Breaking News

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜನರನ್ನು ಜೈಲಿಗೆ ಸೇರಿಸಲು ಜೈಲು ನಿರ್ಮಾಣ: ಮೈತ್ರೇಯಿಣಿ ಗದಿಗೆಪ್ಪಗೌಡರ!!

Spread the love

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜನರನ್ನು ಜೈಲಿಗೆ ಸೇರಿಸಲು ಜೈಲು ನಿರ್ಮಾಣ: ಮೈತ್ರೇಯಿಣಿ ಗದಿಗೆಪ್ಪಗೌಡರ!!
ಸ್ವಾತಂತ್ರ್ಯೋವ ಸಂಭ್ರಮದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ
ಸ್ವಾತಂತ್ರ್ಯಕ್ಕಾಗಿ ಹೊರಾಡುವುದು ಎಂದರೆ ದೇಶ ವಿರೋಧಿಗಳು
ಬೆಳಗಾವಿ ಜಿಲ್ಲೆಯ ಕೊಡುಗೆ ಬಹಳಷ್ಟಿದೆ: ಮೈತ್ರೇಯಿಣಿ ಗದಿಗೆಪ್ಪಗೌಡರ
ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜನರನ್ನು ಜೈಲಿಗೆ ಸೇರಿಸಲು 100 ವರ್ಷಗಳಿಂದೆ ಬ್ರಿಟಿಷರುಗಳು ಯಾಕೆ ಜೈಲು ನಿರ್ಮಾಣ ಮಾಡಿದ್ದರು ಎಂದು ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆ ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಭಾ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಳಗಾವಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಹಾಗೂ ಕಾಲೇಜು ಐ,ಕ್ಯೂ.ಎ.ಸಿ ಘಟಕ ಮತ್ತು ಕನ್ನಡ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಸ್ವಾತಂತ್ರ್ಯೋವ ಸಂಭ್ರಮದ ಪ್ರಯುಕ್ತ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಮಾತನಾಡಿದ, ಸದಸ್ಯೆ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು, ಬ್ರಿಟಿಷರ್ ದೃಷ್ಠಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೊರಾಡುವುದು ಎಂದರೆ ದೇಶ ವಿರೋಧಿಗಳು, ಈ ದೇಶದಲ್ಲಿ ಭಗತಸಿಂಗ್ ಆದಿಯಾಗಿ ಸಂಗೋಳ್ಳಿ ರಾಯಣ್ಣನ ತನಕ ಅನೇಕರು ಹೋರಾಟ ನಡೆಸಿದ್ದಾರೆ.
ಅಗಷ್ಟ 15 ಸಂಗೋಳ್ಳಿ ರಾಯಣ್ಣ ಅವರ ಜನ್ಮ ದಿನವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ನೀಡುತ್ತಿದ್ದ ಪಾನಾ ಪಾನಿ ಶಿಕ್ಷೆಯನ್ನು ಅನುಭವಿಸಿದವರು ಮೊಟ್ಟ ಮೊದಲಿಗರು ಬೆಳಗಾವಿಯವರು, ಭಾರತದ ಇತಿಹಾಸವನ್ನು ಪುನಃರ ಕಲ್ಪಿಸಿಕೂಡುವುದರಲ್ಲಿ ಬೆಳಗಾವಿ ಜಿಲ್ಲೆಯ ಕೊಡುಗೆ ಬಹಳಷ್ಟಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚನ್ನಮ್ಮನ ಅಂಗರಕ್ಷರು, ಸೈನಿಕರು, ಕಿತ್ತೂರು ಕಲಿಗಳ ಪಾತ್ರ ಪ್ರಮುಖವಾಗಿದೆ. ಮನೆ, ಮನೆಯಲ್ಲಿ ಒಬ್ಬರು ಚೆನ್ನಮ್ಮನಾಗಿ ಹೋರಾಡಿದ ನೆಲ ಇದಾಗಿದೆ ಎಂದರು….
ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎನ್.ಆರ್.ಪಾಟೀಲ, ಯ.ರು.ಪಾಟೀಲ, ಡಾ. ಬಸಮ್ಮ ಗಂಗನ್ನಹಳ್ಳಿ, ಡಾ. ಜಯಶೀಲ ಜಿ., ಶಿವರಾಜ ಅರಳಿ, ಕರಿಯಪ್ಪ ಎನ್., ಎಲ್.ಎನ್.ಮುಕುಂದರಾಜ್ ಸೇರಿದಂತೆ ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಹಾಜರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ