Breaking News

ಸರ್ಕಾರಿ ಜಾಗದಲ್ಲಿ ಆರ್.ಎಸ್.ಎಸ್. ಚಟುವಟಿಕೆ ನಿಷೇಧಿಸುವುದು ಫಿಕ್ಸಾ? ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಖಚಿತ

Spread the love

ಸರ್ಕಾರಿ ಜಾಗದಲ್ಲಿ ಆರ್.ಎಸ್.ಎಸ್. ಚಟುವಟಿಕೆ ನಿಷೇಧಿಸುವುದು ಫಿಕ್ಸಾ?
ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಖಚಿತ
ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಆರ್.ಎಸ್.ಎಸ್.ಗೆ ಅಂಕುಶನಾ?
ನೇರವಾಗಲ್ಲದ್ದಿದ್ದರೂ ಆರ್.ಎಸ್.ಎಸ್. ಚಟುವಟಿಕೆಗಳ ನಿರ್ಬಂಧದ ಕುರಿತು ಚರ್ಚೆ
2013ರಲ್ಲಿನ ಬಿಜೆಪಿ ಸರ್ಕಾರ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಶಾಲಾ ಮೈದಾನದಲ್ಲಿ ಯಾವುದೇ ಸಂಘ ಸಂಸ್ಥೆಗಳ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಪಡೆಯಬೇಕೆಂದು ನೀಡಿದ ಆದೇಶವನ್ನು ಅಸ್ತ್ರವಾಗಿರಿಸಿಕೊಂಡು ರಾಜ್ಯ ಸರ್ಕಾರ ಆರ್.ಎಸ್.ಎಸ್. ಚಟುವಟಿಕೆಗಳಿಗೆ ಅಂಕುಶ ಹಾಕುವ ಸಾಧ್ಯತೆಯಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಶಾಲಾ ಮೈದಾನಗಳಲ್ಲಿ ಶಿಕ್ಷಣ ಹೊರತುಪಡಿಸಿ ಯಾವುದೇ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂಬ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, 2019ರಲ್ಲಿ ಜಗದೀಶ್ ಶೆಟ್ಟರ್ ಅವರು ಸಿಎಂ ಆಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹೊರತು ಪಡಿಸಿ ಬೇರೆ ಯಾವ ಕಾರ್ಯಕ್ರಮ ನಡೆಸಬಾರದು ಎಂದು ಆದೇಶಿಸಿದ್ದರು. ಕರ್ನಾಟಕದಲ್ಲಿಯೂ ಯಾವುದೇ ಸಂಘಗಳು ಶಾಲಾ ಮಕ್ಕಳಿಗೆ ಶಿಕ್ಷಣದ ಬದಲೂ ಪ್ರಚೋದನೆ ಭಾಷಣ ನೀಡಿ, ಕೋಮುವಿನ ವಿಷ ಬೀಜ ಬಿತ್ತಲು ಬಿಡುವುದಿಲ್ಲ.
ಅಲ್ಲದೇ ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್ ಆಗಲಿ ಬೇರೆ ಯಾವುದೇ ಸಂಘಟನೆಯ ಬಗ್ಗೆ ಆಸಕ್ತಿಯಿದ್ದರೇ, ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಅದರಲ್ಲಿ ಭಾಗಿಯಾಗಿ ಎಂದರು.
ನಾವು ಹೊಸದಾಗಿ ನಿಯಮ ಹೇರುತ್ತಿಲ್ಲ. ಇದ್ದ ನಿಯಮಗಳು ಪಾಲನೆ ಮಾಡಬೇಕು ಅಷ್ಟೇ. ಸರ್ಕಾರದಿಂದ ಸಂಬಳ ಪಡೆದು, ಸಂಘಟನೆಗಳ ಜೊತೆ ಸಂಬಂಧ ಇಟ್ಟುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಗೃಹ ಸಚಿವ ಜಿ. ಪರಮೇಶ್ವರ ಅವರು ಆರ್.ಎಸ್.ಎಸ್. ನಿರ್ಬಂಧದ ಕುರಿತು ಅಜೆಂಡಾದಲ್ಲಿ ಬಂದಿಲ್ಲ. ಎಡಿಷನಲ್ ಅಜೆಂಡಾದಲ್ಲಿ ಬಂದರೇ ಚರ್ಚೆ ಮಾಡುತ್ತೇವೆ. ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು, ಕಾರ್ಮಿಕ ಸಂಸ್ಥೆಗಳು, ಕಾರ್ಯಕ್ರಮವನ್ನು ನಡೆಸಲು ಅನುಮತಿ ಪಡೆಯಬೇಕೆಂಬ ನಿಯಮ ಮೊದಲಿನಿಂದಲೂ ಇದೆ ಎಂದಿದ್ದಾರೆ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ