ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26
ಮೊಬೈಲ್ ಗೀಳಿನಿಂದ ಹೊರ ಬಂದು ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ; ಶಾಸಕ ಆಸೀಫ್ ಸೇಠ್
ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿಯೇ ಜೀವನಕ್ಕೆ ಸ್ಫೂರ್ತಿ; ಪ್ರೋ.ಸಿ.ಎಂ. ತ್ಯಾಗರಾಜ್
ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26
ಮೊಬೈಲ್ ಗೀಳಿನಿಂದ ಹೊರ ಬನ್ನಿ
ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ; ಶಾಸಕ ಆಸೀಫ್ ಸೇಠ್
ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿಯೇ ಜೀವನಕ್ಕೆ ಸ್ಫೂರ್ತಿ; ಪ್ರೋ.ಸಿ.ಎಂ. ತ್ಯಾಗರಾಜ್
ಈಗೀನ ಯುವಪೀಳಿಗೆಯೂ ದಿನದ ಶೇ.75 ರಷ್ಟು ಭಾಗ ಮೊಬೈಲ್ ಗೀಳಿಗೆ ಅಂಟಿಕೊಂಡಿದೆ. ಇದರಿಂದ ಹೊರಬಂದು ಹಬ್ಬ ಹರಿದಿನ, ಕ್ರೀಡೆಗಳು, ಸಾಂಸ್ಕೃತೀಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಬೇಕು. ಶಿಕ್ಷಕರು, ಪಾಲಕರು ಮತ್ತು ಹಿರಿಯರನ್ನು ಆದರದಿಂದ ಕಾಣಬೇಕೆಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಕರೆ ನೀಡಿದರು.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ ಕೇಂದ್ರ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26ನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಗಣ್ಯರ ಹಸ್ತದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. (ಫ್ಲೋ)
ಈ ವೇಳೆ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು ಯುವಜನೋತ್ಸವಗಳು ಯುವಕರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಗಳಾಗಿವೆ. ವಿವಿಧ ವಿಭಾಗಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು. ಈಗೀನ ಪೀಳಿಗೆ ದಿನದ ಶೇ.75 ರಷ್ಟು ಭಾಗ ಮೊಬೈಲ್ ಗೀಳಿಗೆ ಅಂಟಿಕೊಂಡಿದೆ. ಇದರಿಂದ ಹೊರಬಂದು ಹಬ್ಬ ಹರಿದಿನ, ಕ್ರೀಡೆಗಳು, ಸಾಂಸ್ಕೃತೀಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಬೇಕು. ಶಿಕ್ಷಕರು, ಪಾಲಕರು ಮತ್ತು ಹಿರಿಯರನ್ನು ಆದರದಿಂದ ಕಾಣಬೇಕೆಂದು ಕರೆ ನೀಡಿದರು. ಬೈಟ್
ಇನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಸಿ.ಎಂ. ತ್ಯಾಗರಾಜ್ ಅವರು ಮದ್ಯ ಮುಕ್ತ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಎಲ್ಲರೂ ಒಂದಾಗಿರುವುದು ನಿಜಕ್ಕೂ ಸಂತಸದ ಸಂಗತಿ. ಯುವಜನೋತ್ಸವಗಳು ಮನುಷ್ಯನಲ್ಲಿ ಸ್ಫೂರ್ತಿ ತುಂಬುತ್ತವೆ. ಜೀವನದಲ್ಲಿ ಸ್ಫೂರ್ತಿಯೇ ಶಕ್ತಿ. ಹೊಸತನದಿಂದ ತಮ್ಮಲ್ಲಿರುವ ಶಕ್ತಿ ಅರಳಿ, ಜಾಗತೀಕ ಮನ್ನಣೆ ಪಡೆಯುತ್ತದೆ. ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿ ಬೆಳೆದು ಅದುವೇ ಜೀವನದ ವಿಧಾನವಾಗುತ್ತದೆ ಎಂದರು. ಬೈಟ್
ಸಿಪಿಐ ಕಾಲಿಮಿರ್ಚಿ ಅವರು 112 ಸಹಾಯವಾಣಿಯ ಮಹತ್ವ ಮತ್ತು ಕಾರ್ಯವನ್ನು ತಿಳಿಸಿದರು. ಪೊಲೀಸ್ ಠಾಣೆಗಳೂ ಮೊದಲೂ ಭಯದ ಕೇಂದ್ರಗಳಾಗಿದ್ದವು. ಆದರೇ, ಈಗ ಇಲಾಖೆ 112 ಸಹಾಯವಾಣಿಯ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಸಾರ್ವಜನಿಕರ ಸಮಸ್ಯೆ ಪೊಲೀಸ ಇಲಾಖೆ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಲು ಸದಾ ಪೊಲೀಸ್ ಇಲಾಖೆ ಸಕ್ರಿಯವಾಗಿದೆ ಎಂದರು. ಬೈಟ್
ವೇದಿಕೆ ಮೇಲೆ ಉತ್ತರ ಶಾಸಕರಾದ ಆಸೀಫ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಸಿ.ಎಂ. ತ್ಯಾಗರಾಜ್, ಕುಲಸಚಿವರಾದ ಸಂತೋಷ ಕಾಮಗೌಡ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಬಿ.ಶ್ರೀನಿವಾಸ, ಸಂಗೊಳ್ಳಿ ರಾಯಣ್ಣ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಸಿ. ಪಾಟೀಲ್, ಸಿಪಿಐ ಕಾಲಿಮಿರ್ಚಿ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.
Laxmi News 24×7