ಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಹೇಳಿದರು.
ಮೈಸೂರಿನ ಮಹಾರಾಜ ಮೈದಾನದಲ್ಲಿ ಇಂದು ಜಿತೋ ಮಹಿಳಾ ಘಟಕದಿಂದ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲ ಸೌಕರ್ಯಗಳೂ ಅಂಗೈಯಲ್ಲಿಯೇ ಸಿಗುತ್ತಿದೆ. ಹಾಗಂತ ದೇಹವನ್ನು ದಂಡಿಸದಿದ್ದರೆ, ನಾವು ಸಂಪಾದನೆ ಮಾಡಿದ್ದನ್ನು ಆರೋಗ್ಯದ ಮೇಲೆ ಸುರಿಯಬೇಕಾಗುತ್ತದೆ. ಪ್ರತಿಯೊಬ್ಬರೂ ಸಂತೋಷ ಹಾಗೂ ನೆಮ್ಮದಿಯಾಗಿರಲು ಆರೋಗ್ಯವೇ ಮುಖ್ಯ ಎಂದು ನಟಿ ಹೇಳಿದರು.
ಸಮಾಜದಲ್ಲಿ ನಟ-ನಟಿಯರ ಜೀವನವನ್ನು ಅನುಕರಣೆ ಮಾಡುವುದಕ್ಕಿಂತ ನಮ್ಮಲ್ಲಿರುವ ಪ್ರತಿಭೆಯನ್ನು ಹೊರಜಗತ್ತಿಗೆ ತೋರಿಸುವ ಪ್ರಯತ್ನ ಮಾಡಬೇಕು. ಭಾರತದಲ್ಲಿ ಯುವಶಕ್ತಿ ಹೆಚ್ಚಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನ ರೂಪಿಸಿಕೊಳ್ಳುವ ಕೌಶಲ್ಯವನ್ನು ಕಲಿಸಿ ಕೊಡಬೇಕು ಎಂದು ಸಲಹೆ ನೀಡಿದರು.
Laxmi News 24×7