ಮಾಣಿಕವಾಡಿ ಕೊಲೆ ಪ್ರಕರಣದ ತನಿಖೆ ಬಗ್ಗೆ ಪಾಲಕರು ಸೇರಿದಂತೆ ಗ್ರಾಮಸ್ಥರು ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ
ಖಾನಾಪೂರ ತಾಲೂಕಿನ ಮಾಣಿಕವಾಡಿ ಗ್ರಾಮದ ಗ್ರಾಮಸ್ಥರು ಸೇರಿ ಮೃತ ಹುಡುಗ ವೆಂಕಪ್ಪ ಮಲ್ಹಾರಿ ಮಯೇಕರ ಅವರ ತಂದೆ ತಾಯಿ ಸೇರಿದಂತೆ ಪಂಚರು ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು ಈ ಸಂದರ್ಭದಲ್ಲಿ ಖಾನಾಪೂರ ಪೋಲಿಸ್ ಇನ್ಸ್ಪೆಕ್ಟರ್ ಎಲ್ ಎಚ್ ಗೌಂಡಿ ಅವರು ಕೂಡಾ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾಹಿತಿ ನೀಡಿ ತನಿಖೆ ನಡೆಸುತ್ತಿದ್ದು
ಟೇಕ್ನಿಕಲ್ ರಿಪೋಟ್ ದ ದಾರಿ ಕಾಯುತ್ತಿರುವುದಾಗಿ ಹೇಳಿದ್ರು ತನಿಖೆ ವಿಷಯಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಬರುವ ದಿನಗಳಲ್ಲಿ ಎಲ್ಲವೂ ತನಿಖೆಯಿಂದ ಹೊರಬರಲಿದೆ ಎಂದರು ಈ ಸಂದರ್ಭದಲ್ಲಿ ದೇವಪ್ಪ ಗಾವಡೆ, ಪರಶುರಾಮ ಮಯೇಕರ,
ನಾಗೇಶ್ ಗಾವಡಾ, ರಮೇಶ್ ಬೇಡರೇ, ಸಹದೇವ ಗಾವಡೆ,ವಿನಾಯಕ ಮಯೇಕರ, ಹನುಮಂತ ಹೊನ್ನಗೇಕರ,ಗಂಗಾರಾಮ ಗಾವಡಾ, ಗಣಪತಿ ಸುತಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ನಿಮ್ಮ ಜೋತೆ ಸದಾಕಾಲವೂ ಇರುವುದಾಗಿ ಭರವಸೆ ನೀಡಿದರು.
Laxmi News 24×7