Breaking News

ಹಾವೇರಿ ಹೈವೇಯಲ್ಲಿ ಡ್ಯಾನ್ಸ್​ ಮಾಸ್ಟರ್​ ಮೃತದೇಹ ಪತ್ತೆ

Spread the love

ಹಾವೇರಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ರೀತಿಯಲ್ಲಿ ಯುವಕನ ಮೃತದೇಹ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ‌ ಮೋಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ಪತ್ತೆಯಾಗಿದೆ. ಮೃತ ಯುವಕನನ್ನು ಚಿತ್ರದುರ್ಗದ 25 ವರ್ಷದ ಡ್ಯಾನ್ಸ್​ ಮಾಸ್ಟರ್​ ಲಿಂಗೇಶ್ ಎಂದು ಗುರುತಿಸಲಾಗಿದೆ.

ಯುವಕನ ಮೃತದೇಹದ ಬಳಿ ಆತ ತಂದಿದ್ದ ಕೆಟಿಎಂ ಡ್ಯೂಕ್ ಬೈಕ್, ವಾಟರ್ ಬಾಟಲ್, ಸಿಗರೇಟ್ ಪ್ಯಾಕ್ ಸಹಿತ ಚಾಕು ದೊರೆತಿದೆ. ಲಿಂಗೇಶನನ್ನು ಕೊಲೆ ಮಾಡಲಾಗಿದೆ ಎಂದು ಆತನ ಸಂಬಂಧಿಕರು ಆರೋಪಿಸಿದ್ದಾರೆ.

ಮೃತ ಲಿಂಗೇಶ್ ಭಾನುವಾರ ಲಾಂಗ್ ಡ್ರೈವ್ ಹೋಗಿ ಬರುವುದಾಗಿ ತಮ್ಮ ಕುಟುಂಬಸ್ಥರಿಗೆ ಹೇಳಿ ತೆರಳಿದ್ದ. ಆ. 24 ರಂದು ಹುಬ್ಬಳ್ಳಿಗೂ ಸಹ ತೆರಳಿದ್ದ. ಮೋಟೆಬೆನ್ನೂರು ಬಳಿಯ ಹೈವೇ ಫ್ಲೈ ಓವರ್ ಮೇಲೆ ಲಿಂಗೇಶ್ ಶವ ಪತ್ತೆಯಾಗಿದೆ. ಸ್ಥಳಕ್ಕೆ ಹಾವೇರಿ ಎಸ್​ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಓವರ್ ಬ್ರಿಡ್ಜ್ ಬಳಿ ಯಾರೋ ಕುಡಿದು ಗಾಡಿ ಓಡಿಸಿ, ಬೈಕ್ ಸಮೇತ ಬಿದ್ದು ಸತ್ತಿರಬಹುದು ಎಂದು ಸ್ಥಳೀಯರು ಪೊಲೀಸರಿಗೆ ಸೋಮವಾರ ಮುಂಜಾನೆ ಸುದ್ದಿ ಮುಟ್ಟಿಸಿದ್ದರು. ಕೆಲವರು ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಈತ ಸತ್ತಿರಬಹುದು ಎಂದರೆ, ಇನ್ನೂ ಕೆಲವರು ಯಾವುದೋ ಅಪರಿಚಿತ ವಾಹನ ಡಿಕ್ಕಿ ಮಾಡಿ ಪರಾರಿಯಾಗಿರುವ ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರಿಗೆ ಇದು ಅಪಘಾತವಲ್ಲ, ಕೊಲೆ ಎನ್ನುವುದು ಗೊತ್ತಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ