ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆ
ಜಿಪಂ ಸಿಇಒ ಶಶಿಧರ ಕುರೇರ ಅವರಿಂದ ವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹ
ಸರಕಾರಿ ಶಾಲೆಗಳ ಸಾಧನೆಗೆ ಮೆಚ್ಚುಗೆವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹಜಿಪಂ ಸಿಇಒ ಶಶಿಧರ ಕುರೇರ ಅವರಿಂದ ಕಾರ್ಯಶಾಲಾ ಶಿಕ್ಷಕರಿಂದ ಕುರೇರ ಕಾರ್ಯಕ್ಕೆ ಶ್ಲಾಘನೆ

ಬೀಳಗಿ ತಾಲೂಕಿನ ಕೊಪ್ಪ ಎಸ್.ಆರ್. ಗ್ರಾಮದ ಸರ್ಕಾರಿ ಆದರ್ಶ ಪ್ರೌಢ ಶಾಲೆ, ಮುಧೋಳ ತಾಲೂಕಿನ ಶಿರೋಳ ಗ್ರಾಮ ಹಾಗೂ ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗಳು — ಶಿಕ್ಷಣದ ಗುಣಮಟ್ಟ, ಶ್ರೇಷ್ಠ ಫಲಿತಾಂಶ, ಕಲಿಕಾ ವಾತಾವರಣ, ಸ್ವಚ್ಛತೆ ಹಾಗೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಗಳಿಂದ ಮಾದರಿಯಾಗಿವೆ. ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಶೈಕ್ಷಣಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ವೇಳೆ, ಈ ಮೂರು ಶಾಲೆಗಳಿಗೆ ತಲಾ ₹10,000ರಷ್ಟು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಈ ವೇಳೆ ಮಾತನಾಡಿದ ಜಿ. ಪಂ. ಸಿಇಒ ಶಶಿಧರ್ ಕುರೇರ ಅವರು “ಶಾಲೆಗಳ ಸಾಧನೆಯನ್ನು ಗುರುತಿಸುವುದು ಮತ್ತು ಉತ್ತಮ ಕಾರ್ಯವೈಖರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ. ಇವು ಇತರ ಶಾಲೆಗಳಿಗೆ ಮಾದರಿಯಾಗಲಿ ಎಂಬ ಆಶಯದಿಂದ ಈ ಬಹುಮಾನವನ್ನು ನೀಡಲಾಗಿದೆ.ಎಂದರು.

ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು, ಬಿಇಒಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
Laxmi News 24×7