Breaking News

ಪತ್ನಿಯ ಕೊಲೆಗೆ ಯತ್ನಿಸಿದ ಪತಿಗೆ 10 ವರ್ಷ ಜೈಲು ಶಿಕ್ಷೆ

Spread the love

ದಾವಣಗೆರೆ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ ಗಂಡನಿಗೆ ಇಲ್ಲಿನ ನ್ಯಾಯಾಲಯ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ರೊಳ್ಳಿ ಪರಮೇಶ್ವರಪ್ಪ (51) ಶಿಕ್ಷೆಗೆ ಒಳಗಾದವ. ವೇದಾವತಿ ಹಲ್ಲೆಗೆ ಒಳಗಾದವರು.

ಸೆಪ್ಟಂಬರ್ 2, 2024ರಲ್ಲಿ ನಡೆದ ಪ್ರಕರಣವಿದು. ಪೊಲೀಸರು ತನಿಖೆ ನಡೆಸಿ ದಾವಣಗೆರೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪತಿ ತನ್ನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವುದಾಗಿ ವೇದಾವತಿ ಮಲೇಬೆನ್ನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಹರಿಹರ ತಾಲೂಕಿನ ಮಲೇಬೆನ್ನೂರಿನ ಬಸವೇಶ್ವರ ಬಡಾವಣೆ ನಿವಾಸಿಯಾದ ನಾನು, ಮಲೇಬೆನ್ನೂರಿನ ನಿಟ್ಟೂರು ರಸ್ತೆಯಲ್ಲಿ ಹೋಟೆಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದೆ. ನನ್ನ ಪತಿ ಪರಮೇಶ್ವರಪ್ಪ ಈ ಹಿಂದೆ ಯಲವಟ್ಟಿ ಗ್ರಾಮದ ಓರ್ವ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲಿಗೆ ಹೋಗಿದ್ದ. ಈ ವೇಳೆ ನಾನು ಹೈಕೋರ್ಟ್​ಗೆ ಹೋಗಿ ಜಾಮೀನಿನ ಮೇಲೆ ಅವನನ್ನು ಬಿಡಿಸಿಕೊಂಡು ಬಂದಿದ್ದೆ. ಆದರೆ, ನನ್ನ ಮೇಲೆ ಸಂಶಯಪಡುತ್ತಿದ್ದ. ಆಗಾಗ ಜಗಳ ಮಾಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ನೀನು ಮರೆತಿದ್ದೀಯಾ ಅಂತ ಕಬ್ಬಿಣದ ರಾಡ್​ ನಿಂದ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ವೇದಾವತಿ ಪೊಲೀಸರಿಗೆ ದೂರು ನೀಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾಧಿಕಾರಿ ಪಿಸ್ಐ ಪ್ರಭು.ಡಿ.ಕೆಳಗಿನಮನಿ ಅವರು ತನಿಖೆ ಕೈಗೊಂಡಿದ್ದರು. ನಿನ್ನ ಜೀವ ತೆಗೆಯದೆ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿರುವುದು ತನಿಖೆಯಿಂದ, ಸಾಕ್ಷಿದಾರರ ಹೇಳಿಕೆಗಳಿಂದ ಹಾಗೂ ಇತರೆ ದಾಖಲಾತಿಗಳಿಂದ ದೃಢಪಟ್ಟಿತ್ತು.‌


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ