ಬೆಂಗಳೂರು, ಆಗಸ್ಟ್ 19: ಕೆಲವರು ಎಷ್ಟೇ ಓದಿಕೊಂಡಿರಲಿ, ತಮ್ಮ ಆಸಕ್ತಿಯನ್ನೇ ವೃತ್ತಿಯಾಗಿ ಬದಲಾಯಿಸಿಕೊಳ್ಳುತ್ತಾರೆ. ಹೀಗಾಗಿ ತಮಗೆ ಏನು ಇಷ್ಟವೋ ಆ ಕಾಯಕದಲ್ಲೇ ತೊಡಗಿ ಬದುಕು ಕಟ್ಟಿಕೊಂಡವರನ್ನು ನೀವು ನೋಡಿರಬಹುದು.
ಆದರೆ ಈ ಯುವತಿಗೆ ವಾಹನ ಓಡಿಸುವುದೆಂದರೆ ಅದೇನೋ ಕ್ರೇಜ್. ಈ ಆಸಕ್ತಿಯನ್ನೇ ವೃತ್ತಿಯಾಗಿಸಿಕೊಂಡು ಬೆಂಗಳೂರಿನಲ್ಲಿ (Bengaluru) ಆಟೋ ಓಡಿಸುತ್ತಿದ್ದಾಳೆ ಈ ಯುವತಿ. ಈಕೆಯ ಹೆಸರು ಸಫುರಾ. ತಮನ್ನಾ ತನ್ವೀರ್ (Tamanna Tanveer) ಎನ್ನುವವರು ಇನ್ಸ್ಟಾಗ್ರಾಮ್ನಲ್ಲಿ ಈ ಯುವತಿಯ ಬಗೆಗಿನ ಸ್ಟೋರಿ ಹಂಚಿಕೊಂಡಿದ್ದು,
ಸದ್ಯಕ್ಕೆ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇನ್ಫ್ಲುಯೆನ್ಸರ್ ತಮನ್ನಾ ತನ್ವೀರ್ @tamannapasha official ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಯುವತಿಯ ವಿಡಿಯೋ ಹಂಚಿಕೊಂಡು, ಈಕೆಯ ಆಟೋದಲ್ಲಿ ಪ್ರಯಾಣ ಬೆಳೆಸಿದ್ದು ಇದೇ ಮೊದಲು, ಸಫುರಾ.ಎಂಬ ಯುವತಿಯು ಆಸಕ್ತಿಯನ್ನು ವೃತ್ತಿಯಾಗಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾಳೆ.
ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಉಬರ್ , ಓಲಾ ಅಥವಾ ರ್ಯಾಪಿಡೊ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೆ, ಆದರೆ ವಿಫಲನಾದೆ. ಯುವತಿಯೊಬ್ಬಳು ಓಡಿಸುತ್ತಿದ್ದ ಆಟೋದಲ್ಲಿ ನಾನು ಕುಳಿತಿದ್ದು ಇದೇ ಮೊದಲು. ನಾನು ಅವಳಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ನಿರ್ಧರಿಸಿದೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.
Laxmi News 24×7