ಕೇವಲ ಐದನೂರು ರೂಪಾಯಿ ಹಣಕ್ಕಾಗಿ ಸ್ನೇಹಿತನ ಹತ್ಯೆ
ಕೇವಲ ಐದನೂರು ರೂಪಾಯಿ ಹಣಕ್ಕಾಗಿ ಸ್ನೇಹಿತನ ಮನೆಗೆ ನುಗ್ಗಿ ತಾಯಿ ಸಮ್ಮುಖದಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡಿಸಿ ಕೊಲೆ ಮಾಡಿರುವ ಘಟನೆ ಜರುಗಿದೆ,
ಕೇವಲ ಐದನೂರು ರೂಪಾಯಿಗೆ ಸ್ನೇಹಿತನ ಮನೆಗೆ ನುಗ್ಗಿ ತಾಯಿ ಸಮ್ಮುಖದಲ್ಲಿ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ನಿವಾಸಿ ಹುಸೇನ್ ತಾಶೇವಾಲೆ(45) ಕೊಲೆಯಾದ ದುರ್ದೈವಿ. ಆರೋಪಿಗಳಾದ ಮಿಥುನ ಕುಬಜಿ, ಮನೋಜ್ ಇಂಗಳೆಯಿಂದ ಕೃತ್ಯ ಎಸಗಿದ್ದಾರೆ.
ಗುಜರಿ ಸಾಮಗ್ರಿ ವಿಚಾರಕ್ಕೆ ಸ್ನೇಹಿತರ ಮಧ್ಯೆ ಗಲಾಟೆ. ಮೃತ ಹುಸೇನ್ ಆರೋಪಿಗಳಿಗೆ ಐದನೂರು ರೂಪಾಯಿ ನೀಡಬೇಕಿತ್ತು. ಹಣ ಕೇಳಲು ಹುಸೇನ್ ಮನೆಗೆ ಹೋದಾಗ ವಾಗ್ವಾದ ನಡೆದು ಗಲಾಟೆಯಾಗಿದೆ. ಈ ವೇಳೆ ಕೈಯಿಂದ ಹೊಡೆದು, ಕಾಲಿಂದ ಒದ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.ಹೊಟ್ಟೆ ಭಾಗದಲ್ಲಿ ಬಲವಾಗಿ ಪೆಟ್ಟಾಗಿದ್ದರಿಂದ ಹುಸೇನ್ ಮೃತಪಟ್ಟಿದ್ದಾನೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮೃತ ವ್ಯಕ್ತಿಯ ಸಹೋದರ ಇಮ್ರಾನ ತಾಶೇವಾಲೆ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಮನೆಯಲ್ಲಿ ಇರುವಾಗ 12 ಗಂಟೆ ಸುಮಾರಿಗೆ ಮನೆಗೆ ಬಂದು ಹಣ ನೀಡುವಂತೆ ಎಕಾಎಕಿ ಹೊಡಯಲು ಆರಂಭಿಸಿದ್ದಾನೆ. ಈ ಸಂದರ್ಭದಲ್ಲಿ ನನ್ನ ತಾಯಿ ಬಿಡಿಸಲು ಹೊದಾಗ ಅಮ್ಮಾ ನಿಂಗೆ ಹೊಡೆಯಲ್ಲ ಹೋಗು, ಹಣ ತೆಗೆದುಕೊಂಡವನಿಗೆ ಹೊಡೆಯುತ್ತೇನೆ ಎಂದು ಹೊಡೆದು, ಸಂಜೆ 5ಕ್ಕೆ ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ ಎಂದರು.
ಮೃತ ವ್ಯಕ್ತಿಯ ತಾಯಿ ಖೈರೂನಬಿ ತಾಶೇವಾಲಿ ಮಾದ್ಯಮಗಳೊಂದಿಗೆ ಮಾತನಾಡಿ, ಸಾಮಾನು ತಯಾರಿಸಲು ಹಣ ನೀಡಿ ಮಾಡಿ ಕೊಡಲು ಹೇಳಿದ್ದಾನೆ. ಇವನು ಗುರುವಾರ ರಾತ್ರಿ ಇವನು ಸರಾಯಿ ಕುಡಿದು ಬಂದಿದ್ದಾನೆ. ಶುಕ್ರವಾರ ಮಧ್ಯಾಹ್ನ 12ರ ಸುಮಾರಿಗೆ ಮನೆಗೆ ಬಂದು ರೊಕ್ಕ ಕೋಡು ಎಂದಾಗ ನಾನು ಯಾರ ಹತ್ತಿರವಾದರು ಇಸಿದು ತಂದು ಕೊಡುತ್ತಾನೆ ಎಂದಾಗ ಧಮ್ಕಿ ಕೊಟ್ಟು ಹೊಡೆಯಲು ಆರಂಭಿಸಿದ್ದ, ನನ್ನ ತಲೆ ಕೊದಲನ್ನು ಎಳೆದಾಡಿದ್ದಾನೆ ಎಂದರು
Laxmi News 24×7