Breaking News

ದಿನಾಂಕ 28/09/2025 ರಂದು, ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ “ವಿಶ್ವ ರೇಬೀಸ್ ದಿನ” ಪಶು ಆಸ್ಪತ್ರೆ ಬೆಳಗಾವಿಯ ರೈತ ಭವನದಲ್ಲಿ ಆಚರಿಸಲಾಯಿತು.

Spread the love

ದಿನಾಂಕ 28/09/2025 ರಂದು, ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ “ವಿಶ್ವ ರೇಬೀಸ್ ದಿನ” ಪಶು ಆಸ್ಪತ್ರೆ ಬೆಳಗಾವಿಯ ರೈತ ಭವನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರೇಬಿಸ್ ರೋಗದ ವಿರುದ್ಧ ಲಸಿಕೆಯನ್ನು ನೀಡಲಾಯಿತು.
ರಂಗೋಲಿ ಬಿಡಿಸುವ ಮೂಲಕ ಬೆಳಗಾವಿ ತಾಲೂಕಿನ ಪಶು ಸಖಿಯರಿಂದ ರೇಬಿಸ್ ರೋಗದ ಕುರಿತು ಅರಿವು ಮೂಡಿಸಲಾಯಿತು.
ಪ್ರಾಣಿ ದಯಾ ಸಂಘದ ಸದಸ್ಯರು, ಸ್ವಯಂ ಸೇವಕರು ಹಾಗೂ ಪ್ರಾಣಿ ಪ್ರಿಯರಿಗೆ ಪಾಲಿಕೆ ವತಿಯಿಂದ ಗುರುತಿನ ಚೀಟಿ ವಿತರಿಸಿಲ್ಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ಶ್ರೀಮತಿ ವಾಣಿವಿಲಾಸ ಜೋಶಿ ರವರು ಕಾರ್ಯಕ್ರಮ ಉದ್ಘಾಟಿಸಿದರು, ನಗರ ಸೇವಕರಾದ ಶ್ರೀ ಶಂಕರಗೌಡ ಪಾಟೀಲ್ ಅಧ್ಯಕ್ಷ ಸ್ಥಾನ ವಹಿಸಿದ್ದರು ಹಾಗೂ ಶ್ರೀ ಗಿರೀಶ್ ದೊಂಗಡಿ, ಶ್ರೀ ರಾಜೇಂದ್ರ ಜೈನ್, ಡಿ ಎಚ್ ಹೋ ಹೋ ಡಾಕ್ಟರ ಗಡಾದ್, ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರು ಡಾಕ್ಟರ್ ರವಿ ಸಾಲಿಗೌಡರ್ , ಮಹಾನಗರ ಪಾಲಿಕೆಯ ಡಾಕ್ಟರ್ ನಾಂದ್ರೆ, ಮುಖ್ಯ ಅತಿಥಿಗಳಾಗಿ
ಭಾಗವಹಿಸಿದರು. ಪರಿಸರ ಅಭಿಯಂತರು ಶ್ರೀ ಅಶೋಕ್ ಸಜ್ಜನ್ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ಡಾ ಶ್ರೀಕಾಂತ್ ಗಾವಿ ಅವರು ನಿರ್ವಹಿಸಿದರು. ಡಾಕ್ಟರ್ ಆನಂದ್ ಪಾಟೀಲ್ ಎಲ್ಲರನ್ನೂ ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲಿಕೆಯ ಅಧಿಕಾರಿ ಸಿಬ್ಬಂದಿ ಹಾಗೂ ಪಶು ಪಾಲನೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ