Breaking News

ಕಾನಿಪ ಜಿಲ್ಲಾಧ್ಯಕ್ಷರಾಗಿ ಡಾ.ಭೀಮಶಿ ಜಾರಕಿಹೊಳಿ ಅವಿರೋಧ ಆಯ್ಕೆ

Spread the love

ಬೆಳಗಾವಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕಕ್ಕೆ 2025-28 ರ ಅವಧಿಗೆ ನಡೆದ ಚುನಾವಣೆಗೆ ಎಲ್ಲ ಹುದ್ಧೆಗಳಿಗೆ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಬಹುತೇಕ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಆಗಬೇಕಿದೆ.

ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಡಾ. ಭೀಮಶಿ ಎಲ್.ಜಾರಕಿಹೊಳಿ, ಉಪಾಧ್ಯಕ್ಷರಾಗಿ ಕುಂತಿನಾಥ ಕಲಮನಿ, ತಾನಾಜಿರಾವ್ ಮುರಂಕರ, ಭೀಮಪ್ಪ ಕಿಚಡಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ, ಕಾರ್ಯದರ್ಶಿಯಾಗಿ ಸದಾಶಿವ ಸಂಕಪ್ಪಗೋಳ, ರವಿ ಹುಲಕುಂದ, ರಾಜಕುಮಾರ ಬಾಗಲಕೋಟಿ,

 

ಖಜಾಂಚಿ ಬಸವರಾಜ ಹೊಂಗಲ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಲ್ಲಿಕಾರ್ಜುನರಡ್ಡಿ ಗೊಂದಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಚಮಕೇರಿ, ಮಹಾವೀರ ಚಿಂಚಣಿ, ಉಳವಯ್ಯ ಹಿರೇಮಠ, ಮಹಾದೇವ ಪೂಜೇರ,

ಸನತ ಜಾರಕಿಹೊಳಿ, ಸೂರ್ಯಕಾಂತ ಪಾಟೀಲ, ಸುಕುಮಾರ ಬನ್ನೂರೆ, ರುದ್ರೇಶ ಇಟಗಿ, ಕೃಷ್ಣಪ್ಪ ಗಿರೆನ್ನವರ, ಮಹೇಶ ಗಡಕರಿ, ಈರನಗೌಡ ಪಾಟೀಲ, ಗಿರೀಶಪ್ರಸಾದ ರೇವಡಿ, ಸಿದ್ದಲಿಂಗಯ್ಯ ಪೂಜಾರ, ಲಕ್ಷ್ಮೀ ಆರಿಬೆಂಚಿ, ಈರಣ್ಣ ಬುಡ್ಡಾಗೋಳ ಅವಿರೋಧ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಗುರುಸಿದ್ದಪ್ಪ ಪೂಜಾರ ನ.9 ರಂದು ಅಧಿಕೃತವಾಗಿ ಚುನಾವಣೆ ಫಲಿತಾಂಶ ಘೋಷಿಸಲಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ