Breaking News

ದೇಶದಲ್ಲೇ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿದ ಜಿಲ್ಲೆಗಳಲ್ಲಿ ಬೆಳಗಾವಿ ಮುಂಚೂಣಿಯಲ್ಲಿದೆ: ಸಚಿವ ಸತೀಶ್‌ ಜಾರಕಿಹೊಳಿ

Spread the love

ದೇಶದಲ್ಲೇ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿದ ಜಿಲ್ಲೆಗಳಲ್ಲಿ ಬೆಳಗಾವಿ ಮುಂಚೂಣಿಯಲ್ಲಿದೆ: ಸಚಿವ ಸತೀಶ್‌ ಜಾರಕಿಹೊಳಿ
ನ್ಯೂಸ್​ಫಸ್ಟ್​ ಖಾಸಗಿ ವಾಹಿನಿಯ ಕೃಷಿ ದೇವೋಭವ ಹೆಸರಿನಡಿ ಕಬ್ಬು ಬೆಳಗಾರರ ವಿಚಾರ ಸಂಕಿರಣ ಕಾರ್ಯಕ್ರಮ
ಬೆಳಗಾವಿ: ದೇಶದಲ್ಲೇ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ 28 ಸಕ್ಕರೆ ಕಾರ್ಖಾನೆಗಳಿದ್ದು, ಇನ್ನು ನಾಲ್ಕೈದು ಕಾರ್ಖಾನೆಗಳು ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.
ನಗರದ ಕೆಎಲ್ಇ ಜೀರಗಿ ಹಾಲ್​ನಲ್ಲಿ ನ್ಯೂಸ್​ಫಸ್ಟ್​ ಖಾಸಗಿ ವಾಹಿನಿ ಅವರು ಹಮ್ಮಿಕೊಂಡಿದ್ದ ಕೃಷಿ ದೇವೋಭವ ಹೆಸರಿನಡಿ ಕಬ್ಬು ಬೆಳಗಾರರ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದು ಅವಶ್ಯಕ. ಏಕೆಂದರೆ ಇವತ್ತಿದ್ದ ವಿಚಾರಗಳು ಆರು ತಿಂಗಳ ಬಿಟ್ಟು ಇರುವುದಿಲ್ಲ. ತಂತ್ರಜ್ಞಾನ, ಮಾರುಕಟ್ಟೆ ವ್ಯವಸ್ಥೆ ಬದಲಾಗುತ್ತಿದೆ. ಅದರೊಂದಿಗೆ ನಾವು ಕೂಡ ಬದಲಾಗಬೇಕಿದೆ. ಅಂದಾಗ ಮಾತ್ರ ನಾವು ಯಶಸ್ವಿ ಕೃಷಿಕನಾಗಲು, ಉದ್ಯಮಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಜ್ಯಕ್ಕೆ ಅಗತ್ಯವಿರುವ ಸಕ್ಕರೆ ಉತ್ಪಾದನೆಯನ್ನು ಬೆಳಗಾವಿ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಷ್ಟೇ ಉತ್ಪಾದನೆ ಮಾಡುತ್ತಿವೆ. ಇದರೊಂದಿಗೆ ಎಥೆನಾಲ್, ವಿದ್ಯುತ್‌ ಕೂಡ ಉತ್ಪಾದನೆಯಾಗುತ್ತಿದೆ ಎಂದ ಸಚಿವರು, ಇಂದು ನ್ಯೂಸ್​ಫಸ್ಟ್​ ಖಾಸಗಿ ವಾಹಿನಿಯವರು ರೈತರಿಗಾಗಿ ಕಬ್ಬು ಬೆಳೆಯ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಂಡಿವುದು ಸಂತಸದ ವಿಚಾರವೆಂದು ತಿಳಿಸಿದರು.
ಕಬ್ಬು ಹೆಚ್ಚು ಇಳುವರಿ ಆದಾಗ ಮಾತ್ರ ಗುಣಮಟ್ಟದ ಕಬ್ಬು ಬೆಳೆಯಲು ಸಾಧ್ಯ. ಆ ದಿಸೆಯಲ್ಲಿ ನಿವು ಪ್ರಯತ್ನ ಮಾಡಬೇಕು. ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಪ್ರಗತಿಪರ ರೈತರಾಗಬೇಕು. ರೈತರ ಪ್ರಗತಿಗೆ ಸರ್ಕಾರದ ಬೆಂಬಲ ಸದಾ ಇದೆ ಎಂದರು ಇದೇ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಗೋದಾವರಿ ಬಯೋ ರಿಫೈನರಿಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಬಾಲಚಂದ್ರ ಆರ್.
“ಬಕ್ಷಿ , ನ್ಯೂಸ್ ಪಸ್ಟ್ ಖಾಸಗಿ ವಾಹಿನಿ ಎಂಡಿ ಎಸ್. ರವಿಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ. ಕೋಳೆಕರ್ ಸೇರಿದಂತೆ ಸಾವಿರಾರೂ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ