ಗದಗ: ” ರಾಜ್ಯಾದ್ಯಂತ ಆರಂಭವಾಗುತ್ತಿರುವ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಸರ್ಕಾರಿ ಸಿಬ್ಬಂದಿಗಳು ಹಗರಣ ನಡೆಸಬಹುದು” ಎಂದು ಮಾಜಿ ಸಚಿವ ಸಿ. ಸಿ. ಪಾಟೀಲ್ ಶಂಕೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿದ್ದು, ಗಣತಿ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಸಮುದಾಯಗಳನ್ನು ಒಡೆಯುವ ಉದ್ದೇಶವೇ ಇದೆ. ಸಮುದಾಯದವರು ಎಚ್ಚರಿಕೆ ವಹಿಸಿ. ಗಣತಿ ಸಿಬ್ಬಂದಿಗಳಿಗೆ ಪೆನ್ಸಿಲ್ ಬಳಸದಂತೆ ಮತ್ತು ಪೆನ್ನಿನಿಂದ ಬರೆಯುವಂತೆ ಒತ್ತಾಯಿಸಿ ಎಂದು ಕರೆ ನೀಡಿದ್ದಾರೆ.
ಈ ಸರ್ಕಾರ ಜಾತಿ ಗಣತಿಯಲ್ಲಿ ಏನು ಬೇಕಾದರೂ ಮಾಡಬಹುದು. ಗಣತಿ ವೇಳೆ ಸಿಬ್ಬಂದಿಗಳು ಸೀಸ್ ಪೆನ್ಸಿಲ್ನಿಂದ ಅವಕಾಶ ಕೊಡಬೇಡಿ. ಪೆನ್ನಿನಿಂದ ಬರೆಯುವಂತೆ ಹೇಳಿ. ಆಮೇಲೆ ಅದನ್ನು ಅಳಸಿ ಏನ್ ಬೇಕಾದರೂ ತಿದ್ದಬಹುದು. ಈ ಸರ್ಕಾರದ ಮೇಲೆ ಯಾರ ಮೇಲೂ ನಂಬಿಕೆ ಇಲ್ಲ. ಏನು ಬೇಕಾದ್ದನ್ನು ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಪೆನ್ನಿನಿಂದಲೇ ಬರೆಯಿರಿ” ಎಂದು ಸಲಹೆ ನೀಡಿದರು.
ಪ್ರಮುಖವಾಗಿ, ಗಣತಿಗೆ ಬಂದ ಅಧಿಕಾರಿಗಳು ಸರ್ಕಾರದ ಪ್ರೇರಣೆಯಿಂದ ಬಂದಿರುತ್ತಾರೆ ಎಂದು ಆರೋಪಿಸಿದ ಪಾಟೀಲ್ ಅವರು, “ಪುರುಷರು ಇಲ್ಲದಾಗ ಬಂದು ಪ್ರಶ್ನೆಗಳನ್ನು ಟ್ವಿಸ್ಟ್ ಮಾಡಿ, ವೀರಶೈವ, ಲಿಂಗಾಯತ, ಪಂಚಮಸಾಲಿ ಅಂತ ಕೇಳಿ ಸಬ್ ಕಾಸ್ಟ್ ಏನೋ ಮಾಡುವ ಸಂದರ್ಭ ಇರುತ್ತದೆ. ಈ ಸರ್ಕಾರ ಯಾವ ಮಟ್ಟಕ್ಕಾದ್ರೂ ಹೋಗಬಹುದು. ಈ ಸರ್ಕಾರದ ಒಂದೇ ಉದ್ದೇಶ ಹಿಂದೂ ಸಂಸ್ಕೃತಿ ಮತ್ತು ವೀರಶೈವ ಸಮಾಜವನ್ನು ಒಡೆಯುವುದು” ಎಂದು ಆರೋಪಿಸಿದರು.
ಸಮುದಾಯದ ಬಾಂಧವರಿಗೆ ಮಾತನಾಡುತ್ತಾ, “ನಾವು ಹೇಳಿದಂತೆಯೇ ಬರೆದುಕೊಳ್ಳುವಂತೆ ಅಧಿಕಾರಿಗಳಿಗೆ ಹೇಳಬೇಕು” ಎಂದು ಕರೆ ನೀಡಿದ ಸಿ.ಸಿ. ಪಾಟೀಲ್ ಅವರು ಜಾತಿ ಗಣತಿ ಪ್ರಕ್ರಿಯೆಯಲ್ಲಿ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು.
ಇದು ಕೇವಲ ಜಾತಿ ಗಣತಿಯಲ್ಲ, ಜನರ ಸ್ಥಿತಿಗತಿಗಳ ಸಮೀಕ್ಷೆ-ಸಿಎಂ: ಇದೇ ಜಾತಿ ಗಣತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಗದಗದಲ್ಲಿ ನಿನ್ನೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದರು. ಈ ವೇಳೆ “ಇದು ರಾಜ್ಯದಲ್ಲಿ ನಡೆಸಲು ಉದ್ದೇಶಿಸಿರುವ ಸಮೀಕ್ಷೆಯು ಕೇವಲ ಜಾತಿ ಗಣತಿಯಾಗಿರದೇ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಜನರ ಜಾತಿಯ ವಿವರ ಪಡೆಯುವ ಜೊತೆಗೆ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ವಿವರ ಪಡೆದು, ಅವಕಾಶ ವಂಚಿತರಿಗೆ ಸಮಾನ ಅವಕಾಶ ಕಲ್ಪಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ” ಎಂದಿದ್ದರು.
Laxmi News 24×7