ಮಾದಕ ವಸ್ತು ಸೇವನೆ; ಅಕ್ರಮ ಸಾರಾಯಿ ಮಾರಾಟ
ಆರು ಪ್ರಕರಣಗಳಲ್ಲಿ ಆರು ಜನರ ಬಂಧನ!!!
ಮಾದಕ ವಸ್ತು ಸೇವನೆ
ಅಕ್ರಮ ಸಾರಾಯಿ ಮಾರಾಟ
ಆರು ಪ್ರಕರಣಗಳಲ್ಲಿ ಆರು ಜನರ ಬಂಧನ!!!
ಬೆಳಗಾವಿ ಪೊಲೀಸರ ಯಶಸ್ವಿ ಕಾರ್ಯಾಚರಣೆಮಾದಕ ವಸ್ತು ಸೇವನೆ ಮತ್ತು ಅಕ್ರಮ ಸಾರಾಯಿ ಮಾರಾಟ ಪ್ರಕರಣವನ್ನು ಬೇಧಿಸಿರುವ ಬೆಳಗಾವಿ ಪೊಲೀಸರು ಆರು ಪ್ರಕರಣಗಳಲ್ಲಿ ಯಶಸ್ವಿ ಕಾರ್ಯಾಚರನೆ ನಡೆಸಿ ಆರು ಜನರನ್ನು ವಶಕ್ಕೆ ಪಡೆದು, 9900 ರೂಪಾಯಿ ಮೌಲ್ಯದ ಅಕ್ರಮ ಸಾರಾಯಿ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ದಿನಾಂಕ: 15/10/2025 ರಂದು, ಬೆಳಗಾವಿಯ ಕಂಗ್ರಾಳ ಕೆ.ಎಚ್., ಪಾಟೀಲ ಗಲ್ಲಿ ನಿವಾಸಿ ಮಹಾದೇವ ಗಜಾನನ ಪಾಟೀಲ ಜ್ಯೋತಿ ನಗರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿರುವುದು ಕಂಡು ಬಂದಾಗ ವಿಚಾರಣೆ ನಡೆಸಿದಾಗ, ಆತ ಯಾವುದೋ ಮಾದಕ ಪದಾರ್ಥ ಸೇವನೆ ಮಾಡಿರುವಂತೆ ಕಂಡುಬಂದ ಹಿನ್ನೆಲೆಯಲ್ಲಿ, ಎಪಿಎಂಸಿ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಆರ್. ಮುತ್ತತ್ತಿ, ಮತ್ತು ಸಿಬ್ಬಂದಿಯವರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.
ಅದೇ ರೀತಿ ಬೆಳಗಾವಿಯ ಶಾಹೂ ನಗರದ ಶಿವನೇರಿ ಗಲ್ಲಿ ನಿವಾಸಿ ಅಭಿಷೇಕ ದೌಲತ ಪಾಟೀಲ, ಬೆಳಗಾವಿಯ ಮಾರ್ಕಂಡೇಯ ನಗರದ ನಿವಾಸಿ ರಾಹುಲ ಸಂಜಯ ಘೋಡಕೆ ಎಪಿಎಂಸಿ ಮಾರ್ಕೆಟ್ ಯಾರ್ಡ್ ಗೇಟ್ ಬಳಿ ಮಾದಕ ಪದಾರ್ಥ ಸೇವನೆ ಮಾಡಿರುವುದು ಕಂಡುಬಂದಿದ್ದು, ಮೂವರ ವಿರುದ್ಧ ಮಾದಕವಸ್ತು ಸೇವಿಸಿರುವುದು ದೃಢಪಟ್ಟ ಹಿನ್ನೆಲೆ ಪ್ರಕರಣ ದಾಖಲಿಸಿ, ತನಿಖೆಯನ್ನು ಮುಂದುವರೆಸಲಾಗಿದೆ.
ಬೆಳಗಾವಿಯ ಶ್ರೀನಗರ ಜೋಪಡಪಟ್ಟಿಯ ನಿವಾಸಿ ಮುಸ್ತಾಕ ಹಜರತಸಾಬ ಮಕಾನದಾರ ಶ್ರೀನಗರ ಗಾರ್ಡನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಾದಕ ಪದಾರ್ಥ ಸೇವನೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಪಿಎಸ್‌ಐ ಯು. ಟಿ. ಪಾಟೀಲ ಹಾಗೂ ಸಿಬ್ಬಂದಿಯವರು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿದ್ದು ದೃಢಪಟ್ಟಿದೆ. ಈ ಹಿನ್ನೆಲೆ ಪ್ರಕರಣ ದಾಖಲಿಸಿ, ತನಿಖೆಯನ್ನು ಮುಂದುವರೆಸಲಾಗಿದೆ.
ಬೆಳಗಾವಿ ಗ್ರಾಮೀಣ ಪೊಲೀಸರು ನಂದಿಹಳ್ಳಿಯ ವಾಕಡೇವಾಡಾ ರಸ್ತೆಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ದೇವಪ್ಪ ಬಾಳಪ್ಪ ಲೋಕೂರ ಎಂಬಾತನ ಮೇಲೆ ದಾಳಿ ನಡೆಸಿದ್ದಾರೆ. ಲೈಸನ್ಸ್ ಇಲ್ಲದೆ ತನ್ನ ಸ್ವಂತ ಲಾಭಕ್ಕಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷ ದಳವಾಯಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿದರು. ಈ ವೇಳೆ, ಆರೋಪಿಯಿಂದ ‘ಓರಿಜಿನಲ್ ಚಾಯ್ಸ್’ ಕಂಪನಿಯ 90 ಮಿಲಿ 35 ಟೆಟ್ರಾ ಪ್ಯಾಕೇಟ್ ಮತ್ತು ‘ಗ್ರೀನ್ ಚಾಂಪಿಯನ್ ಸುಪೀರಿಯರ್ ವಿಸ್ಕಿ’ ಕಂಪನಿಯ ಸುಮಾರು 38 ಟೆಟ್ರಾ ಪ್ಯಾಕೇಟ್‌ಗಳೂ ಸೇರಿದಂತೆ ಒಟ್ಟು ರೂ. 3,650/- ಮೌಲ್ಯದ ಅಕ್ರಮ ಸರಾಯಿ ಹಾಗೂ ಮಾರಾಟದಿಂದ ಬಂದ ರೂ. 450/- ನಗದು ಹಣ ಸೇರಿ ಒಟ್ಟು ರೂ. 4,100 ಮೌಲ್ಯದ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗಿದೆ ಮತ್ತು ತನಿಖೆ ಮುಂದುವರೆಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸರು ನಾವಗೆ ಗ್ರಾಮದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಸಂತಿಬಸ್ತವಾಡದ ಕಾರ್ಲೇಕರ ಗಲ್ಲಿ ನಿವಾಸಿ ರಾಜೇಂದ್ರ ಫಕೀರಾ ಮೇಲಗೆ ಎಂಬಾತನ ಮೇಲೆ. ಪಿಎಸ್‌ಐಶ್ರೀ ಲಕ್ಕಪ್ಪ ಜೋಡಟ್ಟ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ, ರೂ. 5,840/- ಮೌಲ್ಯದ ವಿವಿಧ ಕಂಪನಿಗಳ ಮದ್ಯದ ಟೆಟ್ರಾ ಪ್ಯಾಕೇಟ್‌ಗಳು, ನಗದು ಹಾಗೂ ಇತರ ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿಯ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿ, ತನಿಖೆಯನ್ನು ಮುಂದುವರೆಸಲಾಗಿದೆ.ಪೊಲೀಸ ಆಯುಕ್ತರು ಮತ್ತು ಉಪಾಯುಕ್ತರು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
Laxmi News 24×7