Breaking News

ಬೆಳಗಾವಿಯಲ್ಲಿ ಅಬ್ದುಲ್ ಕಲಾಂ ಆಲ್ ಇಂಡಿಯಾ ಕ್ಯಾರಮ್ ಟೂರ್ನಾಮೆಂಟ್’

Spread the love

ಬೆಳಗಾವಿಯಲ್ಲಿ ಅಬ್ದುಲ್ ಕಲಾಂ ಆಲ್ ಇಂಡಿಯಾ ಕ್ಯಾರಮ್ ಟೂರ್ನಾಮೆಂಟ್’
ಬೆಳಗಾವಿಯ ಯಂಗ್ ಕಮೀಟಿಯ ವತಿಯಿಂದ ಆಯೋಜನೆ
ಅಬ್ದುಲ್ ಕಲಾಂ ಆಲ್ ಇಂಡಿಯಾ ಕ್ಯಾರಮ್ ಟೂರ್ನಾಮೆಂಟ್’
ವಿವಿಧ ಗಣ್ಯರಿಂದ ಚಾಲನೆ
ಬೆಳಗಾವಿಯ ಯಂಗ್ ಕಮೀಟಿಯ ವತಿಯಿಂದ ಅಬ್ದುಲ್ ಕಲಾಂ ಆಲ್ ಇಂಡಿಯಾ ಕ್ಯಾರಮ್ ಟೂರ್ನಾಮೆಂಟ್’ನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿಯ ಯಂಗ್ ಕಮೀಟಿಯ ವತಿಯಿಂದ ಅಬ್ದುಲ್ ಕಲಾಂ ಆಲ್ ಇಂಡಿಯಾ ಕ್ಯಾರಮ್ ಟೂರ್ನಾಮೆಂಟ್’ನ್ನು ಹಮ್ಮಿಕೊಳ್ಳಲಾಗಿತ್ತು. ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ವಿವಿಧ ಗಣ್ಯರು, ಟೂರ್ನಾಮೆಂಟಿಗೆ ಚಾಲನೆಯನ್ನು ನೀಡಿದರು. ಇದರಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ, ಆಂಧ್ರ, ಕೇರಳ, ಛತ್ತೀಸಗಢ ಒಟ್ಟು 7 ರಾಜ್ಯಗಳಿಂದ ಪಟುಗಳು ಇದರಲ್ಲಿ ಭಾಗಿಯಾಗಿದ್ಧರು.
ಈ ವೇಳೆ ಮಾತನಾಡಿದ ನಗರಸೇವಕ ಅಝೀಮ್ ಪಟವೇಗಾರ ಅವರು, ಯುವಪೀಳಿಗೆಯೂ ಇಲ್ಲಸಲ್ಲದ ವಿಷಯಗಳಿಗಿಂತ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸದೃಢ ಸಮಾಜ ನಿರ್ಮಿಸಬೇಕೆಂದರು. ಮುಂದಿನ ದಿನಗಳಲ್ಲಿ ಅಬ್ದುಲ್ ಕಲಾಮ್ ಅವರ ಹೆಸರಿನಲ್ಲಿ ಕ್ರಿಕೇಟ್ ಟೂರ್ನಾಮೆಂಟ್ ಕೂಡ ಆಯೋಜಿಸಲಾಗುವುದು ಎಂದರು. 
ಒಟ್ಟು ಮೂರು ವಿಭಾಗಗಳಲ್ಲಿ 2,85, 000 ರೂಪಾಯಿಯ ನಗದು ಬಹುಮಾನವನ್ನು ವಿಜೇತರಿಗೆ ನೀಡಲು ಉದ್ಧೇಶಿಸಲಾಗಿದೆ. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಸೋಹಿಲ್ ಸಂಗೊಳ್ಳಿ, ನಗರಸೇವಕರಾದ ಬಾಬಾಜಾನ್ ಮತವಾಲೆ, ಶಾಹೀದಖಾನ್ ಪಠಾಣ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿನೈ ನಾವಲಗಟ್ಟಿ, ಬಸವರಾಜ್ ಶೇಗಾಂವಿ, ಈರ್ಫಾನ್ ಹುದಲಿ, ಅಬ್ಬಾಸ್ ನಧಾಪ್, ಫಿರೋಜ್ ಸನವಾಲೆ, ಶಾಹಬಾಜ್ ಸನವಾಲೆ, ಮುದ್ದಸ್ಸರ್ ಬೇಪಾರಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ