Breaking News

ದಸರಾ ಬೊಂಬೆಗಳೊಂದಿಗೆ ಕೊರಿಯಾ ಡಾಲ್ ಸೇರ್ಪಡೆ

Spread the love

ಚಿಕ್ಕಮಗಳೂರು : ದಸರಾ ಹಬ್ಬದ ಸಂದರ್ಭದಲ್ಲಿ ಮನೆ ಮನೆಯಲ್ಲಿ ಬೊಂಬೆಗಳನ್ನು ಕೂರಿಸುವುದು ಸರ್ವೇ ಸಾಮಾನ್ಯ. ಆದರೆ, ಚಿಕ್ಕಮಗಳೂರಿನಲ್ಲಿ ಈ ಬೊಂಬೆಗಳ ಸಾಮ್ರಾಜ್ಯ ನೋಡಿದರೆ ಸಂತೋಷವಾಗುವುದಂತೂ ಖಂಡಿತ. ರಜನಿ ಸತೀಶ್ ಅವರ ಮನೆಯಲ್ಲಿ ಕೊರಿಯಾದ ಸಂಪ್ರದಾಯ ಸಾರುವ ಬೊಂಬೆಗಳನ್ನ ತಂದು ಕೂರಿಸಿದ್ದಾರೆ.

ರಜನಿ ಸತೀಶ್ ಅವರು ಕೊರಿಯಾಗೆ ಹೋದ ಸಂದರ್ಭದಲ್ಲಿ ಕೊರಿಯಾದ ಸಂಪ್ರದಾಯ ಸಾರುವ ಬೊಂಬೆಗಳನ್ನ ತಂದು ಅದನ್ನ ಮನೆಯಲ್ಲಿ ಕೂರಿಸಿ ಜನರನ್ನು ಆಕರ್ಷಿತರನ್ನಾಗಿಸಿದ್ದಾರೆ. ಅದರ ಜೊತೆಗೆ ವಿಶೇಷವಾಗಿ ಆನೆಯ ಮೇಲೆ ಸಿದ್ದಿ ಬುದ್ದಿ ಬರುವ ಗಣಪತಿ ಕೂಡ ಇಟ್ಟಿದ್ದಾರೆ. ಇನ್ನು ಹಳ್ಳಿಯ ಸಂಪ್ರದಾಯ, ಅಮೆರಿಕನ್ ಗೊಂಬೆಗಳು, ಅಜ್ಜ – ಅಜ್ಜಿಯ ವ್ಯಾಪಾರ, ಮದುವೆ ಸಂಭ್ರಮ, ಹೀಗೆ ವಿವಿಧ ಬೊಂಬೆಗಳನ್ನ ಮನೆಗಳಲ್ಲಿ ಇಟ್ಟಿದ್ದಾರೆ.

ಇನ್ನೂ ವಿಶೇಷ ಅನ್ನುವಂತೆ ಗೊಂಬೆ ಕೂರಿಸುವವರು ಪ್ರತೀ ವರ್ಷ ಹಳೆಯ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಸೇರಿಸಿ ಗೊಂಬೆ ಕೂರಿಸಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಹಾಗಾಗಿ ಪ್ರತಿಯೊಬ್ಬರೂ ಹಳೆ ಗೊಂಬೆ ಜೊತೆಗೆ ಹೊಸ ಗೊಂಬೆಯನ್ನು ಕೂರಿಸುತ್ತಾರೆ.ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಬೊಂಬೆ. ಇದು ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಜನಪ್ರಿಯ. ಕನ್ನಡದಲ್ಲಿ ಇದನ್ನು ಗೊಂಬೆ ಹಬ್ಬ ಎಂದೂ ಕರೆಯುತ್ತಾರೆ. ಇದನ್ನ ಸಾಮಾನ್ಯವಾಗಿ ನವರಾತ್ರಿ ಸಂದರ್ಭದಲ್ಲಿ ಮಾಡುವುದು ವಿಶೇಷವಾಗಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ