Breaking News

ಕೊಪ್ಪಳ ಯಲ್ಲಾಲಿಂಗ ಕೊಲೆ ಕೇಸ್​​: ಸಚಿವ ಶಿವರಾಜ ತಂಗಡಗಿ ಆಪ್ತ ಸೇರಿ 9 ಆರೋಪಿಗಳು ಖುಲಾಸೆ

Spread the love

ಕೊಪ್ಪಳ, ಅಕ್ಟೋಬರ್​ 03: ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣಕ್ಕೆ (Yallaling murder case) ಸಂಬಂಧಿಸಿದಂತೆ ಇದೀಗ ಅಂತಿಮ ತೀರ್ಪು ಪ್ರಕಟವಾಗಿದೆ. ಸಚಿವ ಶಿವರಾಜ ತಂಗಡಗಿ (Shivaraj Tangadagi) ಆಪ್ತ ಹನುಮೇಶ್ ನಾಯಕ್ ಸೇರಿದಂತೆ ಎಲ್ಲಾ 9 ಆರೋಪಿಗಳನ್ನು ಕೇಸ್​ನಿಂದ ಖುಲಾಸೆ ಮಾಡಲಾಗಿದೆ. ಸೂಕ್ತ ಸಾಕ್ಷ್ಯಾಧಾರ ಇಲ್ಲದ ಹಿನ್ನೆಲೆಯಲ್ಲಿ ಕೇಸ್ ಖುಲಾಸೆ ಮಾಡಿ ಕೊಪ್ಪಳ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಶುಕ್ರವಾರ ಆದೇಶ ಹೊರಡಿಸಲಾಗಿದೆ.

ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ್ ನಾಯಕ್, ಮಹಾಂತೇಶ್ ನಾಯಕ್, ಮನೋಜ್ ಪಾಟೀಲ್, ಬಾಳನಗೌಡ, ಕಾಡ ಮಂಜ, ಯಮನೂರಪ್ಪ, ದುರ್ಗಪ್ಪ, ನಂದೀಶ್, ಪರಶರಾಮ್ ಕೇಸ್​ನಿಂದ ಖುಲಾಸೆಗೊಂಡವರು.

ಶಿವರಾಜ್ ತಂಗಡಗಿ ಸಲುವಾಗಿ ನನ್ನ ಜೈಲಿಗೆ ಹಾಕಿದ್ರು: ಹನುಮೇಶ್ ನಾಯಕ್​ 

ಈ ಕುರಿತಾಗಿ ಟಿವಿ9 ಜೊತೆಗೆ ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ್ ನಾಯಕ್​ ಮಾತನಾಡಿದ್ದು, ನ್ಯಾಯದೇವತೆ ನಮಗೆ ನ್ಯಾಯ ಒದಗಿಸಿದ್ದಾಳೆ. ಬಹಳ ಸಂತೋಷ ಆಗಿದೆ. ಇದು ಸುಳ್ಳು ಕೇಸ್. ಶಿವರಾಜ್ ತಂಗಡಗಿ ಗೆದ್ದಿದ್ದು ನನ್ನ ಕ್ಷೇತ್ರದಿಂದ. ನನ್ನ ಮೇಲೆ ಸುಳ್ಳು ಆರೋಪ ಮಾಡಿದರು. ಶಿವರಾಜ್ ತಂಗಡಗಿ ಸಲುವಾಗಿ ನನ್ನ ಜೈಲಿಗೆ ಹಾಕಿದ್ದರು ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ