Breaking News

ಅಜ್ಮೀರ್ ದರ್ಗಾದಲ್ಲಿ ಜಾರಕಿಹೊಳಿ ಕುಟುಂಬದ ಕ್ಷೇಮಕ್ಕಾಗಿ ಅಭಿಮಾನಿಗಳ ದುಆ. (ಪ್ರಾರ್ಥನೆ)

Spread the love

ಅಜ್ಮೀರ್ ದರ್ಗಾದಲ್ಲಿ ಜಾರಕಿಹೊಳಿ ಕುಟುಂಬದ ಕ್ಷೇಮಕ್ಕಾಗಿ ಅಭಿಮಾನಿಗಳ ದುಆ. (ಪ್ರಾರ್ಥನೆ) ಸಲ್ಲಿಸಿದರು.
ರಾಜಸ್ಥಾನದ ಪವಿತ್ರ ಅಜ್ಮೀರ್ ಶರೀಫ್ ದರ್ಗಾ, ಖ್ವಾಜಾ ಗರೀಬ್ ನವಾಜ್‌ ಅವರ ದಿವ್ಯ ಸಮಾಧಿಯು,
ದೇಶದಾದ್ಯಂತದ ಜನರ ನಂಬಿಕೆಯ ಕೇಂದ್ರವಾಗಿದೆ. ಇತ್ತೀಚೆಗೆ ಕರ್ನಾಟಕದ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಈ ಪವಿತ್ರ ತಾಣಕ್ಕೆ ಭೇಟಿ ನೀಡಿ, ಕುಟುಂಬದ ಆರೋಗ್ಯ, ರಾಜಕೀಯ ಸ್ಥಿರತೆ ಮತ್ತು ಜನಪರ ಸೇವೆಗೆ ಶಕ್ತಿ ದೊರೆಯಲಿ ಎಂಬ ಉದ್ದೇಶದಿಂದ ವಿಶೇಷ ದುಆ (ಪ್ರಾರ್ಥನೆ) ಸಲ್ಲಿಸಿದರು.
ಅಭಿಮಾನಿಗಳ ಒಂದು ಗುಂಪು ಬೆಳಿಗ್ಗೆಯ ಫಜರ್ ನಮಾಜ್ ನಂತರ ದರ್ಗಾ ಶರೀಫ್ ಪ್ರವೇಶಿಸಿ, ಹೂವು ಮತ್ತು ಸುಗಂಧ ಅತ್ತರ್ ಸಹಿತ ಚಾದರ್ ಅರ್ಪಿಸಿದರು.
ಪೀರ್‌ಸಾಹೇಬರು ದರ್ಗಾದ ಒಳಗೆ ವಿಶೇಷ ಆಯತಗಳನ್ನು ಪಠಿಸಿದರು ಹಾಗೂ “ಜಾರಕಿಹೊಳಿ ಕುಟುಂಬ ಸದಾ ಜನರ ಹಿತಕ್ಕಾಗಿ ಕೆಲಸ ಮಾಡಲಿ, ಖ್ವಾಜಾ ಗರೀಬ್ ನವಾಜ್ ಅವರ ಕೃಪೆ ಅವರ ಮೇಲೆ ಇರಲಿ” ಎಂದು ದುಆ ಹೇಳಿದರು.
ಅಭಿಮಾನಿಗಳು ಹೇಳಿದರು
ಅವರಲ್ಲಿ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ. ಮುಸ್ಲಿಂ ಸಮುದಾಯದ ಹಾತ್ತಿವಾಲೆ ಕುಟುಂಬದ ಸದಸ್ಯರಿಂದ
ಪ್ರಯಾಣ ಬೆಳೆಸಿದ್ದರು. ಕೆಲವರು ಕಾಲ್ನಡಿಗೆಯಲ್ಲೇ ದರ್ಗಾ ತಲುಪಿದ್ದರು ಎಂದು ತಿಳಿದುಬಂದಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ