ಮಲ್ಲಪ್ರಭಾ ಸಕ್ಕರೆ ಕಾರ್ಖಾನೆ: 200 ಕೋಟಿ ಸಾಲದ ನಡುವೆಯೂ ರೈತರಿಗೆ ಭರವಸೆ ನೀಡಿದ ಚನ್ನರಾಜ ಹಟ್ಟಿಹೊಳಿ |
ಮಲ್ಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ರೈತರ ಜೀವನಾಡಿ ಒಂದು ಸಮಯದಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು. 200 ಕೋಟಿಗೂ ಅಧಿಕ ಸಾಲ ಇರುವುದನ್ನು ಯಾವ ರೀತಿ ಹೊರ ತರಬೇಕೆಂದು ಪ್ರಯತ್ನಿಸಲಾಗುವುದು ಎಂದು ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಶನಿವಾರ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅತ್ಯಂತ ಪ್ರತಿಷ್ಠಿತ ಸಂಸ್ಥೆ, ರೈತರ ಸಂಸ್ಥೆ ಉಳಿಯಬೇಕೆಂದು ಪ್ಯಾನಲ್ ಮಾಡಿದ್ದೇವೆ. 15 ಸಾವಿರ ಸದಸ್ಯರಿದ್ದಾರೆ. ಸಂಸ್ಥೆಯನ್ನು ಕಟ್ಟಿದ ಗುರು ಹಿರಿಯರ ಆಶೀರ್ವಾದದಿಂದ ನಾಮಪತ್ರ ಸಲ್ಲಿಸಿದ್ದೇವೆ ಎಂದರು.
ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಗೆ ಪ್ಯಾನಲ್ ಮಾಡಿದ್ದೇವೆ.ಮೊದಲು 15 ಜನ ಗೆಲುವು ಸಾಧಿಸಿ ಬರಬೇಕು. ಬಳಿಕ ಅಧ್ಯಕ್ಷರ ನೇಮಕವನ್ನು ಎಲ್ಲರೂ ಸೇರಿಕೊಂಡು ನಿರ್ಧಾರ ಮಾಡುತ್ತೇವೆ. 15 ದಿನಕ್ಕೊಮ್ಮೆ ಇನ್ಮೇಲೆ ರೈತರ ಬಿಲ್ ಮಾಡಲಾಗುವುದು, ಇಲ್ಲಿನ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸ್ಯಾಲರಿ ಮಾಡಲಾಗುವುದು.ಕಬ್ಬು ನುರಿಸುವುದನ್ನು ಹೆಚ್ಚಿಗೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
Laxmi News 24×7