ಜೈ ಕಿಸಾನ್ ಹೋಲ್’ಸೇಲ್ ವೆಜಿಟೇಬಲ್ ಮರ್ಚಂಟ್ ಅಸೋಸಿಯೇಷನ್’ಗೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಶಾಕ್ ನೀಡಿದ್ದು, ಲೈಸೆನ್ಸ್ ನಿಬಂಧನೆಗಳನ್ನು ಉಲ್ಲಂಘಿಸಿ, ರೈತರ ಹಿತಾಸಕ್ತಿ ಕಾಪಾಡುವಲ್ಲಿ ಲೈಸೆನ್ಸ್’ದಾರರು ಕ್ರಮ ಕೈಗೊಳ್ಳದೇ ಹಿನ್ನೆಲೆ
ಲೈಸನ್ಸ್ ರದ್ಧುಗೊಳಿಸಿ ಎಪಿಎಂಸಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯ ಖಾಸಗಿ ಜೈ ಕಿಸಾನ್ ಹೋಲ್’ಸೇಲ್ ಭಾಜಿ ಮಾರ್ಕೇಟ್’ಗೆ ಕೃಷಿ ಮಾರಾಟ ಇಲಾಖೆಯೂ ಬಿಗ್ ಶಾಕ್ ನೀಡಿದೆ. ಈ ಮೊದಲೂ ಬುಡಾ ಭೂಪರಿವರ್ತನೆ ಆದೇಶವನ್ನು ರದ್ಧುಗೊಳಿಸಿದ ಹಿನ್ನೆಲೆ ಖಾಸಗಿ ಭಾಜಿ ಮಾರ್ಕೇಟಿನ ವ್ಯಾಪಾರಸ್ಥರಲ್ಲಿ ಗೊಂದಲ ಮೂಡಿತ್ತು. ನಂತರ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಮೋರೆ ಹೋದ ವ್ಯಾಪಾರಿಗಳು ದುಡುಕಿನ ನಿರ್ಣಯ ತೆಗೆದುಕೊಳ್ಳದಂತೆ ಆಗ್ರಹಿಸಿದ್ದರು. ಆದರೇ ಈಗ ಎಪಿಎಂಸಿ ನಿರ್ದೇಶಕರು ಹೊರಡಿಸಿದ ಆದೇಶ ವ್ಯಾಪಾರಿಗಳಲ್ಲಿ ಗೊಂದಲ ಮೂಡಿಸಿದೆ.
ಜೈ ಕಿಸಾನ್ ಹೋಲ್’ಸೇಲ್ ವೆಜಿಟೇಬಲ್ ಮರ್ಚಂಟ್ ಅಸೋಸಿಯೇಷನ್’ಗೆ ಖಾಸಗಿ ಮಾರುಕಟ್ಟೆ ಸ್ಥಾಪಿಸಿ ನಿರ್ವಹಿಸಲು ನೀಡಿರುವ ಲೈಸೆನ್ಸ್ ಹಾಗೂ ಲೈಸೆನ್ಸ್ ನಿಬಂಧನೆಗಳು ಪಾಲನೆಯಾಗುತ್ತಿಲ್ಲವೆಂದು ರೈತ ಸಂಘಟನೆಗಳಿಂದ ಬಂದ ಮನವಿಗಳು ಹಾಗೂ ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳ ತಂಡ ನೀಡಿದ ವರದಿ , ವಿಭಾಗೀಯ ಹೆಚ್ಚುವರಿ ನಿರ್ದೇಶಕರು, ಬೆಳಗಾವಿ ಮತ್ತು ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಳಗಾವಿ ಇವರು ಸಲ್ಲಿಸಿದ ಹಲವಾರು ಪರಿಶೀಲನಾ ವರದಿಗಳಲ್ಲಿನ ಅಂಶಗಳು ಮತ್ತು ಈ ಕಛೇರಿಗೆ ಸ್ವೀಕೃತವಾದ ಹಲವಾರು ಮನವಿಗಳು ಇವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ, ಲೈಸೆನ್ಸ್ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದು, ರೈತರ ಹಿತಾಸಕ್ತಿ ಕಾಪಾಡುವಲ್ಲಿ ಲೈಸೆನ್ಸ್’ದಾರರು ಕ್ರಮ ಕೈಗೊಳ್ಳದೇ ಇರುವುದು ದೃಢಪಟ್ಟಿರುತ್ತದೆ.
ಈ ಹಿನ್ನೆಲೆಯಲ್ಲಿ ನ್ಯಾಯೋಚಿತ ಹಾಗೂ ಕಾನೂನು ಉಚಿತ ನಿರ್ಣಯ ಕೈಗೊಳ್ಳುವುದು ಅಗತ್ಯವೆಂದು ಕಂಡುಬಂದಿದ್ದು, ಖಾಸಗಿ ಮಾರುಕಟ್ಟೆ ನಡೆಸಲು ಮಂಜೂರು ಮಾಡಿದ ಲೈಸೆನ್ಸ್’ನ್ನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 72-ಡಿ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಲೈಸೆನ್ಸನ್ನು ಈ ತಕ್ಷಣದಿಂದ ಜಾರಿಗೆ ಬರುವಂತ ರದ್ದುಗೊಳಿಸಲಾಗಿದೆ ಎಂದು ಎಪಿಎಂಸಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
Laxmi News 24×7