ಕನ್ನಡಾಭಿಮಾನಿಗಳು ಸಾಥ್ ನೀಡಿದ್ರೇ ಬೆಳಗಾವಿಯಲ್ಲಿ ಮೈಸೂರು ಮಾದರಿಯಲ್ಲಿ ನಾಡಹಬ್ಬ; ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಜೀ98ನೇ ನಾಡಹಬ್ಬ ಉತ್ಸವ
ಶುಕ್ರವಾರ ಸಂಜೆ ಕವಿಗೋಷ್ಟಿ ಆಯೋಜನೆ
ಕನ್ನಡಾಭಿಮಾನಿಗಳು ಸಾಥ್ ನೀಡಿದ್ರೇ ಬೆಳಗಾವಿಯಲ್ಲಿ ಮೈಸೂರು ಮಾದರಿಯಲ್ಲಿ ನಾಡಹಬ್ಬ
ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಜೀ ಅಭಿಪ್ರಾಯ
ಕನ್ನಡಾಭಿಮಾನಿಗಳು ಕೈ ಜೋಡಿಸಿದರೇ ಬೆಳಗಾವಿಯ 98 ವರ್ಷಗಳ ಇತಿಹಾಸವಿರುವ ನಾಡಹಬ್ಬ ಉತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ಆಚರಿಸಲು ಎರಡು ಮಾತಿಲ್ಲವೆಂದು ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಬೆಳಗಾವಿಯಲ್ಲಿ 98ನೇ ನಾಡಹಬ್ಬ ಉತ್ಸವದ 5ನೇಯ ದಿನ ಕವಿಗೋಷ್ಟಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದೆ ಮಂಗಲ ಅಂಗಡಿ ಉಪಸ್ಥಿತರಿದ್ಧರು. ಡಾ.ಎಚ್.ಬಿ. ರಾಜಶೇಖರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದ ಸಾನಿಧ್ಯವನ್ನು ವಹಿಸಿ ಪಂಚಗ್ರಾಮ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಎಲ್ಲರಿಗೂ ಆಶ್ರಯವಾದ ಈ ಧರೆಗೆ ಭೂಮಿತಾಯಿ ಎಂದು ಕರೆಯಲಾಗುತ್ತದೆ.
ವಿದ್ಯೆಗೆ ಸರಸ್ವತಿ, ಹರಿಯುವ ನದಿಗೆ ಗಂಗೆ, ದಿನನಿತ್ಯ ಪಡೆಯುವ ಸಂಪತ್ತಿಗೆ ಲಕ್ಷ್ಮೀ ಎಂದು ಕರೆಯುತ್ತೇವೆ. ಪ್ರತಿಯೊಂದು ಜೀವ ಹುಟ್ಟಿ ಬರಲೂ ತಾಯಿಯೇ ಮುಖ್ಯ. ತ್ರಿಮೂರ್ತಿಗಳು ಕೂಡ ಈ ಮಾತೃ ಶಕ್ತಿಯನ್ನು ಗುರುತಿಸಿ ಆಕೆಯನ್ನು ಆರಾಧಿಸಿದರೆಂಬದನ್ನು ದೇವಿ ಪುರಾಣದಿಂದ ಅರಿಯಬಹುದಾಗಿದೆ.
ಇನ್ನು ಮೈಸೂರು ಮಹಾರಾಜರು ಕೂಡ ಆನೆಯ ಅಂಬಾರಿಯ ಮೇಲೆ ತಾಯಿ ಭುವನೇಶ್ವರಿಯನ್ನು ಮೆರವಣಿಗೆ ಮಾಡಿ ದೇಶ ವಿದೇಶದಲ್ಲಿ ಪ್ರಖ್ಯಾತಿಯಾಗಿಸಿದ್ದಾರೆ ಎಂದರು. ಬೈಟ್ಇನ್ನು 98 ವರ್ಷಗಳ ಕಾಲ ನಡೆಯುತ್ತಿರುವ ಈ ನಾಡಹಬ್ಬಕ್ಕೆ ಇನ್ನಷ್ಟು ಮೆರಗು ನೀಡಿದಾಗ ಮೈಸೂರಿನ ಮಾದರಿಯಲ್ಲಿ ವಿಜೃಂಭಣೆಯ ನಾಡಹಬ್ಬವನ್ನು ಬೆಳಗಾವಿಯಲ್ಲಿ ಆಚರಿಸಲು ಎರಡು ಮಾತಿಲ್ಲ ಎಂದರು.
ಈ ಸಂದರ್ಭದಲ್ಲಿ ರಮೇಶ್ ಕುಡಚಿ, ಶಂಕರ ಬುಚಡಿ, ಶೀಲಾ ದೇಶಪಾಂಡೆ, ಆಶಾ ಹರಿದೇಶಪಾಂಡೆ, ವಿಜಯ ಕಾಮಕರ ಅವರನ್ನು ಸನ್ಮಾನಿಸಲಾಯಿತು.
ಡಾ.ಸಿ.ಕೆ. ಜೋರಾಪುರ, ಡಾ. ಎಚ್. ಐ. ತಿಮ್ಮಾಪೂರ.ಆರ್. ಪಿ ಪಾಟೀಲ್. ಎಂ.ಎಸ್. ಇಂಚಲ, ನೀಲಗಂಗಾ ಚರಂತಿಮಠ, ಭಾರತಿ ಇಂಗಳಗಿ ಅವರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು. ಶಾಂತಲಾ ನಾಟ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನೃತ್ಯ ಪ್ರಸ್ತುತಿ ನಡೆಯಿತು
Laxmi News 24×7