Breaking News

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love

: ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿಗೆ ಚಾಲನೆ ನೀಡಿರುವ ಪ್ರಗತಿಪರ ರೈತ ಸಿದ್ರಾಮಪ್ಪ ಬಿರಾದಾರ್ ಅವರು ತಮ್ಮ ಹಸಿರು ವಜ್ರವಾದ ರೆಡ್ ಡೈಮಂಡ್ ಪೇರಲ ತೋಟದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾಗಿ
, ತಾವು ಸಾವಯವ ವಿಧಾನದಲ್ಲಿ ಬೆಳೆದ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣಿನ ಮಾದರಿ ಉಡುಗೊರೆಯಾಗಿ ನೀಡಿದರು. ದೂರದ ಗುಜರಾತ್‌ನಿಂದ ಈ ವಿಶಿಷ್ಟ ತಳಿಯ ಬೀಜ ತರಿಸಿ, ವಿಜಯಪುರದ ಬಾಬಾನಗರದ ನೆಲದಲ್ಲಿ ಯಶಸ್ವಿಯಾಗಿ ಬೆಳೆದಿರುವುದಾಗಿ ತಿಳಿಸಿದರು. ಹೆಚ್ಚು ನೀರಾವರಿ ಅವಶ್ಯಕತೆ ಇರುವ ಈ ತಳಿಗೆ ಸರ್ಕಾರದ ನೀರಾವರಿ ಯೋಜನೆಗಳು ಮಹತ್ವದ ಬೆಂಬಲ ನೀಡಿರುವುದಾಗಿ ಬಿರಾದಾರ್ ಅಭಿಮಾನದಿಂದ ಹೇಳಿದರು.
ವರ್ಷಕ್ಕೆ ಎರಡು ಬಾರಿ ಬೆಳೆ ನೀಡುವ ಈ ಪೇರಲ ತಳಿ ರೈತರಿಗೆ ಪ್ರತಿ ಎಕರೆಗೂ ರೂ. 7–8 ಲಕ್ಷದ ಆದಾಯ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ತಿಳಿಸಿದರು.ಸಚಿವ ಎಂ.ಬಿ. ಪಾಟೀಲ
ಅವರು ಬಿರಾದಾರ್ ಅವರ ನೂತನ ಪ್ರಯತ್ನವನ್ನು ಶ್ಲಾಘಿಸಿ, “ಇಂತಹ ಹೊಸ ಮಾದರಿಯ ಕೃಷಿ ಪ್ರಯೋಗಗಳು ವಿಜಯಪುರ ಜಿಲ್ಲೆಯ ತೋಟಗಾರಿಕೆಗೆ ಹೊಸ ಚೈತನ್ಯ ತುಂಬುತ್ತವೆ,” ಎಂದು ಹರ್ಷ ವ್ಯಕ್ತಪಡಿಸಿದರು. ಬಾಬಾನಗರದ ಹಸಿರು ನೆಲದಲ್ಲಿ ಅರಳಿರುವ ಈ ರೆಡ್ ಡೈಮಂಡ್ ಪೇರಲ ಕೃಷಿಯು, ಪ್ರಗತಿಪರ ರೈತರ ಶ್ರಮ ಮತ್ತು ನವೀನ ಚಿಂತನೆಯ ಸಾಕ್ಷಿಯಾಗಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ