟ್ಟರ ಮಗ ಅನ್ನೋದು ಗೊತ್ತಾಯ್ತೋ ಆವಾಗ ಮರಳಿ ಕಳುಹಿಸಿದರು.
1992 ರಲ್ಲಿ ಶಾಲೆಯ ಶಿಕ್ಷಕರಾದ ಜಯರಾಮ್ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪ ಬಂದಿತ್ತು. ಹಲ್ಲೆಗೊಳಗಾದ ಶಿಕ್ಷಕ ಜಯರಾಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆದರೆ ಸಾಯುವ ಮುನ್ನ ಶಿಕ್ಷಕರು” ಸ್ಥಳದಲ್ಲಿ ಹರೀಶ್ ಇರಲಿಲ್ಲ” ಎಂದು ಹೇಳಿದ್ದರು. ಪ್ರಕರಣ ದಾಖಲಾಗಿ ಚಾರ್ಜ್ ಶೀಟ್ ದಾಖಲಾಗಿತ್ತು
ಇವರ ಪಾಲಿನಲ್ಲಿ ಬಂದ ಜ್ಯುವೆಲರಿ ನೋಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ (1994ರಲ್ಲಿ) ಗೆಳೆಯರು ಉಪೇಂದ್ರನ ಪರಿಚಯ ಮಾಡಿಸಿದರು. ಅಲ್ಲಿಂದ ಸಿನಿಮಾಾಕೆ #ಓಂ ನಾಮ.!
ಬೆಂಗಳೂರಿನಲ್ಲಿ ಸಿನಿಮಾ ಆಫರ್ ಗಳ ಮಧ್ಯೆ ಬಿಜಿ ಆಗಿರುವ ಸಂದರ್ಭ ಇತ್ತ ಉಡುಪಿಯಲ್ಲಿ ಪ್ರಕರಣ ಜಿಲ್ಲಾ ಕೋರ್ಟ್ ನಲ್ಲಿ ವಿಚಾರಣೆ ನಡೆದು ಇವರಿಗೆ 2003 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಹೆದರಿದ ಹರೀಶ್ ಎದ್ದೆನೋ ಬಿದ್ದೆನೋ ಎಂದು ವಾಪಸ್ ಉಡುಪಿಗೆ ಬಂದವರು ಜೈಲು ಸೇರಿದರು.
ಬಳಿಕ ಒಳ್ಳೆಯ ವಕೀಲರನ್ನು ಗೊತ್ತು ಮಾಡಿ ಜಾಮೀನು ಪಡೆದು ಹೊರಬಂದು ಹೈಕೋರ್ಟ್ ನಲ್ಲಿ ತೀರ್ಪನ್ನು ಪ್ರಶ್ನಿಸಿದರು. ಅದರಲ್ಲಿ ಗೆದ್ದು ಜೀವಾವಧಿ ಶಿಕ್ಷೆಯಿಂದ ತಪ್ಪಿಸಿಕೊಂಡರು!
ಕುಟುಂಬ:ಇವರ ಮಗ ಓದುತ್ತಿದ್ದಾನೆ, ಪತ್ನಿ ಹೈಸ್ಕೂಲ್ನಲ್ಲಿ ಉದ್ಯೋಗದಲ್ಲಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ