ಬ್ರಹ್ಮಕುಮಾರಿಸ್ ಜಾಗತಿಕ ಶೃಂಗ ಸಭೆಯಲ್ಲಿ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರು ಭಾಗಿ
-ಖಾನಾಪೂರದ ಶಾಸಕ ಮಹಾಲಕ್ಷ್ಮಿ ಗ್ರುಪ್ ಸಂಸ್ಥಾಪಕ ಅಧ್ಯಕ್ಷ ವಿಠ್ಠಲ ಹಲಗೇಕರ ಅವರು ರಾಜಾಸ್ಥಾನದ ಮೌಂಟ್ ಅಬು ಶಾಂತಿವನ ಕ್ಯಾಂಪಸ್ ನಲ್ಲಿ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ “ಏಕತೆ ಮತ್ತು
ವಿಶ್ವಾಸ” ಕುರಿತು ಜಾಗತಿಕ ಶೃಂಗ ಸಭೆಯಲ್ಲಿ ಭಾಗವಹಿಸಿದ್ದರು
ಈ ಬೃಹತ್ ಅಂತಾರಾಷ್ಟ್ರೀಯ ಶೃಂಗ ಸಭೆಯಲ್ಲಿ ಜಾಗತಿಕ ನಾಯಕರು, ನೀತಿ ನಿರೂಪಕರು, ಪರಿಸರವಾದಿಗಳು, ಶಿಕ್ಷಣ ತಜ್ಞರು ಮತ್ತು ಆಧ್ಯಾತ್ಮಿಕ ದಾರ್ಶನಿಕರು ಸೇರಿದಂತೆ ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಗಣ್ಯರು ಭಾಗವಹಿಸಿದ್ದರು ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನ
ಸವಾಲುಗಳಿಗೆ ಆಧ್ಯಾತ್ಮಿಕ ಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ ಇದರಲ್ಲಿ ಭಾಗವಹಿಸಿದ ಶಾಸಕ ವಿಠ್ಠಲ ಹಲಗೇಕರ ಅವರು ಎಲ್ಲಾ ಆಚಾರ ವಿಚಾರಗಳನ್ನು ಪಡೆದುಕೊಂಡರು ಈ ಸಂದರ್ಭದಲ್ಲಿ ಅವರನ್ನು ಬ್ರಹ್ಮ ಕುಮಾರೀಸ್ ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
Laxmi News 24×7