ಹಾವೇರಿ: ವರದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನ 98 ಕ್ರೆಸ್ಟ್ ಗೇಟ್‌ಗಳನ್ನು ಖದೀಮರು ಕಳ್ಳತನ ಮಾಡಿಕೊಂಡು ಹೋಗಿದ್ದು, ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರು ಇದೀಗ ಆತಂಕದಲ್ಲಿದ್ದಾರೆ.
ರೈತರಿಗೆ ಹಾಗೂ ಜನ ಜಾನುವಾರುಗಳು ಅನುಕೂಲವಾಗಲಿ ಎಂಬ ಕಾರಣದಿಂದ ಕಳಸೂರು ಬಳಿ ವರದಾ ನದಿಗೆ ಪ್ರತಿವರ್ಷ ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಕ್ರೆಸ್ಟ್ ಗೇಟ್ ಅಳವಡಿಸಲಾಗುತ್ತಿತ್ತು. ಇದರಿಂದ ಕಳಸೂರು ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರಿಗೆ ನೀರಾವರಿಗೆ ನೀರು ಸಿಗುತ್ತಿತ್ತು. ಜಾನುವಾರುಗಳಿಗೆ ಕುಡಿಯುವ ನೀರು ಜೊತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೂ ನೀರು ಲಭ್ಯವಾಗುತ್ತಿತ್ತು. ಜೊತೆಗೆ ನದಿಯಲ್ಲಿ ನೀರು ನಿಂತರೆ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಹೆಚ್ಚಾಗುತ್ತಿತ್ತು. ಆದರೆ, ಪ್ರಸ್ತುತ ವರ್ಷ ಕ್ರೆಸ್ಟ್ ಗೇಟ್ ಅಳವಡಿಸಲು ಗೇಟ್‌ಗಳಿಲ್ಲ. ಇತ್ತೀಚೆಗೆ 137 ಕ್ರೆಸ್ಟ್ ಗೇಟ್‌ಗಳಲ್ಲಿ 98 ಗೇಟ್ಗಳು ಕಳ್ಳತನವಾಗಿದ್ದರಿಂದ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Laxmi News 24×7