Breaking News

ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ್ ಚುನಾವಣೆಯನ್ನು ಈ ವರ್ಷಾಂತ್ಯದಲ್ಲಿ ‌ಮಾಡುತ್ತೇವೆ. ಮೀಸಲಾತಿ ಪ್ರಕ್ರಿಯೇ ನಡೆಯುತ್ತಿದೆ

Spread the love

ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ್ ಚುನಾವಣೆಯನ್ನು ಈ ವರ್ಷಾಂತ್ಯದಲ್ಲಿ ‌ಮಾಡುತ್ತೇವೆ.
ಮೀಸಲಾತಿ ಪ್ರಕ್ರಿಯೇ ನಡೆಯುತ್ತಿದೆ
ಎರಡ್ಮೂರು ತಿಂಗಳಲ್ಲಿ ನೋಟಿಫಿಕೇಶನ್ ಆಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ‌ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ‌ಅವರು, ಮೀಸಲಾತಿಯನ್ನು ‌ಮಾಡುತ್ತೇವೆ ಎಂದು ಹೈಕೋರ್ಟ್ ಮುಂದೆ ಒಪ್ಪಿದ್ದೇವೆ. ಅದರ ಆಂತರಿಕ ‌ಕೆಲಸ ನಡೆಯುತ್ತಿದೆ. ಈ ವರ್ಷದಲ್ಲಿಯೆ ನಾವು ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ಮಾಡುತ್ತೇವೆ ಎಂದರು.
ಸವದತ್ತಿ ಶಾಲೆಯ ನೀರಿನ ಟ್ಯಾಂಕ್ ನಲ್ಲಿ ವಿಷ ಹಾಕಿದ ಪ್ರಕರಣದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್‌ ವಿಷ ಬಿಜ ಬಿತ್ತೋ ಕೆಲಸ ಮಾಡುತ್ತಿದೆ. ಶಾಲೆ ಮುಖ್ಯೋಪಾಧ್ಯಾಯನ ವರ್ಗಾವಣೆಗೆ ವಿಷ ಹಾಕ್ತಾರೆ ಇವರೇನು ಮನುಷ್ಯರಾ ? ವಿಷ ಹಾಕಿದವರು ಶ್ರೀರಾಮಸೇನೆ ಅಧಿಕೃತ ಪದಾಧಿಕಾರಿಗಳು.ಯಾಕೆ ಬಿಜೆಪಿಯವರು ಈ ಘಟನೆ ಬಗ್ಗೆ ಮಾತನಾಡುತ್ತಿಲ್ಲ. ಈ ಬಿಜೆಪಿಯವರು ಎಲ್ಲಿ ಇದ್ದಾರೆ. ಕೋಮು ವಿಷ ಬೀಜ ಬಿತ್ತುತ್ತಿರುವದರ ಪರಿಣಾಮವಾಗಿ ಇಂತ ಘಟನೆಯಾಗುತ್ತಿವೆ. ಚಿಕ್ಕ ಮಕ್ಕಳನ್ನು ಬಲಿ ತಗೆದುಕೊಳ್ಳುತ್ತಾರೆ ಅಂದ್ರೆ ಮನುಷ್ಯರಾ. ಈ ಬಗ್ಗೆ ಆರ್ ಅಶೋಕ, ಬಸವರಾಜ್ ಬೊಮ್ಮಾಯಿ, ಅರವಿಂದ ಬೆಲ್ಲದ ಅವರನ್ನು ಕೇಳಿ ಎಂದರು.
ಟ್ರಂಪ್ ತೆರಿಗೆ ಹಾಕಿದ್ರು ಕಾಂಗ್ರೆಸ್ ಉತ್ತರ ಕೊಡಬೇಕು. ಸುಪ್ರೀಂಕೋರ್ಟ್ ‌ಹೇಳಿದರು ಕಾಂಗ್ರೆಸ್ ಉತ್ತರ ಕೊಡಬೇಕು. ಶ್ರೀರಾಮ ಸೇನೆ, ಆರ್ ಎಸ್ ಎಸ್ ಏನೇ ಮಾಡಿದರು ‌ಕಾಂಗ್ರೆಸ್ ಉತ್ತರ ಕೊಡಬೇಕು. ಬಿಜೆಪಿ ‌ನಾಯಕರ‌ ಬಾಯಿಗೆ ಬೀಗ ಬಿದಿದ್ದೆಯಾ ಎಂದು‌ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಗೆ ಸುಪ್ರೀಂ ತರಾಟೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಅರುಣಾಚಲ ಪ್ರದೇಶದ ಬಿಜೆಪಿ ಸಂಸದರೇ ಹೇಳುತ್ತಿದ್ದಾರೆಮ
ಚೀನಾದವರು 50-60 ಕಿಮೀ ನಮ್ಮ ದೇಶದ ಒಳಗಡೆ ಬಂದಿದ್ದಾರೆ ಅಂತ ಗಡಿಭಾಗದ ಹಳ್ಳಿ ಜನ ಹೇಳ್ತಿದ್ದಾರೆ.
ಆ ಭಾಗದ ಸಂಸದರು ಕೂಡ ಹೇಳ್ತಿದ್ದಾರೆ. ಆದ್ರೂ‌ ಕೂಡ ನಂಬುತ್ತಿಲ್ಲ ಎಂದರು. ದೇಶ ದ್ರೋಹಿಗಳು ಯಾರು ದೇಶ ಭಕ್ತರು ಯಾರು ಎಂಬ ಸರ್ಟಿಫಿಕೇಟ್ ‌ತಗೆದುಕೊಳ್ಳಬೇಕಾ‌ ಎಂದರು.
ಬಾಗಲಕೋಟ ಜಿಲ್ಲೆಯಲ್ಲಿ ಶಿಕ್ಷಕಿಯಿಂದ ವಿದ್ಯಾರ್ಥಿಗೆ ಜಾತಿ ನಿಂದನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಅದು ಸರ್ಕಾರಿ ನೌಕರರು ಇರಲಿ, ಯಾರೇ ಇರಲಿ ಜಾತಿ‌ನಿಂದನೆ ಮಾಡುವ ಹಕ್ಕು ಯಾರಿಗೂ ಕೊಟ್ಟಿಲ್ಲ ಎಂದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ