Breaking News

ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆ ಆರೋಪ; ಕಾಂಗ್ರೆಸ್ ಮುಖಂಡ ಅರೆಸ್ಟ್!!!

Spread the love

ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆ ಆರೋಪ; ಕಾಂಗ್ರೆಸ್ ಮುಖಂಡ ಅರೆಸ್ಟ್!!!
ಮಾಜಿ ಕೇಂದ್ರ ಸಚಿವರ ಪುತ್ರಿಯ ಆಸ್ತಿಗೆ ಕನ್ನ ಹಾಕಿದ್ರಾ???!!
ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಆಯೂಬ್ ಪಾರ್ಥನಹಳ್ಳಿ ಅವರನ್ನು ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬೆಳಗಾವಿಯ ಆಜಂನಗರ ನಿವಾಸಿಯಾಗಿದ್ದು, ಆಸ್ತಿ ಹಗರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಬಿ. ಶಂಕರಾನಂದ ಅವರ ಪುತ್ರಿ ಡಾ. ಜಯಶ್ರೀ ಅವರಿಗೆ ಸೇರಿದ ಬೆಳಗಾವಿಯ ಸದಾಶಿವನಗರದಲ್ಲಿನ ಐದು ಗುಂಟೆಯ ಜಾಗವನ್ನು ನಕಲಿ ದಾಖಲೆಗಳ ಆಧಾರದಲ್ಲಿ ಸುನೀಲ ತಳವಾರ ಎಂಬಾತ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದ. ನಂತರ ಈ ಆಸ್ತಿಯನ್ನು ಆಯೂಬ್ ಪಾರ್ಥನಹಳ್ಳಿ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು.
ಡಾ. ಜಯಶ್ರೀ ಅವರ ಪುತ್ರಿ ರೋಹಿನಿ ಅವರು ಆಸ್ತಿಗೆ ತೆರಿಗೆ ಪಾವತಿಸಲು ಬೃಹತ್ ಮಂಡಳಿಗೆ ಹೋದಾಗ, ಆಸ್ತಿ ಈಗಾಗಲೇ ಬೇರೆಯವರ ಹೆಸರಿಗೆ ವರ್ಗವಾಗಿದೆ ಎಂಬುದು ಸ್ಪಷ್ಟವಾಯಿತು. ತಕ್ಷಣವೇ ಅವರು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಪೊಲೀಸ್ ತನಿಖೆಯ ನಂತರ ಸುನೀಲ ತಳವಾರನನ್ನು ಬಂಧಿಸಲಾಗಿದ್ದು, ಬಳಿಕ ಕಾಂಗ್ರೆಸ್ ಮುಖಂಡ ಆಯೂಬ್ ಪಾರ್ಥನಹಳ್ಳಿಯನ್ನೂ ಬಂಧಿಸಲಾಗಿದೆ.ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ