Breaking News

ದಸರಾ ಜಂಬೂಸವಾರಿ ಇಂದು: ಭೀಮನ ತೂಕ 440 ಕೆ.ಜಿ ಹೆಚ್ಚಳ, ಉಳಿದ ಆನೆಗಳ ತೂಕ ಹೀಗಿದೆ

Spread the love

ಮೈಸೂರು: ಆಯುಧ ಪೂಜೆಯ ದಿನವಾದ ನಿನ್ನೆ(ಬುಧವಾರ) 14 ದಸರಾ ಆನೆಗಳ ತೂಕ ಹಾಕಲಾಯಿತು. ಭೀಮ ಆನೆಯ ತೂಕ 440 ಕೆ.ಜಿ ಹೆಚ್ಚಳವಾಗಿದ್ದು ಕಂಡುಬಂದಿದ್ದು, ಗಜಪಡೆಯಲ್ಲಿ ಇವನೇ ಬಲಶಾಲಿಯಾಗಿದ್ದಾನೆ.

ಶಿಬಿರಗಳಿಂದ ಅರಮನೆಗೆ ಬಂದಾಗ ಯಾವ ಆನೆ ಎಷ್ಟು ತೂಕವಿತ್ತು, ಈಗ ಎಷ್ಟು ತೂಕವಿದೆ ಎಂಬ ಮಾಹಿತಿ ಪಡೆಯಲು ಆನೆಗಳನ್ನು ತೂಕ ಹಾಕಲಾಗುತ್ತದೆ.

ಆನೆಗಳು ಅರಮನೆಗೆ ಬಂದಾಗ(ಕೆ.ಜಿ) ಹೆಚ್ಚಳವಾದ ತೂಕ(ಕೆ.ಜಿ) ಒಟ್ಟು ತೂಕ(ಕೆ.ಜಿ)
ಅಭಿಮನ್ಯು 5635 275 5910
ಲಕ್ಷ್ಮಿ 3940 210 4150
ಮಹೇಂದ್ರ 5365 245 5590
ಕಂಜನ್ 522 345 5570
ಶ್ರೀಕಂಠ 5860 320 6180
ಏಕಲವ್ಯ 5695 390 6085
ಭೀಮ 5905 440 6345
ಧನಂಜಯ 5650 340 5990
ಕಾವೇರಿ 3235 225 3460
ಗೋಪಿ 5245 255 5500
ಹೇಮಾವತಿ 2675 235 2910
ಸುಗ್ರೀವ 5895 350 6245
ರೂಪ 3360 40 3400
ಪ್ರಶಾಂತ 5160 50 5210

ಲೋಕಾಯುಕ್ತ ಕಚೇರಿ ರಸ್ತೆಯಲ್ಲಿರುವ ದರ್ಗಾದಲ್ಲಿ ಎಲ್ಲ ಆನೆಗಳಿಗೂ ಪೂಜೆ ಮಾಡಿ ಶುಭ ಹಾರೈಸಿ ಕಳುಹಿಸುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಇಂದಿಗೂ ಮುಂದುವರೆದಿದೆ.

ಇಂದು ಸಂಜೆ ದಸರಾ ಗಜಪಡೆಯ ನಾಯಕ ಅಭಿಮನ್ಯು 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡುವರು. ಬಳಿಕ ಅಭಿಮನ್ಯು ಆನೆ ಅರಮನೆ ಬಳಿಯಿಂದ ಚಿನ್ನದ ಅಂಬಾರಿ ಹೊತ್ತು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಲಿದೆ. ಆಕರ್ಷಕ ಸ್ತಬ್ಧ ಚಿತ್ರಗಳು, ಕಲಾತಂಡಗಳು ಜಂಬೂ ಸವಾರಿ ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.

ಅರಮನೆಯಲ್ಲಿ ಆಸನದ ವ್ಯವಸ್ಥೆ: ಜಂಬೂ ಸವಾರಿ ವೀಕ್ಷಣೆಗೆ ಅಂಬಾವಿಲಾಸ ಅರಮನೆ ಮುಂಭಾಗ ಮೈಸೂರು ಜಿಲ್ಲಾಡಳಿತ ಸುಮಾರು 45 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಿದೆ. ಅಂಬಾರಿ ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲಿ ಜನರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ 7 ಗಂಟೆಗೆ ಬನ್ನಿಮಂಪಟದಲ್ಲಿ ಪಂಜಿನ ಕವಾಯತು ನಡೆಯಲಿದೆ. ಇದರೊಂದಿಗೆ ದಸರಾ ಆಚರಣೆ ಸಮಾಪನಗೊಳ್ಳಲಿದೆ.

ಪೊಲೀಸ್ ಭದ್ರತೆ: ಜಂಬೂ ಸವಾರಿ ಸಾಗುವ ಮಾರ್ಗದುದ್ದಕ್ಕೂ ಹಾಗೂ ಮೈಸೂರು ನಗರದಲ್ಲಿ ಎರಡನೇ ಹಂತದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದಲ್ಲಿ ಭದ್ರತೆಗೆ ಸುಮಾರು 6,384 ಪೊಲೀಸರನ್ನು ನಿಯೋಜಿಸಲಾಗಿದ್ದು, 30 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಂಬೂ ಸವಾರಿಯ ಸುತ್ತಲೂ ಕಮಾಂಡೋಗಳ ಕಾವಲು ಇರಲಿದೆ. ಯಾವುದೇ ಜನಸಂದಣಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪಾಸ್ ಇಲ್ಲದವರಿಗೆ ಪ್ರವೇಶ ಇರುವುದಿಲ್ಲ: ಜಂಬೂ ಸವಾರಿಯು ಸುಗಮ ಹಾಗೂ ಸುರಕ್ಷಿತವಾಗಿ ಸಾಗಲು ಪೊಲೀಸರು ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 10 ಕಡೆಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ನೂಕುನುಗ್ಗಲು, ಅವಘಡ ತಪ್ಪಿಸಲು ಎಚ್ಚರಿಕಾ ಫಲಕಗಳನ್ನು ಹಾಕಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ಆಂಬ್ಯುಲೆನ್ಸ್​ಗಳನ್ನು‌ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ