Breaking News

ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯ ಉದ್ಘಾಟನೆ

Spread the love

ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಸಾಹಸಮಯ ಜೀವನ ಮತ್ತು ತ್ಯಾಗವನ್ನು ಸ್ಮರಿಸಿ, ಹೊನಕುಪ್ಪಿ ಹಾಗೂ ಸಿದ್ದಾಮರಹಳ್ಳಿ ಗ್ರಾಮದ ಸಮಸ್ತ ನಾಗರಿಕರ ಧನಸಹಾಯದಿಂದ ಈ ಮೂರ್ತಿ ಪ್ರತಿಷ್ಠಾಪನೆಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು, ಪರಮ ಪೂಜ್ಯ ಶ್ರೀ ಬಿಳಿಯಾನಸಿದ್ದ ಸ್ವಾಮೀಜಿ ಶ್ರೀ ಯೋಗಿಸಿದ್ದೇಶ್ವರ ಆಶ್ರಮ, ಸುಕ್ಷೇತ್ರ ಜೋಕಾನ ಅವರು ಹಾಗೂ ಪರಮ ಪೂಜ್ಯ ಶ್ರೀ ವಿಳ್ಳಲದೇವಋಷಿ ಶ್ರೀ ವಿದ್ಧಲ ಬೀರದೇವರ ದೇವಸ್ಥಾನ, ಕೌಜಲಗಿ ಇವರು ವಹಿಸಿದ್ದರು.
ಈ‌ ವೇಳೆ ಸಹೋದರ ಹಾಗೂ ಮುಖಂಡರಾದ ಶ್ರೀ ಸರ್ವೋತ್ತಮ ಜಾರಕಿಹೊಳಿ, ಕಮಿಟಿಯ ಅಧ್ಯಕ್ಷರಾದ ಡಾ. ಹಣಮಂತ ಭೀ. ಸಿದ್ದಾಪೂರ, ಕಮಿಟಿಯ ಉಪಾಧ್ಯಕ್ಷರಾದ ಶ್ರೀ ಕೃಷ್ಣಾ ಯ. ಸೂರನ್ನವರ, ಮುಖಂಡರಾದ ಶ್ರೀ ಪ್ರಕಾಶ ಹಾಗೂ ಸದಸ್ಯರು ‌ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ